ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್‌ನ ಅಟ್ಟಹಾಸ ಹೆಚ್ಚಾಗಿದೆ. ಈ ಮಧ್ಯೆ ರೆಮ್ಡೆಸಿವಿರ್ ಔಷಧಿಯನ್ನ ಬ್ಲಾಕ್​ನಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಸಾಕಷ್ಟು ವರದಿಯಾಗಿದೆ. ಈ ಹಿನ್ನೆಲೆ ಇಂದು ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ರೆಮ್ಡೆಸಿವಿರ್ ಕುರಿತಾಗಿ ವಿಶೇಷ ಸಭೆ ನಡೆಸಿದ್ರು. ಈ ವೇಳೆ ಅವರು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ರೆಮ್ಡೆಸಿವಿರ್​ ಬಗ್ಗೆ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ
ರಾಜ್ಯದಲ್ಲಿ ಇಂದು ಕೊರೊನಾ ಸೋಂಕು ವ್ಯಾಪಕವಾಗಿದೆ. ಇದು ಅತ್ಯಂತ ಕ್ಲಿಷ್ಟಕರವಾದ ಸಂದರ್ಭ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ನಮ್ಮ ಜೊತೆಗೆ ನಿಂತಿದೆ. ಅದ್ರೆ, ಕೆಲ ಅಧಿಕಾರಿಗಳು ರೆಮ್ಡೆಸಿವಿರ್​ ಡೋಸ್‌ಗಳನ್ನು ಅನ್ಯ ರಾಜ್ಯಗಳಿಗೆ ಕಳುಹಿಸುತ್ತಿದ್ದಾರೆ ಎಂಬ ಮಾಹಿತಿ ನಮಗೆ ಬಂದಿದೆ. ನಾನು ಇದರ ಬಗ್ಗೆ ತನಿಖೆ ಮಾಡಿಸುತ್ತೇನೆ. ಇದರಲ್ಲಿ ಯಾರನ್ನೂ ಕಾಪಾಡುವ ಮಾತಿಲ್ಲ ಎಂದು ಸಭೆಯಲ್ಲಿ ಸಿಎಂ ಖಡಕ್​ ಆಗಿ ನುಡಿದಿದ್ದಾರೆ.

ನಾನು‌ ಇಂದು ಸಭೆ ಕರೆದಿರುವುದೇ ರೆಮ್ಡೆಸಿವಿರ್ ಬಗ್ಗೆ ಅರಿಯಲು. ನನಗೂ ಮಾಹಿತಿ ಇದೆ. ನಾನು ಇದನ್ನು ತನಿಖೆಗೆ ವಹಿಸಿದರೇ, ಸತ್ಯ ಹೊರ ಬರುತ್ತದೆ. ಯಾವುದೇ ಅಧಿಕಾರಿಗಳು ಇದರಲ್ಲಿ ಭಾಗಿಯಾದ್ರೆ ಪರಿಣಾಮ ಭೀಕರವಾಗಿರಲಿದೆ. ಇದನ್ನೇ ಎಚ್ಚರಿಕೆ ಎಂದು ಭಾವಿಸಿ. ಮುಂದೆ ಜನರ ಸೇವೆಗೆ ಬದ್ಧರಾಗಿರಿ. ಇಲ್ಲವಾದ್ರೆ, ತನಿಖೆ ಮಾಡಿಸಿ ಎಲ್ಲವನ್ನೂ ಬಯಲಿಗೇಳೆಯುತ್ತೇನೆ‌. ಯಾವುದೇ ಅಧಿಕಾರಿಗಳನ್ನು ಕಾಪಾಡುವುದಿಲ್ಲ. ಎಚ್ಚರಿಕೆಯಿಂದ ಕೆಲಸ ಮಾಡಿ ಎಂದು ಯಡಿಯೂರಪ್ಪ ಅಧಿಕಾರಿಗಳಿಗೆ ವಾರ್ನಿಂಗ್ ಕೊಟ್ಟಿದ್ದಾರೆ ಅಂತ ತಿಳಿದುಬಂದಿದೆ.

The post ತನಿಖೆ ಮಾಡಿಸ್ತೀನಿ, ಯಾರನ್ನೂ ಸುಮ್ನೆ ಬಿಡಲ್ಲ -ರೆಮ್ಡೆಸಿವಿರ್​ ಬ್ಲಾಕ್ ಮಾರಾಟದ ಬಗ್ಗೆ ಅಧಿಕಾರಿಗಳಿಗೆ ಸಿಎಂ ವಾರ್ನಿಂಗ್ appeared first on News First Kannada.

Source: newsfirstlive.com

Source link