ತನ್ನ ತಂದೆಗೆ ನಿಷ್ಠರಾಗಿಲ್ಲದ ಅಖಿಲೇಶ್​​​​ನ್ನು ನೀವು ನಂಬುತ್ತೀರಾ? ಅವರು ಔರಂಗಜೇಬ್‌ನಂತೆ: ಶಿವರಾಜ್ ಸಿಂಗ್ ಚೌಹಾಣ್ | Shivraj Chouhan compares Akhilesh Yadav to the Mughal emperor Aurangzeb in Uttar Pradesh rally


ತನ್ನ ತಂದೆಗೆ ನಿಷ್ಠರಾಗಿಲ್ಲದ ಅಖಿಲೇಶ್​​​​ನ್ನು ನೀವು  ನಂಬುತ್ತೀರಾ? ಅವರು ಔರಂಗಜೇಬ್‌ನಂತೆ: ಶಿವರಾಜ್ ಸಿಂಗ್ ಚೌಹಾಣ್

ಶಿವರಾಜ್ ಸಿಂಗ್ ಚೌಹಾಣ್

ಲಖನೌ: ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ (Shivraj Singh Chouhan) ಭಾನುವಾರ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav) ಅವರನ್ನು ಮೊಘಲ್ ಚಕ್ರವರ್ತಿ ಔರಂಗಜೇಬ್‌ಗೆ ಹೋಲಿಸಿದ್ದಾರೆ.ಉತ್ತರ ಪ್ರದೇಶದ (UP elections) ಡಿಯೋರಿಯಾದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಚೌಹಾಣ್, “ತನ್ನ ತಂದೆಗೆ ನಿಷ್ಠರಾಗಿಲ್ಲದ” ಯಾರನ್ನಾದರೂ ನಂಬಬಹುದೇ ಎಂದು ಮತದಾರರಲ್ಲಿ ಕೇಳಿದರು. 2017 ರಲ್ಲಿ ಉತ್ತರ ಪ್ರದೇಶ ಚುನಾವಣೆಗೆ ಮುನ್ನ ಸಮಾಜವಾದಿ ಪಕ್ಷದ ನಿಯಂತ್ರಣಕ್ಕಾಗಿ ತಮ್ಮ ತಂದೆ ಮುಲಾಯಂ ಸಿಂಗ್ ಯಾದವ್ ಅವರೊಂದಿಗೆ ಅಖಿಲೇಶ್ ಜಗಳವಾಡಿದ್ದರು ಎಂದು ಹೇಳಿದ್ದಾರೆ. 2016 ರಲ್ಲಿ ಯಾದವ್ ಕುಟೂಂ ಪಕ್ಷದ ಮುಖ್ಯಸ್ಥರನ್ನು ನಿರ್ಧರಿಸುವಲ್ಲಿ ಭಿನ್ನಾಭಿಪ್ರಾಯ ಹೊಂದಿದ್ದರು ಮತ್ತು ಪಕ್ಷದ ಚುನಾವಣಾ ಚಿಹ್ನೆಯನ್ನು ಉಳಿಸಿಕೊಳ್ಳುವ ಬಗ್ಗೆ ಜಗಳ ನಡೆದಿತ್ತು. 2017 ರವರೆಗೆ ಮುಖ್ಯಮಂತ್ರಿಯಾಗಿದ್ದ ಅಖಿಲೇಶ್ ಯಾದವ್ ಅಂತಿಮವಾಗಿ ಪಕ್ಷದ ಮುಖ್ಯಸ್ಥರಾದರು. “ಅಖಿಲೇಶ್ ಇಂದಿನ ಔರಂಗಜೇಬ್. ತನ್ನ ತಂದೆಗೆ ನಿಷ್ಠನಾಗದವನು, ಅವನು ನಿಮಗೆ ಹೇಗೆ ನಿಷ್ಠನಾಗಿರುತ್ತಾನೆ? ಮುಲಾಯಂ ಸಿಂಗ್ ಅವರೇ ಹಾಗೆ ಹೇಳಿದ್ದಾರೆ,” ಇಂದು ಮೂರನೇ ಹಂತದ ಮತದಾನ ನಡೆದ ಉತ್ತರ ಪ್ರದೇಶದ ರ್ಯಾಲಿಯಲ್ಲಿ ಚೌಹಾಣ್ ಹೇಳಿದರು.  ಔರಂಗಜೇಬ್ ತನ್ನ ತಂದೆಯನ್ನು ಜೈಲಿಗೆ ತಳ್ಳಿದನು, ಅವನ ಸಹೋದರರನ್ನು ಕೊಂದನು. ಅಖಿಲೇಶ್ ಮಾಡಿದ ರೀತಿಯಲ್ಲಿ ಯಾರೂ ತಮ್ಮನ್ನು ಅವಮಾನಿಸಿಲ್ಲ ಎಂದು ಮುಲಾಯಂ ಜಿ ಹೇಳುತ್ತಾರೆ, ”ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಹೇಳಿದ್ದಾರೆ.  ಮುಲಾಯಂ ಸಿಂಗ್ ಯಾದವ್ ನಡುವಿನ ಭಿನ್ನಾಭಿಪ್ರಾಯ 2016 ರಲ್ಲಿ 2017 ರ ವರೆಗೆ ಮುಂದವರಿದ ನಂತರ  ತಮ್ಮ ಮಗನೊಂದಿಗೆ ಯಾವುದೇ ವಿವಾದವಿಲ್ಲ ಮತ್ತು ಅವರು “ಸಮಸ್ಯೆಗಳನ್ನು ಪರಿಹರಿಸುತ್ತಾರೆ” ಎಂದು ಹೇಳಿದ್ದರು. ಹಿರಿಯ ಯಾದವ್ ಅವರು 25 ವರ್ಷಗಳ ಹಿಂದೆ ಸ್ಥಾಪಿಸಿದ ಸಮಾಜವಾದಿ ಪಕ್ಷದ ಚಿಹ್ನೆಯಾದ “ಸೈಕಲ್” ಗೆ ಹಕ್ಕು ಸಾಧಿಸಿದ್ದರು.

ಉತ್ತರ ಪ್ರದೇಶ ಇಂದು ಮತದಾನ ನಡೆಯುವ ಸ್ಥಾನಗಳು ಯುಪಿಯ ಪಶ್ಚಿಮ, ಮಧ್ಯ ಮತ್ತು ದಕ್ಷಿಣ ಭಾಗಗಳಲ್ಲಿವೆ. 2017 ರಲ್ಲಿ, ಈ 59 ಸ್ಥಾನಗಳಲ್ಲಿ ಬಿಜೆಪಿ 49 ಸ್ಥಾನಗಳನ್ನು ಗೆದ್ದುಕೊಂಡಿದ್ದರೆ ಸಮಾಜವಾದಿ ಪಕ್ಷವು 9 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ ಒಂದು ಸ್ಥಾನವನ್ನು ಗೆದ್ದಿದೆ ಮತ್ತು ಮಾಯಾವತಿಯವರ ಬಹುಜನ ಸಮಾಜವಾದಿ ಪಕ್ಷ ಯಾವುದೇ ಸ್ಥಾನ ಗಳಿಸಿಲ್ಲ.

ಅಖಿಲೇಶ್ ಯಾದವ್ ಅವರು ತಮ್ಮ ಮೊದಲ ರಾಜ್ಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಯಾದವ್ ಕುಟುಂಬದ ಭದ್ರಕೋಟೆಯಾದ ಮೈನ್‌ಪುರಿಯಲ್ಲಿರುವ ಕರ್ಹಾಲ್ ಸ್ಥಾನದ ಮೇಲೆ ಎಲ್ಲರ ಕಣ್ಣುಗಳಿವೆ. ಇವರ ವಿರುದ್ಧ ಬಿಜೆಪಿ ಕೇಂದ್ರ ಸಚಿವ ಎಸ್‌ಪಿ ಸಿಂಗ್ ಬಘೇಲ್ ಅವರನ್ನು ಕಣಕ್ಕಿಳಿಸಿದೆ. ಸಮಾಜವಾದಿ ಪಕ್ಷವು 1992 ರಲ್ಲಿ ಪಕ್ಷವು ಪ್ರಾರಂಭವಾದಾಗಿನಿಂದ ಕೇವಲ ಒಂದು ಬಾರಿ ಈ ಸ್ಥಾನವನ್ನು ಕಳೆದುಕೊಂಡಿದೆ.

TV9 Kannada


Leave a Reply

Your email address will not be published. Required fields are marked *