ಮುಂಬಯಿ: ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ವೇಗಿ ಅನ್ರಿಚ್‌ ನೋರ್ಜೆ ಕೋವಿಡ್‌-19 ತಪ್ಪು ವರದಿಯಿಂದಾಗಿ ಕ್ವಾರಂಟೈನ್‌ಗೆ ಒಳಗಾಗಿದ್ದು, ಇದೀಗ ಸತತ ನೆಗೆಟಿವ್‌ ರಿಪೋರ್ಟ್‌ ಬಳಿಕ ಹೊರಬಂದಿದ್ದಾರೆ ಎಂದು ಡಿಸಿ ತನ್ನ ಟ್ವೀಟ್‌ನಲ್ಲಿ ತಿಳಿಸಿದೆ.

“ನಮ್ಮ ಪೇಸ್‌ ಸೂಪರ್‌ಸ್ಟಾರ್‌ ಅನ್ರಿಚ್‌ ನೋರ್ಜೆ ಈಗ ಕ್ವಾರಂಟೈನ್‌ನಿಂದ ಹೊರಬಂದಿದ್ದಾರೆ. ತಪ್ಪು ಪಾಸಿಟಿವ್‌ ಫ‌ಲಿತಾಂಶದಿಂದ ಅವರು ಕ್ವಾರಂಟೈನ್‌ಗೆ ಒಳಗಾಗಬೇಕಾಯಿತು. ಅನಂತರದ ಮೂರೂ ಟೆಸ್ಟ್‌ಗಳ ಫ‌ಲಿತಾಂಶ ನೆಗೆಟಿವ್‌ ಬಂದಿದೆ. ಅವರೀಗ ತಂಡದ ಜೈವಿಕ ಸುರಕ್ಷಾ ವಲಯವನ್ನು ಪ್ರವೇಶಿಸಿದ್ದಾರೆ. ಅವರ ಬೌಲಿಂಗ್‌ ದಾಳಿಯನ್ನು ಕಾಣಲು ಕಾತರಗೊಂಡಿದ್ದೇವೆ’ ಎಂದು ಡೆಲ್ಲಿ ಕ್ಯಾಪಿಟಲ್ಸ್‌ ಟ್ವೀಟ್‌ ಮಾಡಿದೆ.

ನೋರ್ಜೆ ಮತ್ತು ರಬಾಡ ಒಟ್ಟಿಗೇ ಎ. 6ರಂದು ನೆಗೆಟಿವ್‌ ವರದಿಯೊಂದಿಗೆ ಮುಂಬಯಿಗೆ ಆಗಮಿಸಿದ್ದರು. ಆದರೆ ತಂಡದ ಬಬಲ್‌ ಏರಿಯಾ ಪ್ರವೇಶಿಸಿದೊಡನೆ ನೋರ್ಜೆ ಅವರ ಮೊದಲ ಕೋವಿಡ್‌ ವರದಿ ಪಾಸಿಟಿವ್‌ ಬಂದಿತ್ತು. ಇದು ತಪ್ಪು ವರದಿ ಎಂಬುದಾಗಿ ಡೆಲ್ಲಿ ಫ್ರಾಂಚೈಸಿ ಹೇಳಿದೆ.

ಕ್ರೀಡೆ – Udayavani – ಉದಯವಾಣಿ
Read More