ತನ್ನ ಗ್ರಾಮಕ್ಕೆ ರಸ್ತೆ, ನೀರಿನ ಸೌಲಭ್ಯವಿಲ್ಲ ಎಂದ ಯುವಕನಿಗೆ ಪಾವಗಡದ ಕಾಂಗ್ರೆಸ್ ಶಾಸಕರಿಂದ ಕಪಾಳಮೋಕ್ಷ | Tumkur Pavagada Congress MLA Venkataramanappa Slaps Youth for Demanding Water and Road for his Village


ತನ್ನ ಗ್ರಾಮಕ್ಕೆ ರಸ್ತೆ, ನೀರಿನ ಸೌಲಭ್ಯವಿಲ್ಲ ಎಂದ ಯುವಕನಿಗೆ ಪಾವಗಡದ ಕಾಂಗ್ರೆಸ್ ಶಾಸಕರಿಂದ ಕಪಾಳಮೋಕ್ಷ

ಕಾಂಗ್ರೆಸ್ ಶಾಸಕ ವೆಂಕಟರಮಣಪ್ಪ

ತುಮಕೂರು: ತಮ್ಮ ಗ್ರಾಮಕ್ಕೆ ರಸ್ತೆ ಹಾಗೂ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸಬೇಕೆಂದು ಕೇಳಿದ್ದಕ್ಕೆ ಕಾಂಗ್ರೆಸ್ ಶಾಸಕ ವೆಂಕಟರಮಣಪ್ಪ (Congress MLA Venkataramanappa) ಯುವಕನೊಬ್ಬನಿಗೆ ಕಪಾಳಮೋಕ್ಷ ಮಾಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಈ ವಿಡಿಯೋ ಈಗ ಭಾರೀ ವೈರಲ್ (Video Viral) ಆಗಿದೆ. ಗ್ರಾಮಕ್ಕೆ ನೀರು ಮತ್ತಿತರ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕೆಂದು ಕೇಳಿದ ಯುವಕನಿಗೆ ತುಮಕೂರು ಜಿಲ್ಲೆಯ ಪಾವಗಡ ಶಾಸಕ ವೆಂಕಟರವಣಪ್ಪ ಕಪಾಳಕ್ಕೆ ಬಾರಿಸಿರುವ ದೃಶ್ಯ ಎಲ್ಲೆಡೆ ಹರಿದಾಡುತ್ತಿದೆ.

ಇಂದು ತುಮಕೂರಿನ ಪಾವಗಡ ತಾಲೂಕು ಕಚೇರಿ ಬಳಿ ಈ ಘಟನೆ ನಡೆದಿದೆ. ತಮ್ಮ ಗ್ರಾಮಕ್ಕೆ ರಸ್ತೆ, ಕುಡಿಯುವ ನೀರಿಲ್ಲವೆಂದು ಶಾಸಕ ಬಳಿ ದೂರು ನೀಡಲು ಬಂದಿದ್ದ ಯುವಕನ ಮೇಲೆ ಕಾಂಗ್ರೆಸ್ ಶಾಸಕ ವೆಂಕಟರಮಣಪ್ಪ ಹಲ್ಲೆ ಮಾಡಿದ್ದಾರೆ. ಆ ಯುವಕನ ಕಪಾಳಕ್ಕೆ ಹೊಡೆದು ಪೊಲೀಸ್ ಸ್ಟೇಷನ್​ಗೆ ಹಾಕಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ಈ ದೃಶ್ಯವನ್ನು ಅಲ್ಲಿ ಸೇರಿದ್ದ ಜನರು ರೆಕಾರ್ಡ್​ ಮಾಡಿಕೊಂಡಿದ್ದಾರೆ. ಊರಿನ ರಸ್ತೆಗಳೆಲ್ಲ ಕಿತ್ತು ಹೋಗಿದೆ, ನೀರಿನ ಸಮಸ್ಯೆ ಹೆಚ್ಚಾಗಿದೆ ಎಂದು ಶಾಸಕರಿಗೆ ದೂರು ನೀಡುವ ವೇಳೆ ಕೋಪಗೊಂಡ ಶಾಸಕ ವೆಂಕಟರಮಣಪ್ಪ ಆ ಯುವಕನ ಕೆನ್ನೆಗೆ ಬಾರಿಸಿದ್ದಾರೆ.

ತಮ್ಮ ಗ್ರಾಮಕ್ಕೆ ರಸ್ತೆ ವ್ಯವಸ್ಥೆ ಹಾಗೂ ಕುಡಿಯುವ ನೀರನ್ನು ಕೇಳಿದ್ದಕ್ಕೆ ಶಾಸಕರಿಂದ ಕಪಾಳಮೋಕ್ಷ ಸಿಕ್ಕಿದೆ. ತಮ್ಮ ಗ್ರಾಮಕ್ಕೆ ಸರಿಯಾಗಿ ರಸ್ತೆ ಕುಡಿಯುವ ನೀರಿಲ್ಲ ಎಂದು ದೂರು ನೀಡಲು ಬಂದಿದ್ದ ಯುವಕನಿಗೆ ಎಲ್ಲರೆದುರೇ ಕಪಾಳಕ್ಕೆ ಬಾರಿಸಲಾಗಿದೆ. ಬಳಿಕ ಶಾಸಕರ ಈ ವರ್ತನೆಯ ವಿರುದ್ಧ ಆ ಯುವಕ ಕಿಡಿಕಾರಿದ್ದಾನೆ

TV9 Kannada


Leave a Reply

Your email address will not be published. Required fields are marked *