ತಮಿಳಿಗೆ ಕಾಲಿಟ್ಟ ‘ಆಹಾ’ ಒಟಿಟಿ; ವಿಶ್ ಮಾಡಿದ ಅಲ್ಲು ಅರ್ಜುನ್, ಎಂ.ಕೆ. ಸ್ಟಾಲಿನ್ | Allu Arjun Wishes to Aha Tamil Ott Platform after It is Launched by Cm Mk stalin


ತಮಿಳಿಗೆ ಕಾಲಿಟ್ಟ ‘ಆಹಾ’ ಒಟಿಟಿ; ವಿಶ್ ಮಾಡಿದ ಅಲ್ಲು ಅರ್ಜುನ್, ಎಂ.ಕೆ. ಸ್ಟಾಲಿನ್

ಅಲ್ಲು ಅರ್ಜುನ್ (Allu Arjun) ತಂದೆ ಅಲ್ಲು ಅರವಿಂದ್ (Allu Aravind) ಹಾಗೂ ರಾಮೇಶ್ವರ್ ರಾವ್ ಅವರು ‘ಆಹಾ’ ಒಟಿಟಿಯನ್ನು ತೆಲುಗಿನಲ್ಲಿ ಆರಂಭಿಸಿದ್ದರು. ಈಗ ಅದು ತಮಿಳಿಗೂ ವಿಸ್ತರಣೆ ಆಗಿದೆ. ಹಲವು ತಿಂಗಳ ಕಾಲ ತಮಿಳು ‘ಆಹಾ’ಗಾಗಿ ಕೆಲಸಗಳು ನಡೆದಿದ್ದವು. ಇಂದು (ಏಪ್ರಿಲ್ 14) ಚೆನ್ನೈನಲ್ಲಿ ಅದ್ದೂರಿಯಾಗಿ ಇದರ ಲಾಂಚ್​ ನಡೆದಿದೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ತಮಿಳು ‘ಆಹಾ’ವನ್ನು ರಾತ್ರಿ ಲೋಕಾರ್ಪಣೆ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದರು. ಮುಂದಿನ ದಿನಗಳಲ್ಲಿ ಹಲವು ತಮಿಳು ಸಿನಿಮಾಗಳು ಈ ಒಟಿಟಿ ಮೂಲಕ ಪ್ರಸಾರ ಕಾಣಲಿದೆ.

‘ಎಲ್ಲರಿಗೂ ನಮಸ್ಕಾರ. ಎಲ್ಲರಿಗೂ ತಮಿಳು ಹೊಸ ವರ್ಷದ ಶುಭಾಶಯ. ‘ಆಹಾ’ ತಮಿಳು ತಂಡಕ್ಕೆ ಶುಭಾಶಯ. ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರಿಗೆ ಕಂಗ್ರಾಜ್ಯುಲೇಷನ್’ ಎಂದಿದ್ದಾರೆ ಅಲ್ಲು ಅರ್ಜುನ್​.

‘ಆಹಾ ತಮಿಳು ವರ್ಷನ್ ಅನಾವರಣ ಮಾಡಲು ನಾವು ಉತ್ಸುಕರಾಗಿದ್ದೇವೆ. ಇಲ್ಲಿ ವೆಬ್ ಸರಣಿಗಳು ಮತ್ತು ಸಿನಿಮಾಗಳ ಸಂಗ್ರಹ ಇರಲಿದೆ. ತಮಿಳು ವರ್ಷನ್​ನಲ್ಲಿ ನಿರ್ದೇಶಕ ವೆಟ್ರಿಮಾರನ್‌ ಅವರ ‘ಪೆಟ್ಟಕಾಳೈ’, ಪ್ರಿಯಾಮಣಿ ಅವರ ‘ಭಾಮಾಕಲಾಪಂ’, ‘ಅಮ್ಮುಚಿ 2’, ‘ರಮಣಿ vs ರಮಣಿ 3’ ಮುಂತಾದ ಚಿತ್ರಗಳು ಇದರಲ್ಲಿವೆ. ಥಿಯೇಟರ್​ನಲ್ಲಿ ರಿಲೀಸ್ ಆದ ಹಲವು ಸಿನಿಮಾಗಳ ಒಟಿಟಿ ಹಕ್ಕು ತಮ್ಮ ಬಳಿ ಇವೆ. ನಮ್ಮ ಒಟಿಟಿಯಿಂದ ಹಲವು ಪ್ರತಿಭೆಗಳು ಮುನ್ನೆಲೆಗೆ ಬರುತ್ತಾರೆ’ ಎಂದಿದ್ದಾರೆ ಅಲ್ಲು ಅರವಿಂದ್.

‘ಆಹಾಗೆ ಎಲ್ಲ ಕಡೆಯಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಹಲವು ಸಿನಿಮಾಗಳನ್ನು ಜನರಿಗೆ ತಲುಪಿಸಲು ಯಶಸ್ವಿ ಆಗಿದ್ದೇವೆ. ಆಹಾ ಈಗಷ್ಟೇ ತನ್ನ ಪ್ರಯಾಣವನ್ನು ಪ್ರಾರಂಭಿಸುತ್ತಿದೆ. ಶೀಘ್ರದಲ್ಲೇ ಜಾಗತಿಕವಾಗಿ ತಮಿಳು ಭಾಷೆಯವರಿಗೆ ಮನರಂಜನೆ ನೀಡಲು ನಮ್ಮ ವೇದಿಕೆ ಮುಂದಿರುತ್ತದೆ ಎಂದು ನಾವು ಭರವಸೆ ನೀಡುತ್ತೇವೆ’ ಎಂದಿದ್ದಾರೆ ಆಹಾ ಸಿಇಒ ಅಜಿತ್ ಠಾಕೂರ್.

ಹಲವು ತಿಂಗಳ ಕಾಲ ತಮಿಳು ‘ಆಹಾ’ಗಾಗಿ ಕೆಲಸಗಳು ನಡೆದಿದ್ದವು. ಇಂದು (ಏಪ್ರಿಲ್ 14) ಚೆನ್ನೈನಲ್ಲಿ ಅದ್ದೂರಿಯಾಗಿ ಇದರ ಲಾಂಚಿಂಗ್ ಕಾರ್ಯಕ್ರಮ ನಡೆದಿದೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ತಮಿಳು ‘ಆಹಾ’ವನ್ನು ರಾತ್ರಿ ಲೋಕಾರ್ಪಣೆ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದರು. ಮುಂದಿನ ದಿನಗಳಲ್ಲಿ ಹಲವು ತಮಿಳು ಸಿನಿಮಾಗಳು ಈ ಒಟಿಟಿ ಮೂಲಕ ಪ್ರಸಾರ ಕಾಣಲಿದೆ. ತಮಿಳಿನಲ್ಲಿ ಈ ಒಟಿಟಿ ಯಶಸ್ಸು ಕಂಡರೆ, ಹಿಂದಿ, ಕನ್ನಡ ಭಾಷೆಗಳಲ್ಲಿ ಇದು ಕಾರ್ಯಾರಂಭ ಮಾಡಲಿದೆಯೇ ಎನ್ನುವ ಕುತೂಹಲ ಕೂಡ ಮೂಡಿದೆ. ​

TV9 Kannada


Leave a Reply

Your email address will not be published.