ತನ್ನಲ್ಲಿ ಕೆಲಸ ಮಾಡುವ ಉದ್ಯೋಗಿಯೊಬ್ಬರಿಗೆ ರೂ. 45 ಲಕ್ಷ ಬೆಲೆಯ ಕಾರನ್ನು ಗಿಫ್ಟ್ ಮಾಡಿದರು ಕೇರಳದ ಒಬ್ಬ ವ್ಯಾಪಾರಿ!! | A Malayalee businessman gifts luxury car worth Rs 45 lakhs to one of his employees!! ARB


ಸೂರತ್ ನಗರದ ಒಬ್ಬ ವಜ್ರ ವ್ಯಾಪಾರಿ ತಮ್ಮಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಪ್ರತಿವರ್ಷ ದೀಪಾವಳಿಯ ಸಂದರ್ಭದಲ್ಲಿ ಫ್ಲ್ಯಾಟ್, ಕಾರು ಮೊದಲಾದ ಐಷಾರಾಮಿ ಗಿಫ್ಟ್ (expensive gift) ನೀಡುವುದು ನಿಮಗೆ ಗೊತ್ತಿದೆ. ಕೇರಳದಲ್ಲೂ ಹಾಗೆ ಔದಾರ್ಯ ಪ್ರದರ್ಶಿಸುವ ವ್ಯಾಪಾರಿಯೊಬ್ಬರಿದ್ದಾರೆ. ಇತ್ತೀಚಿಗೆ, ತಮ್ಮೊಂದಿಗೆ 22 ವರ್ಷಗಳಿಂದ ಕೆಲಸ ಮಾಡುತ್ತಿರುವ ಉದ್ಯೋಗಿಯೊಬ್ಬರಿಗೆ ಮರ್ಸಿಡಿಸ್-ಬೆಂಜ್ ಜಿ ಎಲ್ ಎ ಕ್ಲಾಸ್ 220 ಡಿ (Mercedes-Benz GLA Class 220 D) ಕಾರನ್ನು ಅವರು ಉಡುಗೊರೆಯಾಗಿ ನೀಡಿದ್ದಾರೆ. ಅಂದಹಾಗೆ, ಔದಾರ್ಯವಂತ ಬಿಸಿನೆಸ್ ಮನ್ ಹೆಸರು ಎಕೆ ಶಾಜಿ (AK Shaji) ಮತ್ತು ಅವರಿಂದ ದುಬಾರಿ ಉಡುಗೊರೆ ಪಡೆದವರು ಸಿ ಅರ್ ಅನೀಶ್ (CR Anish). ಶಾಜಿ ನಡೆಸುತ್ತಿರುವ ಎಮ್ವೈಜಿ (MyG) ಡಿಜಿಟಲ್ ರಿಟೇಲ್ ಅಂಗಡಿಯಲ್ಲಿ ಅನೀಶ್ ಬಿಸಿನೆಸ್ ಡೆವಲಪ್ಮೆಂಟ್ ಆಫೀಸರ್ ಅಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸಿಕ್ಕಿರುವ ಕಾರಿನ ಬೆಲೆ ರೂ. 45 ಲಕ್ಷ!!

‘ಆತ್ಮೀಯ ಅನಿ… ಕಳೆದ 22 ವರ್ಷಗಳಿಂದ ನೀವೊಂದು ಮಜಬೂತಾದ ಪಿಲ್ಲರ್ಹಾಗೆ ನನ್ನೊಂದಿಗೆ ನಿಂತಿರುವಿರಿ. ಇನ್ನು ಮೇಲೆ ನಿಮ್ಮನ್ನು ಹೊತ್ತು ಓಡಾಡುವ ಈ ಸಂಗಾತಿ ಇಷ್ಟವಾಯಿತೆಂದು ಭಾವಿಸುತ್ತೇನೆ,’ ಎಂದು ಶಾಜಿ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಬರೆದುಕೊಂಡು ಮಿರ್ರನೆ ಮಿಂಚುತ್ತಿರುವ ಕಾರನ್ನು ಗಿಫ್ಟ್ ಮಾಡುವಾಗ ಅನೀಶ್ ಮತ್ತು ಅವರು ಕುಟುಂಬದೊಂದಿಗೆ ತೆಗಿಸಿಕೊಂಡಿರುವ ಫೋಟೋವನ್ನು ಸಹ ಪೋಸ್ಟ್ ಮಾಡಿದ್ದಾರೆ.

‘ಅನೀಶ್ ಅವರನ್ನು ನನ್ನ ಬಿಸಿನೆಸ್ ಪಾಲುದಾರ ಅಂತ ಪರಿಗಣಿಸುತ್ತೇನೆಯೇ ಹೊರತು ಉದ್ಯೋಗಿ ಅಂತಲ್ಲ. ನನಗೆ ಬಹಳ ಸಂತೋಷವಾಗುತ್ತಿದೆ. ಅವರು ಕಳೆದ 22 ವರ್ಷಗಳಿಂದ ನನ್ನೊಂದಿಗಿದ್ದಾರೆ. ಈ ವರ್ಷ ನನ್ನೊಂದಿಗಿರುವ ಬೇರೆ ಪಾಲುದಾರರಿಗೂ ಕಾರುಗಳನ್ನು ನೀಡುವುದು ಸಾಧ್ಯವಾಗುತ್ತದೆ ಎಂಬ ಆಶಾಭಾವನೆ ನನ್ನಲ್ಲಿದೆ,’ ಎಂದು ಶಾಜಿ ಹೇಳಿದ್ದಾರೆ.

ತಮ್ಮಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಒಂದು ಪಾರ್ಟಿ ಏರ್ಪಡಿಸಿದ ಸಂದರ್ಭದಲ್ಲಿ, ಅನೀಶ್ ಗೆ ಕಾರು ಉಡುಗೊರೆಯಾಗಿ ನೀಡಿ ಅವರಲ್ಲಿ ದಿಗ್ಭ್ರಮೆ ಮೂಡಿಸಿದರು. ಅಂದಹಾಗೆ, ಶಾಜಿ ಅವರ ಬಿಸಿನೆಸ್ ಕೇರಳದ ಕೋಯಿಕೋಡ್ ನಲ್ಲಿದೆ.

TV9 Kannada


Leave a Reply

Your email address will not be published. Required fields are marked *