ಬೆಂಗಳೂರು: ಮೇಕೆದಾಟು ಯೋಜನೆಗೆ ಒತ್ತಾಯಿಸಿ ಡಿಸೆಂಬರ್ ಮೊದಲ ವಾರದಲ್ಲಿ ಪಾದಯಾತ್ರೆ ಮಾಡಲಾಗುತ್ತದೆ ಅಂತಾ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಮೇಕೆದಾಟು ಯೋಜನೆ ಅತ್ಯಂತ ಮಹತ್ವಪೂರ್ಣದ್ದಾಗಿದ್ದು, ಈ ಯೋಜನೆ ಜಾರಿಗೆ ಒತ್ತಾಯಿಸಿ ಮೇಕೆದಾಟು ಸ್ಥಳದಿಂದ ಬೆಂಗಳೂರಿಗೆ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ನಮ್ಮ ಸರ್ಕಾರ ಇದ್ದಾಗಲೇ ಡೀಟೈಲ್ ಪ್ರಾಜೆಕ್ಟ್ ರಿಪೋರ್ಟ್ ರೆಡಿ ಮಾಡಿ ಕೇಂದ್ರಕ್ಕೆ ಕಳುಹಿಸಿಕೊಟ್ಟಿದ್ವಿ. ಆದ್ರೆ ಈ ಯೋಜನೆ ಜಾರಿಗೆ ತರಬಾರದೆಂದು ತಮಿಳುನಾಡು ಸುಮ್ಮನೇ ಕ್ಯಾತೆ ತೆಗೀತಿದೆ.
ಯೋಜನೆ ನಡೆಯೋದು ನಮ್ಮ ವ್ಯಾಪ್ತಿಯ ಪ್ರದೇಶದಲ್ಲಿ, ಹೀಗಾಗಿ ಅವರು ಆಕ್ಷೇಪ ವ್ಯಕ್ತಪಡಿಸಲು ಆಗಲ್ಲ. ನಾವು ಎಂದಿಗೂ ಕರ್ನಾಟಕದ ಪರ, ಕನ್ನಡಿಗರ ಪರವಾಗಿರುತ್ತೇವೆ. ಆದರೆ ಈ ವಿಚಾರದಲ್ಲಿ ತಮಿಳುನಾಡು ರಾಜಕೀಯ ಮಾಡುತ್ತಿದೆ ಅಂತಾ ಸಿದ್ದರಾಮಯ್ಯ ತಮಿಳುನಾಡು ವಿರುದ್ಧ ಕಿಡಿಕಾರಿದ್ದಾರೆ
We, from @INCKarnataka, will go on a Padayatra from Mekedatu to Bengaluru in the first week of December to demand the implementation of Mekedatu project.#Mekedatu #ಮೇಕೆದಾಟು
— Siddaramaiah (@siddaramaiah) November 7, 2021