ತಮ್ಮನ್ನು ಸಮರ್ಥಿಸಿಕೊಳ್ಳಲು ಪ್ರಪಂಚದಲ್ಲಿಯೇ ಇಲ್ಲದ ವ್ಯಕ್ತಿಯ ಹೆಸರನ್ನು ಯಾಕೆ ತರಬೇಕು; ಬಿಜೆಪಿ ಟ್ವೀಟ್​ಗೆ ಹೆಚ್.ಎಂ.ರೇವಣ್ಣ ಗರಂ | HM revanna express anger against bjp govt over its tweets on bitcoin allegation rakesh siddaramaiah


ತಮ್ಮನ್ನು ಸಮರ್ಥಿಸಿಕೊಳ್ಳಲು ಪ್ರಪಂಚದಲ್ಲಿಯೇ ಇಲ್ಲದ ವ್ಯಕ್ತಿಯ ಹೆಸರನ್ನು ಯಾಕೆ ತರಬೇಕು; ಬಿಜೆಪಿ ಟ್ವೀಟ್​ಗೆ ಹೆಚ್.ಎಂ.ರೇವಣ್ಣ ಗರಂ

ಸಿದ್ದರಾಮಯ್ಯರ ಜೊತೆ ರೇವಣ್ಣ

ಬೆಂಗಳೂರು: ದಿವಂಗತ ರಾಕೇಶ್ ಫೋಟೋ ಟ್ಯಾಗ್‌ ಮಾಡಿ ಬಿಜೆಪಿ ಟ್ವೀಟ್‌ ಮಾಡಿರುವ ವಿಚಾರಕ್ಕೆ ಸಂಬಂಧಿಸಿ ಮಾಜಿ ಸಚಿವ ಹೆಚ್.ಎಂ.ರೇವಣ್ಣ ಆಕ್ರೋಶ ಹೊರ ಹಾಕಿದ್ದಾರೆ. ತಮ್ಮನ್ನು ಸಮರ್ಥಿಸಿಕೊಳ್ಳಲು ಯಾರ ಹೆಸರನ್ನಾದ್ರೂ ತರ್ತಾರೆ. ಪ್ರಪಂಚದಲ್ಲಿಯೇ ಇಲ್ಲದ ವ್ಯಕ್ತಿಯ ಹೆಸರನ್ನು ಯಾಕೆ ತರಬೇಕು ಎಂದು ಗರಂ ಆಗಿದ್ದಾರೆ.

ಮಾನ್ಯ ಬಿಟ್ ಕಾಯಿನ್ ಬುರುಡೆರಾಮಯ್ಯ ಅವರೇ, ಈ ಚಿತ್ರದಲ್ಲಿರುವ ಸುನೀಶ್ ಹೆಗ್ಡೆ & ಹೇಮಂತ್ ಜೊತೆಗಿರುವ ಎಲ್ಲರನ್ನು ನೀವು ಗುರುತಿಸಬಲ್ಲಿರಿ ಎಂಬುದು ನಮ್ಮ ನಂಬಿಕೆ. ಆ ನಂಬಿಕೆ ನಿಜವೇ ಆದರೆ ಬಿಟ್ ಕಾಯಿನ್ ಹ್ಯಾಕಿಂಗ್ ದಂಧೆ ನಿಮ್ಮ ಕಾಲದಲ್ಲೇ ಆರಂಭವಾಗಿತ್ತು. ಸಿದ್ದರಾಮಯ್ಯನವರೇ, ಆ ಬಗ್ಗೆ ನೀವು ಸ್ಪಷ್ಟ ಮಾಹಿತಿ ಹೊಂದಿದ್ದೀರಿ ಅಲ್ಲವೇ? ಎಂದು ಬಿಜೆಪಿ ಸಿದ್ದರಾಮಯ್ಯರಿಗೆ ಬಿಜೆಪಿ ಟ್ವೀಟ್ ಮೂಲಕ ಪ್ರಶ್ನಿಸಿತ್ತು.

ಬಿಟ್ ಕಾಯಿನ್ ಹ್ಯಾಕರ್ ಶ್ರೀಕಿ ಜೊತೆಗೆ ಹೇಮಂತ್ ಮುದ್ದಪ್ಪ ಹಾಗೂ ಸುನೀಶ್ ಹೆಗ್ಡೆ ಗಾಢ ಸ್ನೇಹ ಹೊಂದಿದ್ದರು. ಶ್ರೀಕಿ ಮೂಲಕ ಗೇಮಿಂಗ್ ಸೈಟ್ & ಇ-ಪೋರ್ಟಲ್ ಹ್ಯಾಕ್ ಮಾಡಿಸಿದ್ದರು ಎಂಬುದು ಪೊಲೀಸ್ ದಾಖಲೆಯಲ್ಲಿದೆ!? ಇಲ್ಲಿ ನೋಡಿ, ಸುನೀಶ್ ಹೆಗ್ಡೆ & ಹೇಮಂತ್ ಯಾರ ಜೊತೆಗಿದ್ದಾರೆ ಎಂದು ಒಮ್ಮೆ ನೋಡಿ ಎಂದು ದಿ. ರಾಕೇಶ್ ಫೋಟೋ ಟ್ಯಾಗ್‌ ಮಾಡಿ ಬಿಜೆಪಿ ಟ್ವೀಟ್‌ಮಾಡಿತ್ತು. ಸದ್ಯ ಇದಕ್ಕೆ ಮಾಜಿ ಸಚಿವ ಹೆಚ್.ಎಂ.ರೇವಣ್ಣ ಆಕ್ರೋಶ ಹೊರ ಹಾಕಿದ್ದಾರೆ.

ತಮ್ಮನ್ನು ಸಮರ್ಥಿಸಿಕೊಳ್ಳಲು ಯಾರ ಹೆಸರನ್ನಾದ್ರೂ ತರ್ತಾರೆ. ಪ್ರಪಂಚದಲ್ಲಿಯೇ ಇಲ್ಲದ ವ್ಯಕ್ತಿಯ ಹೆಸರನ್ನು ಯಾಕೆ ತರಬೇಕು. ದಿನಕ್ಕೊಂದು ಹೇಳಿಕೆ ಕೊಟ್ಟು ಮುಟ್ಠಾಳರನ್ನಾಗಿ ಮಾಡುತ್ತಿದ್ದಾರೆ. ತೋಳ, ಕುರಿ ನ್ಯಾಯ ಬಿಟ್ಟು ನಿಷ್ಪಕ್ಷಪಾತ ತನಿಖೆ ಮಾಡಲಿ ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವ ಹೆಚ್.ಎಂ.ರೇವಣ್ಣ ಒತ್ತಾಯಿಸಿದ್ದಾರೆ.

ಬದುಕಿಲ್ಲದವರ ಬಗ್ಗೆ ಮಾತನಾಡಿ ಏನು ಪ್ರಯೋಜನ
ಇನ್ನು ಬಿಜೆಪಿ ಟ್ವೀಟ್ಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ನಮ್ಮ ಅವಧಿಯಲ್ಲಿ ಬಿಟ್ ಕಾಯಿನ್ ವಿಚಾರ ಗೊತ್ತಿರಲಿಲ್ಲ. ಆಗ ಗೊತ್ತಿದ್ದರೆ ನಾವು ಆಗಲೇ ಬಲೆ ಹಾಕುತ್ತಿದ್ದೆವು. ರಾಕೇಶ್ ಈಗ ಬದುಕಿದ್ದಾರಾ? ಬದುಕಿಲ್ಲದವರ ಬಗ್ಗೆ ಮಾತನಾಡಿ ಏನು ಪ್ರಯೋಜನ. ಬಿಜೆಪಿಯವರಿಗೆ ಮಾನವೂ ಇಲ್ಲ ಮರ್ಯಾದೆಯೂ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಎಸ್‌ಐಟಿ ರಚಿಸಿ ಬಿಟ್ ಕಾಯಿನ್ ಹಗರಣದ ಬಗ್ಗೆ ತನಿಖೆ ನಡೆಸಿ -ಸಿದ್ದರಾಮಯ್ಯ ಆಗ್ರಹ

TV9 Kannada


Leave a Reply

Your email address will not be published. Required fields are marked *