ತಮಿಳುನಾಡಿನಲ್ಲಿ ಮಳೆಗೆ ನಾಲ್ವರು ಸಾವು; 1400 ಮಂದಿಗೆ ಗಂಜಿ ಕೇಂದ್ರದಲ್ಲಿ ಆರೈಕೆ


ನವದೆಹಲಿ: ತಮಿಳುನಾಡಿನಲ್ಲಿ ಎರಡ್ಮೂರು ದಿನಗಳಿಂದ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಮಳೆಯ ಆರ್ಭಟಕ್ಕೆ ನಾಲ್ವರು ಸಾವನ್ನಪ್ಪಿದ್ದಾರೆ ಅಂತಾ ವರದಿಯಾಗಿದೆ.

ಹೀಗಾಗಿ ಜನ ಜೀವನ ಪೂರ್ತಿ ಅಸ್ತವ್ಯಸ್ತಗೊಂಡಿದೆ. ಮಳೆರಾಯನ ಅಬ್ಬರಕ್ಕೆ ಮನೆಗಳನ್ನ ಕಳೆದುಕೊಂಡಿರೋ 1 ಸಾವಿರದ 400ಕ್ಕೂ ಹೆಚ್ಚು ಜನರು ಗಂಜಿ ಕೇಂದ್ರಗಳಿಗೆ ಸ್ಥಳಾಂತರಗೊಂಡಿದ್ದಾರೆ. ಇನ್ನು ಇಡೀ ರಾಜ್ಯದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು ನೆರೆ ಸಂತ್ರಸ್ತರ ನೆರವಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ನಿಂತಿದೆ.Image

ಇನ್ನು ಮುಂದಿನ ಐದಾರು ದಿನಗಳ ವರೆಗೆ ತಮಿಳುನಾಡಿನಾದ್ಯಂತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಅಂತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ರಾಜ್ಯ ಸರ್ಕಾರ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಂಡಿದೆ. ಎನ್​​ಡಿಆರ್​​​ಎಫ್ ಸೇರಿದಂತೆ ರಕ್ಷಣಾ ಸಿಬ್ಬಂದಿಗಳನ್ನು ಆಯಕಟ್ಟಿನ ಪ್ರದೇಶಗಳಿಗೆ ನಿಯೋಜಿಸಲಾಗಿದೆ.

Image

The post ತಮಿಳುನಾಡಿನಲ್ಲಿ ಮಳೆಗೆ ನಾಲ್ವರು ಸಾವು; 1400 ಮಂದಿಗೆ ಗಂಜಿ ಕೇಂದ್ರದಲ್ಲಿ ಆರೈಕೆ appeared first on News First Kannada.

News First Live Kannada


Leave a Reply

Your email address will not be published. Required fields are marked *