‘ತಪ್ಪು ಮಾಹಿತಿ ಕೊಡ್ಬೇಡಿ’- ನಟ ಸತ್ಯಜಿತ್​ ಪುತ್ರನ ಭಾವುಕ ಮನವಿ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಸತ್ಯಜಿತ್​ ವಿಧಿವಶರಾಗಿದ್ದಾರೆ. ಬೌರಿಂಗ್ ಆಸ್ಪತ್ರೆಯಲ್ಲಿ ನಿನ್ನೆ ತಡರಾತ್ರಿ 2 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಹಲವು ವರ್ಷಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಇವ್ರು, ಕಳೆದ 6 ದಿನಗಳ ಹಿಂದೆ ಬೌರಿಂಗ್‌ ಆಸ್ಪತ್ರೆಗೆ ದಾಖಲಾಗಿದ್ರು. ಐಸಿಯು ವಾರ್ಡ್‌ನಲ್ಲಿ ಸತ್ಯಜಿತ್‌ಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಹೆಗಡೆ ನಗರದಲ್ಲಿ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸತ್ಯಜಿತ್​ ಅವರ ಪುತ್ರ ಆಕಾಶ್​​, ನಿನ್ನೆ ನಾವು ಒಂದು ನ್ಯೂಸ್​​ ಕೇಳಿಪಟ್ಟಿದ್ದೆ. ಸತ್ಯಜಿತ್ ಅವರು ನಿಧನರಾಗಿದ್ದಾರೆ ಅಂತ ನಿನ್ನೆಯೇ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಆದರೆ ರಾತ್ರಿ 2 ಗಂಟೆಗೆ ಅವರು ನಿಧನರಾದರು. ಯಾರ ಬಗ್ಗೆಯಾದರೂ ಈ ರೀತಿ ತಪ್ಪು ಮಾಹಿತಿ ಕೊಡಬೇಡಿ. ಇಂತಹ ಸುದ್ದಿಗಳು ನಟರ ಕುಟುಂಬಕ್ಕೆ ಅಘಾತ ನೀಡುತ್ತೆ.

ಚಿತ್ರರಂಗದಿಂದ ಹಲವರು ಈಗಾಗಲೇ ಮನೆಯ ಬಳಿ ಬಂದು ಅಂತಿಮ ದರ್ಶನ ಪಡೆದುಕೊಂಡಿದ್ದಾರೆ. ತಂದೆಯವರು ವೀಲ್​​ ಚೇರ್​​ನಲ್ಲಿ ಕುಳಿತು 5-6 ಸಿನಿಮಾಗಳಲ್ಲಿ ನಟನೆ ಮಾಡಿದ್ರು. ಮೂರು ಮಕ್ಕಳಿಗೂ ಯಾವುದಕ್ಕೂ ಕಡಿಮೆಯಾಗದಂತೆ ಸಾಕಿ ಬೆಳೆಸಿದ್ದಾರೆ. ತಂದೆಯವರ ಅಂತ್ಯಕ್ರಿಯೆಯನ್ನು ಹೆಗಡೆ ನಗರದಲ್ಲಿಯ ಸ್ಮಶಾನದಲ್ಲಿ ನಡೆಸಲಾಗುವುದು ಎಂದು ತಿಳಿಸಿದರು.

News First Live Kannada

Leave a comment

Your email address will not be published. Required fields are marked *