ತಮ್ಮನಾಗಿ ಬಂದ ಅಪ್ಪನಾಗಿ ಹೋದ ಎಂದು ಅಪ್ಪು ನೆನೆದು ರಾಘಣ್ಣ ಗಳಗಳನೇ ಅತ್ತರು. ಇಂದು ಪುನೀತ್ ನುಡಿ ನಮನ ಕಾರ್ಯಕ್ರಮದಲ್ಲಿ ಮಾತಾಡಿದ ರಾಘಣ್ಣ, ನನಗೂ ಶಿವಣ್ಣನಿಗೂ ಮುಂದೆ ಹೇಗೆ ಬದುಕಬೇಕು ಎಂದು ತೋರಿಸಿಕೊಟ್ಟ ಹೋದ. ನನ್ನ ಕಳಿಸಿ, ನನ್ನ ತಮ್ಮ ಅಪ್ಪುನಾ ವಾಪಸ್ಸು ಕರೆಸಿ, ಪುನೀತ್ ಇಲ್ಲದೆ ನನ್ನ ಕೈಯಲ್ಲಿ ಬದುಕೋಗಾಲ್ಲ ಎಂದು ಕಣ್ಣೀರು ಹಾಕಿದರು.
ನಾನು ಮತ್ತು ಶಿವಣ್ಣ ಬೇಗ ಹೋಗಬೇಕಿತ್ತು. ನಮ್ಮನ್ನು ಅವನು ಕಳಿಸಿಕೊಡಬೇಕಿತ್ತು. ನಾವು ಅವನನ್ನು ಕಳಿಸಿಕೊಡಬೇಕಾದ ಪರಿಸ್ಥಿತಿ ಬಂತು ಎಂದರು. ತಮ್ಮನಾಗಿ ಬಂದು ಅಪ್ಪನಾಗಿ ಹೋದ, ಹೇಗೆ ಬದುಕಬೇಕು ಎಂದು ತೋರಿಸಿಕೊಟ್ಟ. ನನ್ನ ಕೈಯಲ್ಲೇ ಆಡಿಸಿ ಬೆಳೆಸಿದೆ. ಕೊನೆಗೂ ನಮಗೆ ನಾವೇನು ಮಾಡಬೇಕು ಎಂದು ಹೇಳಿ ಹೋದ ಎಂದರು.