ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಜೂನ್​​ನಲ್ಲಿ ರಾಜ್ಯ ಸಚಿವ ಸಂಪುಟಕ್ಕೆ ಸೇರ್ಪಡೆ ಸಾಧ್ಯತೆ | Tamilnadu Chief Minister MK Stalin’s son Udhayanidhi Stalin is likely in Cabinet by June


ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಜೂನ್​​ನಲ್ಲಿ ರಾಜ್ಯ ಸಚಿವ ಸಂಪುಟಕ್ಕೆ ಸೇರ್ಪಡೆ ಸಾಧ್ಯತೆ

ಉದಯನಿಧಿ ಸ್ಟಾಲಿನ್ – ಎಂಕೆ ಸ್ಟಾಲಿನ್

ಚೆನ್ನೈ: ಡಿಎಂಕೆ ಶಾಸಕ ಮತ್ತು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ (MK Stalin) ಅವರ ಪುತ್ರ ಉದಯನಿಧಿ ಸ್ಟಾಲಿನ್(Udhayanidhi Stalin) ಅವರು ಜೂನ್ ವೇಳೆಗೆ ತಮಿಳುನಾಡು (TamilNadu) ರಾಜ್ಯ ಸಚಿವ ಸಂಪುಟಕ್ಕೆ ಸೇರ್ಪಡೆಗೊಳ್ಳುವ ಸಾಧ್ಯತೆಯಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ. ಪಕ್ಷ ಮತ್ತು ಅವರ ಮೊದಲ ಕುಟುಂಬವು ಸ್ಟಾಲಿನ್‌ನೊಂದಿಗೆ ಮಾಡಿದ ತಪ್ಪನ್ನು ಪುನರಾವರ್ತಿಸಲು ಬಯಸುವುದಿಲ್ಲ ಎಂದು ಡಿಎಂಕೆ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ. ”ಸ್ಟಾಲಿನ್ ಸಿಎಂ ಆಗಿದ್ದು 70 ವರ್ಷಗಳಲ್ಲಿ. ಮುಂದಿನ ಚುನಾವಣೆಯ ವೇಳೆಗೆ ಅವರಿಗೆ 70 ವಯಸ್ಸಾಗಲಿದೆ. ಇಂತಹ ತಪ್ಪು ಉದಯನಿಧಿ ಅವರ ರಾಜಕೀಯ ಭವಿಷ್ಯದಲ್ಲಿ ಆಗಬಾರದು ಎಂದು ಪಕ್ಷ ಮತ್ತು ಕುಟುಂಬ ನಂಬಿದೆ,” ಎಂದು ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. 44 ವರ್ಷ ವಯಸ್ಸಿನ ಉದಯನಿಧಿ ಅವರು ಜೂನ್ ವೇಳೆಗೆ ತಮ್ಮ ಬಾಕಿ ಉಳಿದಿರುವ ಚಲನಚಿತ್ರಗಳನ್ನು ಪೂರ್ಣಗೊಳಿಸುವ ನಿರೀಕ್ಷೆಯಿದೆ. “ನೆಂಜುಕ್ಕು ನೀಧಿ (ಆರ್ಟಿಕಲ್ 15 ರ ತಮಿಳು ರಿಮೇಕ್) ಸೇರಿದಂತೆ, ಅವರ ಎರಡು ಯೋಜನೆಗಳು ಅಂತಿಮ ಹಂತದಲ್ಲಿವೆ. ಅವರು ಇನ್ನೂ ಎರಡು ಯೋಜನೆಗಳ ಬಗ್ಗೆ ಚರ್ಚೆಯಲ್ಲಿದ್ದರು. ಆದರೆ ಅವರು ಅವುಗಳಲ್ಲಿ ನಟಿಸುವ ಸಾಧ್ಯತೆಯಿಲ್ಲ ಎಂದು ನಮಗೆ ತಿಳಿದಿದೆ ಎಂದಿ ಡಿಎಂಕೆ ನಾಯಕ ಹೇಳಿದ್ದಾರೆ. ಯೋಜನೆಯ ಬಗ್ಗೆ ಕೇಳಿದಾಗ ಮತ್ತೊಬ್ಬ ಹಿರಿಯ ಡಿಎಂಕೆ ನಾಯಕರು ಇದು ಸಂಭವಿಸುವ ಸಾಧ್ಯತೆಯಿದೆ ಎಂದು ಹೇಳಿದರು. “

ನಾವು ಮೇ ಮೊದಲ ವಾರದಲ್ಲಿ ಒಂದು ವರ್ಷವನ್ನು (ಅಧಿಕಾರದಲ್ಲಿ) ಪೂರ್ಣಗೊಳಿಸುತ್ತೇವೆ. ಉದಯನಿಧಿ ಅವರ ಪ್ರವೇಶವನ್ನು ವಿಳಂಬ ಮಾಡಬಾರದು ಎಂಬ ಭಾವನೆ ನಮ್ಮೆಲ್ಲರಲ್ಲಿದೆ. ಅವರು ಸಚಿವ ಸಂಪುಟಕ್ಕೆ ಸೇರ್ಪಡೆಯಾದರೆ ಯಾವ ಖಾತೆ ನೀಡಲಾಗುತ್ತದೆ ಎಂಬುದನ್ನು ನಿರ್ಧರಿಸಿಲಾಗಿಲ್ಲ. ಆದರೆ ಅವರ ಸೇರ್ಪಡೆಯು ಇತರರ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿಲ್ಲ. ಏಕೆಂದರೆ ಯಾವುದೇ ಸಚಿವರನ್ನು ಬದಲಾಯಿಸದೆ ಅವರನ್ನು ಸಂಪುಟಕ್ಕೆ ಸೇರಿಸಬಹುದು ಎಂದು ನಾಯಕ ಹೇಳಿದರು.

(ಹೆಚ್ಚಿನ ಮಾಹಿತಿ ಅಪ್ಡೇಟ್ ಆಗಲಿದೆ)

TV9 Kannada


Leave a Reply

Your email address will not be published.