ಉಡುಪಿ: ಗ್ರಾಮ ಪಂಚಾಯತ್​​ ಅಧ್ಯಕ್ಷನ ವಿರುದ್ಧ ಸ್ಟೇಟಸ್​ ಹಾಕಿದ ವ್ಯಕ್ತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಕುಂದಾಪುರ ತಾಲೂಕಿನ ಯಡಮೊಗೆಯಲ್ಲಿ ನಡೆದಿದೆ. ಗ್ರಾಮ ಪಂಚಾಯತ್ ಅಧ್ಯಕ್ಷನೇ ಆತನನ್ನು ಕೊಲೆ ಮಾಡಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಯಡಮೊಗೆಯ ಗ್ರಾಮಸ್ಥ ಉದಯ ಗಾಣಿಗ ಕಾರು ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯಾಗಿದ್ದು, ಆತನನ್ನು ಉದ್ದೇಶ ಪೂರ್ವಕವಾಗಿಯೇ ಕೊಲೆ ಮಾಡಿದ್ದಾರೆ ಎಂಬ ಶಂಕೆ ಮೂಡಿದೆ.

ಕುಂದಾಪುರ ತಾಲೂಕು ವ್ಯಾಪ್ತಿಯ ಯಡಮೊಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಾಣೇಶ್ ಯಡಿಯಾಳ್ ವಿರುದ್ಧ ಉದಯ ಗಾಣಿಗ ಸ್ಟೇಟಸ್​ ಹಾಕಿದ್ದರು. ಗ್ರಾಮಸ್ಥರಿಗೆ ಪೂರಕ ವ್ಯವಸ್ಥೆ ಕಲ್ಪಿಸಿ ಊರಿಗೆ ಬೇಲಿ ಹಾಕಿ ಪೋಸು ಕೊಡಬೇಡಿ. ಕೊರೊನಾ ಪೀಡಿತರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಿ ಆಮೇಲೆ ಪ್ರಚಾರ ತಗೊಳ್ಳಿ. ಸರ್ಕಾರದ ಸಹಾಯ ಧನ ನುಂಗಬೇಡಿ ಎಂದು ಅವರು ಬರೆದಿದ್ದರು.

ಇಂದು ರಸ್ತೆಯಲ್ಲಿ ನಿಂತಿದ್ದ ಉದಯ ಗಾಣಿಗ ಅವರಿಗೆ ಪ್ರಾಣೇಶ್ ಯಡಿಯಾಳ್ ಕಾರು ಡಿಕ್ಕಿಯಾಗಿದೆ. ಅಪಘಾತ ನಡೆಯುತ್ತಿದಂತೆ ಪಂಚಾಯತ್ ಅಧ್ಯಕ್ಷ ಪ್ರಾಣೇಶ್ ಯಡಿಯಾಳ್ ಸ್ಥಳದಿಂದ ಪರಾರಿಯಾಗಿದ್ದು, ಸಾರ್ವಜನಿಕರು 108 ಆಂಬ್ಯುಲೆನ್ಸ್ ಮೂಲಕ ಉದಯ್​​ರನ್ನ ಆಶ್ಪತ್ರೆಗೆ ಕರೆದೊಯ್ಯುತ್ತಿದ್ದರು. ಆದ್ರೆ ಮಧ್ಯೆ ಉದಯ ಗಾಣಿಗ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಪ್ರಾಣೇಶ್ ಯಡಿಯಾಳ್​​ನನ್ನು ಸದ್ಯ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಪ್ರಾಣೇಶ್ ಯಡಿಯಾಳ್

 

The post ತನ್ನ ವಿರುದ್ಧ ಸ್ಟೇಟಸ್​​​ ಹಾಕಿದ್ದಕ್ಕೆ ಗ್ರಾಮಸ್ಥನನ್ನ ಕೊಲೆಗೈದನಾ ಗ್ರಾ.ಪಂ​​ ಅಧ್ಯಕ್ಷ? appeared first on News First Kannada.

Source: newsfirstlive.com

Source link