ಬೆಂಗಳೂರು: ಒಂಟಿಯಾಗಿ ಹೋಗ್ತಿದ್ದವರ ಮೊಬೈಲ್ ಎಗರಿಸುತ್ತಿದ್ದ ಮೋಸ್ಟ್ ವಾಟೆಂಡ್ ಖದೀಮರನ್ನ ಹೆಡೆಮುರಿ ಕಟ್ಟಿ ಕಳ್ಳರ ಕಳ್ಳಾಟಕ್ಕೆ ಪೊಲೀಸರು ಬ್ರೇಕ್​ ಹಾಕಿದ್ದಾರೆ. ಆರು ತಿಂಗಳಿಂದ ಕಣ್ಣಾಮುಚ್ಚಾಲೆ ಆಡ್ತಿದ್ದ ಈ ಅಂತರ್​ ರಾಜ್ಯ ಕಳ್ಳರ ಗುಂಪು ಕೊನೆಗೂ ಪೊಲೀಸರ ಬಲೆಗೆ ಬಿದ್ದಿದೆ.

ರಾತ್ರಿ ವೇಳೆಯಲ್ಲಿ ಒಂಟಿಯಾಗಿ ಹೋಗ್ತಿದ್ದವರನ್ನೇ ಟಾರ್ಗೆಟ್​ ಮಾಡಿ ಮೊಬೈಲ್ ಎಗರಿಸುತ್ತಿದ್ದ ಖದೀಮರು,  ಕಳ್ಳತನ ಮಾಡಿದ ಮೊಬೈಲ್​ಗಳನ್ನ ಆನೇಕಲ್ ಬಾರ್ಡರ್ ಬಳಿ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

ಆನೇಕಲ್, ಜಿಗಣಿ, ಎಲಕ್ಟ್ರಾನಿಕ್ ಸಿಟಿ, ಹಾಗೂ ಸಿಟಿ ಭಾಗದಲ್ಲಿ ಅಧಿಕ ಪ್ರಕರಣಗಳು ದಾಖಲಾಗಿದ್ದು ತನಿಖೆಗಿಳಿದ ಜಿಗಣಿ ಪೊಲೀಸರು ಪಿ ಸಂಜಯ್, ಇಸಾಕ್, ಸತೀಶ್ ನನ್ನು ಬಂಧಿಸಿ ಚಿನ್ನಾಭರಣಗಳು ಮತ್ತು 100ಕ್ಕೂ ಹಚ್ಚು ಮೊಬೈಲ್​ಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರು ತಮಿಳುನಾಡಿನವರಾಗಿದ್ದು ರಾಜ್ಯಕ್ಕೆ ಬಂದು ಈ ಕೃತ್ಯದಲ್ಲಿ ಭಾಗವಹಿಸಿದ್ದಾರೆ ಎನ್ನಲಾಗಿದೆ.

ಈ ಖದೀಮರು ಬಲೆಗೆ ಬಿದ್ದಿದ್ದೇ ರೋಚಕ!
ಆನೇಕಲ್ ಭಾಗದಲ್ಲಿ ಕಳ್ಳತನವಾಗಿದ್ದ ಮೊಬೈಲ್​ ಅನ್ನ ಆ್ಯಂಬುಲೆನ್ಸ್ ಡ್ರೈವರ್ ಒಬ್ಬರು ಯ್ಯೂಸ್ ಮಾಡುತ್ತಿದ್ದರು. ಇದರ ಬೆನ್ನ ಹಿಂದೆ ಬಿದ್ದ ಪೊಲೀಸರು ಡ್ರೈವರ್​ನನ್ನು ವಿಚಾರಿಸಿದ್ದಾರೆ. ಆನೇಕಲ್​ ಬಾರ್ಡರ್​ ಬಳಿ ಆನ್​ಲೈನ್​ ಪೇಮೆಂಟ್​ ಮೂಲಕ ಮೊಬೈಲ್​ ಖರೀದಿಸಿದ್ದಾಗಿ ಹೇಳಿದ್ದಾನೆ. ಆನ್‌ಲೈನ್ ಪೇಮೆಂಟ್ ನಂಬರ್ ಆಧರಿಸಿ ತನಿಖೆಗಿಳಿದ ಪೊಲೀಸರು ಆರೋಪಿಗಳ ಮೊಬೈಲ್​ ಟ್ರೇಸ್​ ಮಾಡುವ ಮೂಲಕ ಬಂಧಿಸಿದ್ದಾರೆ. ಇನ್ನು ಏಜೆಂಟರು ಕಳ್ಳರಿಂದ ಕಮೀಷನ್​ ಮೇಲೆ ಮೊಬೈಲ್​ಗಳನ್ನು ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

The post ತಮಿಳುನಾಡಿನ ‘ರಾತ್ರಿ ಕಳ್ಳರ’ ಬಂಧನ; ಖದೀಮರು ಬಲೆಗೆ ಬಿದ್ದಿದ್ದೇ ರೋಚಕ appeared first on News First Kannada.

Source: newsfirstlive.com

Source link