ತನ್ನ ಪುಸ್ತಕದಲ್ಲಿ ಹಿಜಾಬ್​​ ವಿರೋಧಿಸಿದ್ದ ಪಾಕ್​​ ಮೂಲದ ಮಲಾಲಾ.. ಇಂದು ಉಲ್ಟಾ ಹೊಡೆದ್ರು..!


ಶಿಕ್ಷಣ, ಹಿಜಾಬ್​​​ ಎರಡರಲ್ಲಿ ಯಾವುದು ಬೇಕು ಆಯ್ಕೆ ಮಾಡಿಕೊಳ್ಳಿ ಎಂದು ಶಾಲೆಗಳು ನಮ್ಮ ಮೇಲೆ ಒತ್ತಡ ಹಾಕುತ್ತಿದೆ. ಹಿಜಾಬ್​​ ಧರಿಸಿ ಹೆಣ್ಣು ಮಕ್ಕಳು ಶಾಲೆಗೆ ಹೋಗುವುದನ್ನು ನಿರಾಕರಿಸುವುದು ಭಯಾನಕ. ಹೆಣ್ಣು ಮಕ್ಕಳು ಹಿಜಾಬ್ ಧರಿಸಿ ಶಾಲೆಗೆ ಹೋಗದಿರೋದು ಅತ್ಯಂತ ದಾರುಣ. ಭಾರತದ ನಾಯಕರು ಮುಸ್ಲಿಂ ಮಹಿಳೆಯರನ್ನು ತುಚ್ಛವಾಗಿ ನೋಡೋದು ನಿಲ್ಲಿಸಬೇಕಿದೆ ಎಂದು ಮಲಾಲ ಬರೆದುಕೊಂಡಿದ್ದರು.

ಇನ್ನು, ಮಲಾಲ ಟ್ವೀಟ್​​ ವೈರಲ್​ ಆಗುತ್ತಿದ್ದಂತೆಯೇ ಇವರ ಧ್ವಂದ ನಿಲುವು ಬಹಿರಂಗವಾಗಿದೆ. ಮಲಾಲ ತನ್ನ ಪುಸ್ತಕವೊಂದರಲ್ಲಿ ಹಿಜಾಬ್​​ ವಿರೋಧಿಸಿ ಬರೆದಿದ್ದರು ಎಂದು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಹಿಜಾಬ್​​​​ ಒಂದು ರೀತಿ ಬೆಂಕಿ ಕಾಯಿಸೋ ಒಲೆ ಇದ್ದಂಗೆ, ಇದನ್ನು ಧರಿಸೋದು ಅಂದ್ರೆ ಫ್ಯಾಬ್ರಿಕ್​​ ಶಟ್ಟಲ್​ಕಾಕ್​ ಎಂಬ ಕತ್ತಲೆ ಕೋಣೆಯೊಳಗೆ ನಡೆದು ಬಂಧಿಯಾಗೋದು ಎಂದು ವಿರೋಧಿಸಿದ್ದರು. ಅಂದು ವಿರೋಧಿಸಿ ಈಗ ಹಿಜಾಬ್​​ ಪರ ಧ್ವನಿಯೆತ್ತಿದ ಇವರ ಡಬಲ್​ ಸ್ಟಾಂಡರ್ಡ್​​ ಬಗ್ಗೆ ನೆಟ್ಟಿಗರು ಕೆಂಡಕಾರಿದ್ದಾರೆ.

News First Live Kannada


Leave a Reply

Your email address will not be published.