ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕೇಂದ್ರ ಜಲ್​ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್​ಗೆ ಪತ್ರ ಬರೆದಿದ್ದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶದಂತೆ ತಮಿಳುನಾಡಿಗೆ ಸಿಗಬೇಕಾದ ಕೋಟಾದಂತೆ ನೀರು ಹರಿಸಲು ಸೂಚಿಸುವಂತೆ ಒತ್ತಾಯಿಸಿದ್ದಾರೆ.

ಕಾವೇರಿ ನದಿ ಪ್ರಾಂತ್ಯ ತಮಿಳುನಾಡಿನ ಅನ್ನದ ಬಟ್ಟಲಾಗಿದೆ.. ಮೆಟ್ಟೂರಿನ ಸ್ಟ್ಯಾನ್ಲಿ ಜಲಾಶಯ ಈ ಭಾಗದ ಜನರ ಜೀವನಾಡಿಯಾಗಿದ್ದು ಕೃಷಿ ಉತ್ಪಾದನೆಗೆ ಈ ನೀರಿನ ಮೇಲೆ ಅವಲಂಬಿತವಾಗಿದೆ. ಜೂನ್ 12 ಆದ ಇಂದು ಮೆಟ್ಟೂರು ಡ್ಯಾಮ್​ನ ಫ್ಲಡ್​ ಗೇಟ್​ಗಳನ್ನು ತೆಗೆದು ಈ ಪ್ರಾಂತ್ಯಕ್ಕೆ ನೀರು ಹರಿಸಲಾಗುತ್ತಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಕಾವೇರಿ ನೀರು ಹರಿದುಬರಲಿದೆ ಎಂದು ನಂಬಿಕೊಂಡು ನೀರು ಹರಿಸಲಾಗುತ್ತಿದೆ ಎಂದಿದ್ದಾರೆ.

ಜೂನ್ ತಿಂಗಳಿನಲ್ಲಿ ತಮಿಳುನಾಡು 9.19 ಟಿಎಂಸಿ ಮತ್ತು ಜುಲೈನಲ್ಲಿ 31.24 ಟಿಎಂಸಿ ನೀರು ಹರಿದುಬರಬೇಕಿತ್ತು. ಮಾನ್ಸೂನ್ ಮಳೆಯೂ ಸಹ ಈ ಭಾಗದ ಜನರಿಗೆ ಅಷ್ಟು ಫಲಪ್ರದವಾಗಿಲ್ಲ. ನಮಗೆ ಸಿಗಬೇಕಾದ ನೀರಿನಲ್ಲಿ ಕೊರತೆಯಾದಲ್ಲಿ ಸದ್ಯ ಬೆಳೆದಿರುವ ಬೆಳೆ ಹಾಗೂ ಮುಂದಿನ ತಿಂಗಳು ಬಿತ್ತನೆ ಮಾಡಬೇಕಾದ ಸಾಂಬಾ ಬೆಳೆಗೂ ತೊಂದರೆಯಾಗುತ್ತದೆ ಎಂದು ಸ್ಟಾಲಿನ್ ಮನವಿ ಮಾಡಿದ್ದಾರೆ.

The post ತಮ್ಮ ಪಾಲಿನ ‘ಕಾವೇರಿ ನೀರು’ ಹರಿಸುವಂತೆ ಆಗ್ರಹಿಸಿ ಕೇಂದ್ರಕ್ಕೆ ಪತ್ರ ಬರೆದ ತಮಿಳುನಾಡು ಸಿಎಂ appeared first on News First Kannada.

Source: newsfirstlive.com

Source link