ತಪ್ಪು ಮಾಡದಿದ್ದರೂ ಕೈ ಮುಗಿದು ಕ್ಷಮೆ ಕೇಳಿದ ‘ದಳಪತಿ’ ವಿಜಯ್; ವೈರಲ್​ ಆಗುತ್ತಿದೆ ವಿಡಿಯೋ | Thalapathy Vijay Ask Sorry after His fans enter to Polling booth In Chennai


ತಪ್ಪು ಮಾಡದಿದ್ದರೂ ಕೈ ಮುಗಿದು ಕ್ಷಮೆ ಕೇಳಿದ ‘ದಳಪತಿ’ ವಿಜಯ್; ವೈರಲ್​ ಆಗುತ್ತಿದೆ ವಿಡಿಯೋ

ದಳಪತಿ ವಿಜಯ್

ನಟ ದಳಪತಿ ವಿಜಯ್​ ಅವರಿಗೆ (Thalapathy Vijay) ಕಾಲಿವುಡ್​ನಲ್ಲಿ ದೊಡ್ಡ ಅಭಿಮಾನಿ ಬಳಗ ಇದೆ. ಅವರ ಸಿನಿಮಾ ತೆರೆಗೆ ಬಂದರೆ ಸಾಕು ಅಭಿಮಾನಿಗಳು ಹಬ್ಬ ಮಾಡುತ್ತಾರೆ. ಅವರ ಕಟೌಟ್​ ನಿರ್ಮಿಸಿ, ಹಾಲಿನ ಅಭಿಷೇಕ ಮಾಡುತ್ತಾರೆ. ಅವರ ನಟನೆಯ ‘ಬೀಸ್ಟ್​’ ಸಿನಿಮಾ (Beast Movie) ತೆರೆಗೆ ಬರೋಕೆ ರೆಡಿ ಆಗಿದೆ. ಅದಕ್ಕೂ ಮೊದಲೇ ವಿಜಯ್ ಅವರು ಸಾರ್ವಜನಿಕವಾಗಿ ಬಹಿರಂಗ ಕ್ಷಮೆಯಾಚಿಸಿದ್ದಾರೆ. ವಿಶೇಷ ಎಂದರೆ ಇದರಲ್ಲಿ ‘ದಳಪತಿ’ ವಿಜಯ್​ ಅವರ ಯಾವುದೇ ತಪ್ಪು ಕೂಡ ಇರಲಿಲ್ಲ! ಸದ್ಯ, ಅವರು ಕ್ಷಮೆ ಕೇಳಿರುವ ವಿಡಿಯೋ ಈಗ ಸಾಕಷ್ಟು ವೈರಲ್​ ಆಗುತ್ತಿದೆ.

ಶನಿವಾರ (ಫೆಬ್ರವರಿ 19) ತಮಿಳುನಾಡಿನಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದಿದೆ. ಚೆನ್ನೈನಲ್ಲಿ ವಿಜಯ್​ ಅವರು ತಮ್ಮ ಮತ ಚಲಾಯಿಸಲು ಬಂದಿದ್ದರು. ಈ ವೇಳೆ ವಿಜಯ್​ ಅವರನ್ನು ನೋಡೋಕೆ ಅಭಿಮಾನಿಗಳು ಹಾಗೂ ಮಾಧ್ಯಮದವರು ಮುತ್ತಿಕೊಂಡರು. ಅಭಿಮಾನಿಗಳು ಜೋರಾಗಿ ಕೂಗೋಕೆ ಆರಂಭಿಸಿದ್ದರು. ಮತಗಟ್ಟೆಯಲ್ಲಿ ನೂಕುನುಗ್ಗಲು ಆರಂಭವಾಯಿತು. ಅಭಿಮಾನಿಗಳನ್ನು ನಿಯಂತ್ರಿಸೋಕೆ ಪೊಲೀಸರಿಗೆ ಕಷ್ಟಸಾಧ್ಯವಾಯಿತು. ಈ ವಿಡಿಯೋ ಸಾಕಷ್ಟು ವೈರಲ್​ ಆಗುತ್ತಿದೆ.

ಅಭಿಮಾನಿಗಳು ಮುತ್ತಿಕೊಂಡಿದ್ದರಿಂದ ಮತ ಹಾಕಲು ಬಂದ ಜನಸಾಮಾನ್ಯರು ಹಾಗೂ ಮತಗಟ್ಟೆಯ ಅಧಿಕಾರಿಗಳಿಗೆ ತೀವ್ರ ತೊಂದರೆ ಆಗಿತ್ತು. ಅವರು ನಟನಿಗೆ ಬೈದುಕೊಂಡರು. ಅಚ್ಚರಿ ಎಂಬಂತೆ ವಿಜಯ್​ ಅವರು ಕೈ ಮಗಿದು ಅಭಿಮಾನಿಗಳ ಪರವಾಗಿ ಕ್ಷಮೆ ಕೇಳಿದರು. ಈ ವಿಡಿಯೋ ಈಗ ದೊಡ್ಡ ಮಟ್ಟದಲ್ಲಿ ವೈರಲ್​ ಆಗುತ್ತಿದೆ. ನಟನ ಸರಳತೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

‘ಬೀಸ್ಟ್’ ಸಿನಿಮಾದ ಕೊನೆಯ ಹಂತದ ಕೆಲಸಗಳಲ್ಲಿ ವಿಜಯ್​ ಬ್ಯುಸಿ ಆಗಿದ್ದಾರೆ. ಪೂಜಾ ಹೆಗ್ಡೆ ಚಿತ್ರದ ನಾಯಕಿ. ನೆಲ್ಸನ್​ ದಿಲೀಪ್​ಕುಮಾರ್ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಚಿನ್ನದ ಕಳ್ಳಸಾಗಣೆ ಬಗ್ಗೆ ಸಿನಿಮಾ ಇದೆ. ಈ ಚಿತ್ರ ಏಪ್ರಿಲ್​ ತಿಂಗಳಲ್ಲಿ ತೆರೆಗೆ ಬರುತ್ತಿದೆ. ಈ ವರೆಗೆ ಚಿತ್ರತಂಡ ರಿಲೀಸ್​ ದಿನಾಂಕ ಘೋಷಣೆ ಮಾಡಿಲ್ಲ. ‘ಕೆಜಿಎಫ್​ 2’ ಎದುರು ಈ ಸಿನಿಮಾ ತೆರೆಗೆ ಬರುತ್ತಿದೆ ಎಂದು ಹೇಳಲಾಗುತ್ತಿದೆ.

ಇತ್ತೀಚೆಗೆ ರಿಲೀಸ್​ ಆದ ‘ಬೀಸ್ಟ್​’ ಸಿನಿಮಾದ ‘ಅರೇಬಿಕ್​ ಕುಥು..’ ಹಾಡು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಪೂಜಾ ಹೆಗ್ಡೆ ಹಾಗೂ ವಿಜಯ್​ ಸ್ಟೆಪ್​ ಹಾಕಿರೋದು ಅಭಿಮಾನಿಗಳಿಗೆ ಇಷ್ಟವಾಗಿದೆ. ಈ ಸಿನಿಮಾದ ಹಾಡಿಗೆ ಅನೇಕರು ಸ್ಟೆಪ್​ ಹಾಕುತ್ತಿದ್ದಾರೆ. ನಟಿ ಸಮಂತಾ ಅವರು ಏರ್​ಪೋರ್ಟ್​ನಲ್ಲಿ ಈ ಹಾಡಿಗೆ ಸಖತ್​ ಆಗಿ ಡ್ಯಾನ್ಸ್​ ಮಾಡಿದ್ದರು.

TV9 Kannada


Leave a Reply

Your email address will not be published. Required fields are marked *