ತಮ್ಮನ್ನು ಸುಳ್ಳುಗಾರ ಎಂದಿರುವ ಸರ್ಕಾರದ ಪ್ರತಿನಿಧಿಗಳ ಬಗ್ಗೆ ಒಂದೂ ಮಾತಾಡಲಿಲ್ಲ ಬೆಂಗಳೂರು ಪೊಲೀಸ್ ಕಮೀಷನರ್! | Bengaluru police commissioner unwilling to make any comment on ministers who termed him a liar ARB


ಧರ್ಮ ಸಂಘರ್ಷದ ಜೊತೆ ಬೆಂಗಳೂರಲ್ಲಿ ಖಾಕಿ ಮತ್ತು ಖಾದಿ ಸಂಘರ್ಷ! ಹೌದು ಮಾರಾಯ್ರೇ, ಕಳೆದ ಸೋಮವಾರ ಬೆಂಗಳೂರಿನ ಗೋರಿಪಾಳ್ಯದಲ್ಲಿ ನಡೆದ ಚಂದ್ರು (Chandru) ಕೊಲೆಗೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸ್ ಕಮೀಶನರ್ ಕಮಲ ಪಂತ್ (Kamal Pant) ಮತ್ತು ಬಸವರಾಜ ಬೊಮ್ಮಾಯಿ (Basavaraj Bommai) ಅವರ ಸಂಪುಟ ಕೆಲ ಸಚಿವರು ಹಾಗೂ ಶಾಸಕರ ನಡುವೆ ಅಘೋಷಿತ ಸಮರ ಜಾರಿಯಲ್ಲಿದೆ. ಚಂದ್ರು ಕೊಲೆಯಾಗಿದ್ದಕ್ಕೆ ಚಂದ್ರು ಮತ್ತು ಹಂತಕರ ನಡುವಿನ ರೋಡ್ ರೇಜ್ ಕಾರಣ ಅಂತ ಪಂತ್ ಹೇಳುತ್ತಿದ್ದರೆ, ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರು, ಚಂದ್ರು ಉರ್ದುನಲ್ಲಿ ಮಾತಾಡದೆ ಹೋಗಿದ್ದಕ್ಕೆ ಕೊಲೆ ಮಾಡಲಾಯಿತು ಎಂದಿದ್ದರು.

ನಿಮಗೆ ಗೊತ್ತಿದೆ. ಗೃಹ ಸಚಿವರು, ತಾನು ಹೇಳಿದ್ದು ತಪ್ಪು ಕಮೀಷನರ್ ಹೇಳಿದ್ದು ಸರಿ ಅಂತ ಸ್ಪಷ್ಟನೆ ನೀಡಿ ಕ್ಷಮೆ ಯಾಚಿಸಿದರೂ ಕಮಲ್ ಪಂತ್ ಅವರನ್ನು ಸುಳ್ಳುಗಾರ ಅಂತ ಬಿಂಬಿಸುವ ಪ್ರಯತ್ನ ನಡೆದಿದೆ. ಸೋಮವಾರ ಪಂತ್ ಅವರು ವಿಷಯಕ್ಕೆ ಸಂಬಂಧಿಸಿದಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದರು. ಇಲ್ಲ ಎಲ್ಲ ಸರಿಯಾಗಿದೆ, ಯಾವುದೇ ಬಿಕ್ಕಟ್ಟಿಲ್ಲ ಎಂಬ ಹಾರಿಕೆಯ ಉತ್ತರಗಳನ್ನು ನೀಡಿದರು.

ಒಂದು ಕೋಟಿಗೂ ಹೆಚ್ಚು ಬೆಂಗಳೂರು ನಿವಾಸಿಗಳ ರಕ್ಷಣೆಯ ಹೊಣೆ ಹೊತ್ತಿರುವ ನಿಮ್ಮನ್ನು ಸುಳ್ಳುಗಾರ ಅನ್ನುತ್ತಿದ್ದಾರಲ್ಲ ಅಂತ ಕೇಳಿದ ಪ್ರಶ್ನೆಗೂ ಪಂತ್ ಅವರು, ಇಲ್ಲ ಹಾಗೇನೂ ಇಲ್ಲ, ಎಲ್ಲ ಸಾರ್ಟ್ ಔಟ್ ಅಗಿದೆ ಎಂದು ಹೇಳುತ್ತಾ ಅಲ್ಲಿಂದ ನಡೆದೇಬಿಟ್ಟರು!

TV9 Kannada


Leave a Reply

Your email address will not be published. Required fields are marked *