ಎಬಿ ಡಿವಿಲಿಯರ್ಸ್, ವಿಶ್ವ ಕ್ರಿಕೆಟ್ನ ಮಿಸ್ಟರ್ 360. ನಿನ್ನೆ ಎಲ್ಲಾ ಕ್ರಿಕೆಟ್ಗೆ ಗುಡ್ಬೈ ಹೇಳುವುದರೊಂದಿಗೆ ಶಸ್ತ್ರತ್ಯಾಗ ಮಾಡಿದ್ದಾರೆ. ಇದರೊಂದಿಗೆ ಅಸಂಖ್ಯಾತ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ಆರ್ಸಿಬಿಯ ಮ್ಯಾಚ್ ವಿನ್ನರ್ ಎಬಿಡಿ, ದಿಢೀರ್ಇಂಥದ್ದೊಂದು ನಿರ್ಧಾರ ಕೈಗೊಂಡಿದ್ದೇಕೆ..? ಇಲ್ಲಿದೆ ನೋಡಿ ಡಿಟೈಲ್ಸ್.
ಮಿಸ್ಟರ್ 360 ಎಂದ್ರೆ ನೆನೆಪಾಗೋದು, ಸೌತ್ ಆಫ್ರಿಕಾದ ಸೂಪರ್ ಸ್ಟಾರ್ ಬ್ಯಾಟ್ಸ್ಮನ್, ಎಬಿ ಡಿವಿಲಿಯರ್ಸ್. ತನ್ನ ವಿಶಿಷ್ಟ ಬ್ಯಾಟಿಂಗ್ ಶೈಲಿಯಿಂದ ಎಬಿಡಿ, ಅಷ್ಟದಿಕ್ಕುಗಳಿಗೂ ಚೆಂಡನ್ನ ಬಡಿದಟ್ಟುವ ಏಕಮಾತ್ರ ಪರಾಕ್ರಮಿ. ವಿಶ್ವ ಕ್ರಿಕೆಟ್ನ ಅಜಾತುಶತ್ರವಾಗಿರುವ ಎಬಿಡಿ, ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ. ಆದ್ರೀಗ ಈ ಅಭಿಮಾನಿ ಬಳಗಕ್ಕೆ ಮಿಸ್ಟರ್ 360, ಶಾಕ್ ನೀಡಿದ್ದಾರೆ. ಎಲ್ಲಾ ಮಾದರಿಯ ಕ್ರಿಕೆಟ್ಗೆ ಗುಡ್ಬೈ ಹೇಳುವುದರೊಂದಿಗೆ, ಅಚ್ಚರಿ ಮೂಡಿಸಿದ್ದಾರೆ.
‘ಇದೊಂದು ಅದ್ಭುತ ಪ್ರಯಾಣ. ಆದ್ರೆ ನಾನು ಎಲ್ಲಾ ಕ್ರಿಕೆಟ್ನಿಂದ ನಿವೃತ್ತಿಯಾಗಲು ನಿರ್ಧರಿಸಿದ್ದೇನೆ. ಇದುವರೆಗೆ ನಾನು ಉತ್ಸಾಹದಿಂದ ಆಟವನ್ನ ಆಡಿದ್ದೇನೆ. 37ನೇ ವಯಸ್ಸಿನಲ್ಲಿ ಜ್ವಾಲೆಯು, ಪ್ರಕಾಶಮಾನವಾಗಿ ಉರಿಯುವುದಿಲ್ಲ. ಇದನ್ನ ಒಪ್ಪಿಕೊಳ್ಳಲೇಬೇಕಾದ ವಾಸ್ತವ. ಹೀಗಾಗಿ ನಾನು ಈ ಘೋಷಣೆ ಮಾಡುತ್ತಿದ್ದೇನೆ. ಕ್ರಿಕೆಟ್ ನನ್ನ ಮೇಲೆ ಅಸಾಧಾರಣ ಪ್ರೀತಿ ತೋರಿದೆ. ಟೈಟನ್ಸ್, ಪ್ರೋಟೀಸ್, ಆರ್ಸಿಬಿ ಅಥವಾ ಪ್ರಪಂಚದಾದ್ಯಂತ ಆಡುತ್ತಿರಲಿ, ಆಟವು ನನಗೆ ಊಹಿಸಲಾಗದ ಅನುಭವ, ಅವಕಾಶ ನೀಡಿದೆ. ಇದಕ್ಕೆ ನಾನು ಯಾವಾಗಲೂ ಕೃತಜ್ಞನಾಗಿರುತ್ತೇನೆ.’
ಎಬಿ ಡಿವಿಲಿಯರ್ಸ್, ಮಾಜಿ ಕ್ರಿಕೆಟಿಗ
ನಿವೃತ್ತಿ ಘೋಷಿಸಿ RCB & ಫಾನ್ಸ್ಗೆ ಶಾಕ್ ಕೊಟ್ಟ ಎಬಿಡಿ..!
2008ರಿಂದ ಮೊದಲ 3 ಆವೃತ್ತಿಗಳಲ್ಲಿ ಡೆಲ್ಲಿ ಡೇರ್ಡೆವಿಲ್ಸ್ ಪರ ಆಡಿದ್ದ ಎಬಿಡಿ, 2011ರಿಂದ ಆರ್ಸಿಬಿಯ ಅವಿಭಾಜ್ಯ ಅಂಗವಾಗಿದ್ದರು. ಸಾಕಷ್ಟು ಫ್ಯಾನ್ ಫಾಲೋಯಿಂಗ್ ಹೊಂದಿದ್ದ ಎಬಿ, ಮುಂದಿನ ಸೀಸನ್ನಲ್ಲಿ ಆರ್ಸಿಬಿ ನಾಯಕತ್ವ ವಹಿಸಿಕೊಳ್ಳುತ್ತಾರೆ ಅಂತಾನೇ ಊಹಿಸಲಾಗಿತ್ತು. ಇದಕ್ಕಾಗಿ ಎಬಿಡಿ ರಿಟೈನ್ಗೂ ಆರ್ಸಿಬಿ ಫ್ರಾಂಚೈಸಿ ಮುಂದಾಗಿತ್ತು. ಆದ್ರೀಗ ಗ್ಲೋಬಲ್ ಟಿ20 ಕ್ರಿಕೆಟ್ಗೆ ನಿವೃತ್ತಿ ಘೋಷಿಸಿ ನಿರಾಸೆ ಮೂಡಿಸಿದ್ದಾರೆ. ಇದಕ್ಕೆ ಕಾರಣವನ್ನ ಎಬಿಡಿ ತಮ್ಮ ಟ್ವೀಟ್ನಲ್ಲೇ ಬಹಿರಂಗ ಪಡಿಸಿದ್ದಾರೆ.
ವಯಸ್ಸಿನ ಕಾರಣ ನೀಡಿ ಕ್ರಿಕೆಟ್ಗೆ ಗುಡ್ಬೈ..!
37 ವರ್ಷದ ಎಬಿ ಡಿವಿಲಿಯರ್ಸ್, ಮೊದಲಿನ ಬ್ಯಾಟಿಂಗ್ ಖದರ್ ಸಂಪೂರ್ಣ ಕಳೆದುಕೊಂಡಿದ್ದಾರೆ. ಟೂರ್ನಿಗಳಲ್ಲಿ ಸತತ ವೈಫಲ್ಯ ಅನುಭವಿಸುತ್ತಿರುವ ಕಾರಣ, ಗ್ಲೋಬಲ್ ಟಿ20 ಲೀಗ್ಗಳಿಂದ ಹಿಂದೆ ಸರಿದ್ದಾರೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್, ಐಪಿಎಲ್ ಸೀಸನ್-14.
ಪಂದ್ಯಕ್ಕೆ ಬೇಕಾದ ಫಿಟ್ನೆಸ್ ಹೊಂದಿಲ್ಲ ಎಬಿ ಡಿವಿಲಿಯರ್ಸ್
ಮೈದಾನದಲ್ಲಿ ಬ್ಯಾಟಿಂಗ್, ವಿಕೆಟ್ ಕೀಪಿಂಗ್, ಫೀಲ್ಡಿಂಗ್ ಮಾಡುತ್ತಿದ್ದಾಗ ಎಬಿಡಿ, ಸದಾ ಌಕ್ಟೀವ್ ಆಗಿ ಇರುತ್ತಿದ್ದರು. ಆದ್ರೆ ಕಳೆದ ಆವೃತ್ತಿಯಲ್ಲಿ ಇದು ಮಾಯವಾಗಿತ್ತು. ಅಷ್ಟೇ ಅಲ್ಲ, ಆರ್ಸಿಬಿ ಪಾಲಿಗೆ ಮ್ಯಾಚ್ ಫಿನಿಷರ್ ಆಗಿದ್ದ ಎಬಿಡಿ, ಫಿಟ್ನೆಸ್ ಕಾರಣದಿಂದಲೇ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನ ಕೆ.ಎಸ್.ಭರತ್ಗೆ ಬಿಟ್ಟುಕೊಟ್ರು ಎನ್ನಲಾಗ್ತಿದೆ.
ಫ್ಯಾಮಿಲಿ ಜೊತೆ ಸಮಯ ಕಳೆಯಲು ಈ ನಿರ್ಧಾರ..!
ಅಂತಾರಾಷ್ಟ್ರೀಯ ಕ್ರಿಕೆಟ್ಗೆ 2018ರಲ್ಲೇ ಗುಡ್ಬೈ ಹೇಳಿದ್ದರು, ಎಬಿ ಡಿವಿಲಿಯರ್ಸ್ ಮೋಸ್ಟ್ ಬ್ಯುಸಿಯೆಸ್ಟ್ ಕ್ರಿಕೆಟರ್ ಆಗಿದ್ದರು. ವಿಶ್ವದಾದ್ಯಂತ ವಿವಿಧ ಲೀಗ್ಗಳನ್ನ ಆಡುತ್ತಾ ವರ್ಷ ಪೂರ್ತಿ ಬ್ಯುಸಿಯಾಗಿರುತ್ತಿದ್ದರು. ಆದ್ರೀಗ ಫ್ಯಾಮಿಲಿಗಾಗಿ ಸಮಯ ಮೀಸಲಿಡಲು ನಿರ್ಧರಿಸಿರುವ ಎಬಿ ಡಿವಿಲಿಯರ್ಸ್, ಗ್ಲೋಬಲ್ ಟಿ20 ಟೂರ್ನಿಗಳಿಂದಲೂ ಹೊರಬರಲು ತೀರ್ಮಾನಿಸಿದ್ದಾರೆ.