ಚೆನ್ನೈ: ನಟ ಸೂರ್ಯ ಹಾಗೂ ಸೋಹದರ ಕಾರ್ತಿ ತಮಿಳುನಾಡು ಸರ್ಕಾರಕ್ಕೆ 1 ಕೋಟಿ ರೂ. ದೇಣಿಗೆ ನೀಡಿದ ಬೆನ್ನಲ್ಲೇ ಇದೀಗ ನಟ ಅಜಿತ್ ಕೂಡ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ.

ಹೌದು, ಅಜಿತ್ ಅವರು ತಮಿಳುನಾಡು ಸಿಎಂ ರಿಲೀಫ್ ಪಂಡ್ ಗೆ 25 ಲಕ್ಷ ಹಣವನ್ನು ದೇಣಿಗೆ ನೀಡಿದ್ದಾರೆ. ಮಹಾಮಾರಿ ಕೊರೊನಾ ಎಡರನೇ ಅಲೆಯಿಂದಾಗಿ ನಟ ಇಂದು ಬೆಳಗ್ಗೆ ಬ್ಯಾಂಕ್ ಅಕೌಂಟಿಗೆ ಹಣವನ್ನು ವರ್ಗಾಯಿಸಿದ್ದಾರೆ. ಈ ಸಂಬಂಧ ನಟನ ಆಪ್ತ ಸಹಾಯಕ ಸುರೇಶ್ ಚಂದ್ರ ಅವರು ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟಪಡಿಸಿದ್ದಾರೆ.

ಮೇ 11 ರಂದು ಮುಖ್ಯಮಂತ್ರಿ ಸ್ಟ್ಯಾಲಿನ್ ಅವರು ಸಾರ್ವಜನಿಕರು ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಬಹುದು. ಆ ಹಣವನ್ನು ಕೋವಿಡ್ ನಿರ್ವಹಣೆಗೆ ಬಳಸಿಕೊಳ್ಳಲಾಗುತ್ತದೆ ಎಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಈಗಾಗಲೆ ಸೂರ್ಯ ಹಾಗೂ ಕಾತೀ ದೇಣಿಗೆ ನೀಡಿದ್ದು, ಇದೀಗ ಅಜಿತ್ ಕೂಡ ತಮ್ಮ ಕೈಲಾದಷ್ಟು ಸಹಾಯ ಮಾಡಿರುವುದು ಅಭಿಮಾನಿಗಳಲ್ಲಿ ಸಂತಸ ತಂದಿದೆ.

The post ತಮಿಳುನಾಡು ಸಿಎಂ ಫಂಡ್‍ಗೆ 25 ಲಕ್ಷ ದೇಣಿಗೆ ನೀಡಿದ ನಟ ಅಜಿತ್ appeared first on Public TV.

Source: publictv.in

Source link