ತಮಿಳು ಚಿತ್ರರಂಗದಲ್ಲಿ ಛಾಯಾಗ್ರಾಹಕರಾಗಿ ಗುರುತಿಸಿಕೊಂಡು ನಿರ್ದೇಶಕರಾಗಿ ಗೆದ್ದಿದ್ದ ಕೆ.ವಿ ಆನಂದ್​ ಇಂದು ಚೆನ್ನೈನಲ್ಲಿ ಕೊನೆಯುಸಿರೆಳೆದಿದ್ದಾರೆ. ಹೃದಯಾಘಾತದ ಕಾರಣ ತಮ್ಮ 54ನೇ ವಯಸ್ಸಿಗೇ ಕೆ.ವಿ ಆನಂದ್​ ನಿಧನರಾಗಿದ್ದಾರೆ. ಕರಿಮನಲ್​  ವೆಂಕಟೇಶನ್​ ಆನಂದ್​ ಇವರ ಪೂರ್ಣ ಹೆಸರು. ಇಂದು ಬೆಳಗ್ಗೆ 3.30ಕ್ಕೆ ಹೃದಯಾಘಾತಕ್ಕೆ ತುತ್ತಾಗಿದ್ದಾರೆ.

ಛಾಯಾಗ್ರಾಹಕರಾಗಿ ಚಿತ್ರರಂಗಕ್ಕೆ ಬಂದು ಕೆ.ವಿ ಆನಂದ್​ ನಿರ್ದೇಶಕರಾಗಿ ಸಕ್ಸಸ್ ಕಂಡಿದ್ದರು. ಅಯಾನ್, ಕೋ, ಮಾಟ್ರಾನ್, ಕಾಪ್ಪನ್ ರೀತಿಯ ಹಿಟ್ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದಾರೆ. ಸೂಪರ್​​ಸ್ಟಾರ್​ ರಜನಿಕಾಂತ್​ ಬ್ಲಾಕ್​ಬಸ್ಟರ್​ ಶಿವಾಜಿ ಸಿನಿಮಾದ ಛಾಯಾಗ್ರಾಹಕರು ಇವರೇ ಆಗಿದ್ದರು. ನಟ ಸೂರ್ಯ ನಟನೆಯ ಕಾಪ್ಪನ್​ ಚಿತ್ರ ಇವರ ಕೊನೆಯ ನಿರ್ದೇಶನದ ಚಿತ್ರ.

The post ತಮಿಳಿನ ಖ್ಯಾತ‌ ನಿರ್ದೇಶಕ ಕೆ. ವಿ ಆನಂದ್ ವಿಧಿವಶ appeared first on News First Kannada.

Source: newsfirstlive.com

Source link