ತನ್ನ ಮಗ ಭಗತ್​ಸಿಂಗ್​ನನ್ನೂ ಸೇನೆಗೆ ಸೇರಿಸ್ತೇನೆ ಎಂದು ಶಪಥ ಗೈದ ಹುತಾತ್ಮ ಯೋಧನ ಪತ್ನಿ

ತನ್ನ ಮಗ ಭಗತ್​ಸಿಂಗ್​ನನ್ನೂ ಸೇನೆಗೆ ಸೇರಿಸ್ತೇನೆ ಎಂದು ಶಪಥ ಗೈದ ಹುತಾತ್ಮ ಯೋಧನ ಪತ್ನಿ

ವಿಜಯಪುರ: ಪುಲ್ವಾಮಾದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ನೆನ್ನೆ ಹುತಾತ್ಮರಾದ ಜಿಲ್ಲೆಯ ಉಕ್ಕಳಿ ಗ್ರಾಮದ ಯೋಧನ
ಅಂತ್ಯಕ್ರಿಯೆ ಇಂದು ಹುಟ್ಟೂರಿನಲ್ಲಿ ನಡೆದಿದೆ. ಸಕಲ ಸರ್ಕಾರಿ ಗೌರವ ಮತ್ತು ಲಿಂಗಾಯಿತ ವಿಧಿವಿಧಾನದಂತೆ ಅಪಾರ ಜನರ ಸಮ್ಮುಖದಲ್ಲಿ ವೀರ ಯೋಧ ಭೂತಾಯಿ ಮಡಿಲು ಸೇರಿದ್ದಾರೆ. ಅಂತ್ಯಕ್ರಿಯೆಗೂ ಮುನ್ನ ಭಾವುಕರಾದ ಹುತಾತ್ಮ ಯೋಧನ ಪತ್ನಿ ಸಂಗೀತಾ, ಪತಿಯ ಪಾರ್ಥೀವ ಶರೀರದ ಮುಂದೆ ಮಗನನ್ನೂ ಸೇನೆಗೆ ಸೇರಿಸ್ತೇನೆ ಎಂದು ಶಪಥ ಗೈದಿದ್ದಾರೆ.. ಅಲ್ಲದೇ ತಮ್ಮ ಮಗನಿಗೆ ಭಗತ್ ಸಿಂಗ್ ಅಂತಾ ಹೆಸರನ್ನಿಟ್ಟಿರೋ ಈ ದೇಶಪ್ರೇಮಿ ದಂಪತಿ. ತಮ್ಮ ಮಗನನ್ನೂ ದೇಶ ಸೇವೆಗೆ ಮುಡಿಪಾಗಿಡಲು ನಿರ್ಧರಿಸಿದ್ರು. ಅದರಂತೆ ಇಂದು ಮಾತನಾಡಿದ ಹುತಾತ್ಮ ಯೋಧನ ಪತ್ನಿ ತಮ್ಮ ಮಗನನ್ನೂ ಸೇನೆಗೆ ಸೇರಿಸುವುದಾಗಿ ತಿಳಿಸಿದ್ದಾರೆ.

ಯೋಧನ ಎರಡೂ ಮಕ್ಕಳು ಪುಷ್ಪನಮನ ಸಲ್ಲಿಸಿ ಅಂತಿಮ ಸೆಲ್ಯೂಟ್​ ಹೊಡೆಯುತ್ತಿದ್ದಾಗ ಭಾವುಕರಾದ ಜನರ
ಕಣ್ಣಲ್ಲಿ ನೀರು ತುಂಬಿತ್ತು.. ಅಂತ್ಯಕ್ರಿಯೆ ನಂತರ ಸಮಾಧಿ ಸ್ಥಳದಲ್ಲೇ ಹುತಾತ್ಮ ಯೋಧನ ಪುತ್ಥಳಿ ನಿರ್ಮಾಣಕ್ಕೆ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಕುಟುಂಬ ಸದಸ್ಯರು ಬೇಡಿಕೆಯಿಟ್ಟಿದ್ದು ನಮ್ಮ ಮನೆಯ ಹೆಮ್ಮೆಯ ಪುತ್ರನನ್ನು ನಿತ್ಯವೂ ಪೂಜಿಸ್ತೇವೆ ಎಂದು
ಕಣ್ಣಿರಿಟ್ಟಿದ್ದಾರೆ.

The post ತನ್ನ ಮಗ ಭಗತ್​ಸಿಂಗ್​ನನ್ನೂ ಸೇನೆಗೆ ಸೇರಿಸ್ತೇನೆ ಎಂದು ಶಪಥ ಗೈದ ಹುತಾತ್ಮ ಯೋಧನ ಪತ್ನಿ appeared first on News First Kannada.

Source: newsfirstlive.com

Source link