ತನ್ನಿಷ್ಟದ ಆಟಿಕೆಯನ್ನು ಅಜ್ಜಿ ಸರಿ ಮಾಡಿಕೊಡುವವರೆಗೆ ತಾಳ್ಮೆಯಿಂದ ಕಾದು ಕುಳಿತ ನಾಯಿ; ವಿಡಿಯೊ ನೋಡಿ | Dog patiently waits its dadi to fix its favoutire toy Instagram post


ತನ್ನಿಷ್ಟದ ಆಟಿಕೆಯನ್ನು ಅಜ್ಜಿ ಸರಿ ಮಾಡಿಕೊಡುವವರೆಗೆ ತಾಳ್ಮೆಯಿಂದ ಕಾದು ಕುಳಿತ ನಾಯಿ; ವಿಡಿಯೊ ನೋಡಿ

ಇನ್​​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ ವಿಡಿಯೊ ದೃಶ್ಯ

ಮೊಮ್ಮಕ್ಕಳು ಮತ್ತು ಅಜ್ಜಿಯರ ನಡುವಿನ ಸಂಬಂಧವು ವಿಶೇಷವಾಗಿದೆ. ಅವರು ತಮ್ಮ ಮೊಮ್ಮಕ್ಕಳನ್ನು ಬೆಂಬಲಿಸಲು ಮತ್ತು ಅವರಿಗೆ ಸಹಾಯ ಮಾಡಲು ಯಾವಾಗಲೂ ಸಿದ್ಧರಿರುತ್ತಾರೆ. ಈ ಪ್ರೀತಿಯು ಮನುಷ್ಯರಿಗೆ ಮಾತ್ರ ಸೀಮಿತವಾಗಿಲ್ಲ. ಇದು ಸಹ ಪ್ರಾಣಿಗಳ ಜತೆಗೂ ಇರುತ್ತದೆ.ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಹಂಚಿಕೊಳ್ಳಲಾದ ಈ ವಿಡಿಯೊದಲ್ಲಿ ನಾಯಿಯು ತನ್ನ ನೆಚ್ಚಿನ ಆಟಿಕೆಯನ್ನು ದಾದಿ (ಅಜ್ಜಿ)ಸರಿಪಡಿಸಿಕೊಡುವುದನ್ನು ತಾಳ್ಮೆಯಿಂದ ಕಾಯುತ್ತಿರುವುದನ್ನು ತೋರಿಸುತ್ತದೆ. ರಿಯೊ ನಿಮೇಶ್ ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಪುಟದಲ್ಲಿ ವಿಡಿಯೊವನ್ನು ಪೋಸ್ಟ್ ಮಾಡಲಾಗಿದೆ. ಈ ವಿಡಿಯೊವನ್ನು “ಧನ್ಯವಾದಗಳು ದಾದಿ” ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಲಾಗಿದೆ. ನಾಯಿಯು ಟೈನಿ ಎಂಬ ತನ್ನ ನೆಚ್ಚಿನ ಸ್ಟಫ್ಡ್ ಆಟಿಕೆ ಜತೆ ಆಟವಾಡುತ್ತಿರುವಾಗ ಆಕಸ್ಮಿಕವಾಗಿ ಆಟಿಕೆ ಹರಿದುಹೋಗುವುದನ್ನು ವಿಡಿಯೊದ ಆರಂಭದಲ್ಲಿ ತೋರಿಸಲಾಗಿದೆ. ನಂತರ ದಾದಿ ನಾಯಿಯ ರಕ್ಷಣೆಗೆ ಬಂದು ಆಟಿಕೆ ಸರಿಪಡಿಸುವುದನ್ನು ವಿಡಿಯೊ ತೋರಿಸುತ್ತದೆ. ಹಿರಿಯ ಮಹಿಳೆ ಟೈನಿಯನ್ನು ಸರಿಪಡಿಸುವಾಗ ನಾಯಿ ತಾಳ್ಮೆಯಿಂದ ಕಾಯುವ ರೀತಿ ಹೃದಯಸ್ಪರ್ಶಿಯಾಗಿದೆ.

ಕೆಲ ದಿನಗಳ ಹಿಂದೆ ವಿಡಿಯೊ ಪೋಸ್ಟ್ ಮಾಡಲಾಗಿದೆ. ಇಲ್ಲಿಯವರೆಗೆ ಇದು 3.1 ಲಕ್ಷಕ್ಕೂ ಹೆಚ್ಚು ಲೈಕ್ ಗಳಿಸಿದೆ. ಈ ವಿಡಿಯೊಗೆ ಹಲವರು ಲವ್ ಇಮೋಜಿಯೊಂದಿಗೆ ಪ್ರತಿಕ್ರಿಯಿಸಿದ್ದಾರೆ. ” This made my day ” ಎಂದು ಇನ್‌ಸ್ಟಾಗ್ರಾಮ್‌ ಬಳಕೆದಾರರೊಬ್ಬರು ಬರೆದಿದ್ದಾರೆ. “ಅದ್ಭುತ! ಅವನು ತನ್ನ ಆಟಿಕೆಗಾಗಿ ಕಾಯುವ ರೀತಿ ಅಸಾಧಾರಣವಾಗಿದೆ” ಎಂದು ಮತ್ತೊಬ್ಬರು ಪೋಸ್ಟ್ ಮಾಡಿದ್ದಾರೆ. “ನನಗವನು ಇಷ್ಟವಾದ” ಎಂದು ಬಳಕೆದಾರರೊಬ್ಬರು ಹೇಳಿದ್ದು, “ಅವನು ಭರವಸೆಯ ಕಣ್ಣುಗಳಿಂದ ದಾದಿಯನ್ನು ನೋಡುತ್ತಿದ್ದ ರೀತಿ ನೋಡಿ ಎಂದು ಇನ್ನೊಬ್ಬರು ಕಾಮೆಂಟಿಸಿದ್ದಾರೆ.

TV9 Kannada


Leave a Reply

Your email address will not be published.