ತಮ್ಮ ಬಗ್ಗೆ ಕಮೆಂಟ್​ ಮಾಡಿದ ಲೇಖಕ ಚೇತನ್ ಭಗತ್​​ಗೆ ತಿರುಗೇಟು ನೀಡಿದ ನಟಿ ಉರ್ಫಿ ಜಾವೇದ್ – Actress Urfi Javed hits back at author Chetan Bhagat for commenting on her


ಭಾರತೀಯ ಲೇಖಕ ಚೇತನ್ ಭಗತ್ ಅವರು ಉರ್ಫಿ ಜಾವೇದ್ ಅವರ ಕುರಿತಾಗಿ ನೀಡಿರುವ ಹೇಳಿಕೆ ಸಂಚಲನ ಮೂಡಿಸಿದೆ. 

ತಮ್ಮ ಬಗ್ಗೆ ಕಮೆಂಟ್​ ಮಾಡಿದ ಲೇಖಕ ಚೇತನ್ ಭಗತ್​​ಗೆ ತಿರುಗೇಟು ನೀಡಿದ ನಟಿ ಉರ್ಫಿ ಜಾವೇದ್

ಉರ್ಫಿ ಜಾವೇದ್, ಚೇತನ್ ಭಗತ್​​

ಹಿಂದಿ ಬಿಗ್​ ಬಾಸ್​ ಖ್ಯಾತಿಯ ನಟಿ ಉರ್ಫಿ ಜಾವೇದ್​​ (Urfi Javed) ಅವರು ತಮ್ಮ ವಿಶಿಷ್ಟ ಮತ್ತು ಬೋಲ್ಡ್ ಹೇಳಿಕೆಗಳಿಂದ ಹೆಚ್ಚು ಹೆಸರುವಾಸಿಗಿರುವವರು. ಜೊತೆಗೆ ತಮ್ಮ ವಿಲಕ್ಷಣ ಉಡುಪುಗಳಿಂದಲೂ ನೆಟ್ಟಿಗರನ್ನು ಅಚ್ಚರಿಗೊಳಿಸುತ್ತಾ ಬಂದಿದ್ದಾರೆ. ಭಾರಿ ಟ್ರೋಲ್‌ಗೆ ಒಳಗಾಗುವುದರ ಹೊರತಾಗಿಯೂ, ಉರ್ಫಿ ಜಾವೇದ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಸಂಚಲನವನ್ನು ಸೃಷ್ಟಿಸುವುದರಿಂದ ಹಿಂದೆ ಬಿದ್ದಿಲ್ಲ. ಆದರೆ ಸದ್ಯ ಉರ್ಫಿ ಜಾವೇದ್ ಯಾವುದೇ ರೀತಿಯ ಹೊಸ ರೀಲ್ಸ್​ ಮಾಡಿಲ್ಲ ಅಥವಾ ಯಾವುದೇ ಹೇಳಿಕೆ ನೀಡಿಲ್ಲ. ಆದರೂ ಅವರು ಸುದ್ದಿಯಲ್ಲಿದ್ದಾರೆ. ಸದ್ಯ ಲೇಖಕ ಚೇತನ್ ಭಗತ್ (Chetan Bhagat) ಅವರು ಉರ್ಫಿ ಜಾವೇದ್ ಅವರ ಕುರಿತಾಗಿ ನೀಡಿರುವ ಹೇಳಿಕೆ ಸಂಚಲನ ಮೂಡಿಸಿದೆ.

ಲೇಖಕ ಚೇತನ್ ಭಗತ್ ಅವರು ಇತ್ತೀಚೆಗೆ ಸಾಹಿತ್ಯ ಸಮ್ಮೇಳನ ಒಂದರಲ್ಲಿ ಭಾಗವಹಿಸಿದ್ದರು. ‘ಯುವ ಸಮೂಹಕ್ಕೆ ಮೊಬೈಲ್​​ ದೊಡ್ಡ ಅಡ್ಡಿಯಾಗಿದೆ. ಹುಡುಗರು ಮಹಿಳೆಯರ ಫೋಟೋಗಳನ್ನು ಲೈಕ್​​​ ಮಾಡುತ್ತ, ಕಮೆಂಟ್​​ ಮಾಡುತ್ತ ಕಾಲ ಕಳೆಯುತ್ತಿದ್ದಾರೆ. ಜೊತೆಗೆ ಇನ್‌ಸ್ಟಾಗ್ರಾಮ್ ರೀಲ್ಸ್​​ಗಳನ್ನು ನೋಡುತ್ತ ಗಂಟೆಗಟ್ಟಲೆ ಸಮಯ ಕಳೆಯುತ್ತಿದ್ದಾರೆ. ಒಂದು ಕಡೆ ದೇಶವನ್ನು ಯುವಕರ ಪಡೆ ಕಾಯುತ್ತಿದ್ದರೆ, ಇನ್ನೊಂದೆಡೆ ಉರ್ಫಿ ಜಾವೇದ್ ಅವರ ಫೋಟೋ ಮತ್ತು ರೀಲ್ಸ್​​ಗಳನ್ನು ನೋಡುತ್ತಾ ಕಾಲ ಕಳೆಯುತ್ತಿದ್ದಾರೆ’ ಎಂದು ಹೇಳಿದ್ದಾರೆ.

‘ಉರ್ಫಿ ಜಾವೇದ್ ಅವರ ಫೋಟೋಗಳನ್ನು ನೋಡುವುದರಿಂದ ನಿಮಗೆ ಏನು ಸಿಗುತ್ತದೆ? ಇದು ನಿಮ್ಮ ಪರೀಕ್ಷೆಗೆ ಉಪಯೋಗವಾಗುತ್ತದೆಯೇ ಅಥವಾ ನೀವು ಕೆಲಸದ ಸಂದರ್ಶನಕ್ಕೆ ಹೋದಾಗ, ಆ ಸಂದರ್ಶಕರಿಗೆ ಉರ್ಫಿ ಅವರ ಎಲ್ಲಾ ಬಟ್ಟೆಗಳ ಬಗ್ಗೆ ನಮಗೆ ಗೊತ್ತು ಎಂದು ಹೇಳುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ಇಂದು ಸುದ್ದಿಗಿಂತಲೂ ವೇಗವಾಗಿ ಉರ್ಫಿ ಜಾವೇದ್ ಅವರು ಧರಿಸುವ ಬಟ್ಟೆಗಳ ವಿಡಿಯೋಗಳು ವೈರಲ್ ಆಗುತ್ತಿವೆ’ ಎಂದು ಚೇತನ್ ಭಗತ್ ಹೇಳಿದ್ದಾರೆ.

ಚೇತನ್ ಭಗತ್ ಅವರ ಸಂದರ್ಶನವನ್ನು ನೋಡಿದ ನಟಿ ಉರ್ಫಿ ಜಾವೇದ್ ತಿರುಗೇಟು ನೀಡಿದ್ದಾರೆ. ‘ಸಾಹಿತ್ಯ ಸಮ್ಮೇಳನದಲ್ಲಿ ನನ್ನ ಹೆಸರು ತೆಗೆದುಕೊಳ್ಳುವ ಅವಶ್ಯಕತೆ ಏನಿತ್ತು? ನಾನು ಲೇಖಕಿಯಲ್ಲ. ನನಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ. ಯುವಕರು ನನ್ನ ಫೋಟೋಗಳನ್ನು ರಹಸ್ಯವಾಗಿ ನೋಡುತ್ತಿದ್ದಾರೆ ಮತ್ತು ವಿಚಲಿತರಾಗುತ್ತಿದ್ದಾರೆ ಎಂದು ನೀವು ಹೇಳಿದ್ದೀರಿ. ಯುವಕರನ್ನು ಬಿಡಿ, ನಿಮಗೆ ನನ್ನ ಚಿಕ್ಕಪ್ಪನ ವಯಸ್ಸಾಗಿದೆ. ನೀವು ಮದುವೆಯಾಗಿದ್ದರೂ ನಿಮ್ಮ ಅರ್ಧ ವಯಸ್ಸಿನ ಹುಡುಗಿಯರಿಗೆ ಸಂದೇಶಗಳನ್ನು ಕಳುಹಿಸಿದ್ದೀರಿ. ಅದು ನಿಮಗೆ ತೊಂದರೆಯಾಗಲಿಲ್ಲ. ನಿಮ್ಮ ದಾಂಪತ್ಯ ಜೀವನ ಹಾಳಾಗಲಿಲ್ಲ ಅಥವಾ ನಿಮ್ಮ ಮಕ್ಕಳು ಹಾಳಾಗಲಿಲ್ಲ’ ಎಂದು ಉರ್ಫಿ ಜಾವೇದ್ ಕಿಡಿಕಾರಿದ್ದಾರೆ.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *