ತಮ್ಮ ಭವಿಷ್ಯವೇ ಅಭದ್ರತೆಯಲ್ಲಿರುವಾಗ ಅಗ್ನಿವೀರರು ದೇಶವನ್ನು ಹೇಗೆ ಭದ್ರ ಮಾಡುತ್ತಾರೆ: ತೇಜಸ್ವಿ ಯಾದವ್ | Tejashwi Yadav Says, How ‘Agniveers’ will secure borders if they are insecure about their future


ತಮ್ಮ ಭವಿಷ್ಯವೇ ಅಭದ್ರತೆಯಲ್ಲಿರುವಾಗ ಅಗ್ನಿವೀರರು ನಮ್ಮ ದೇಶವನ್ನು ಅದ್ಹೇಗೆ ಭದ್ರ ಮಾಡಿಯಾರು ಎಂದು ಆರ್​ಜೆಡಿ ನಾಯಕ ತೇಜಸ್ವಿ ಯಾದವ್ (Tejashwi Yadav)ಪ್ರಶ್ನಿಸಿದ್ದಾರೆ

ಪಾಟ್ನಾ: ತಮ್ಮ ಭವಿಷ್ಯವೇ ಅಭದ್ರತೆಯಲ್ಲಿರುವಾಗ ಅಗ್ನಿವೀರರು ನಮ್ಮ ದೇಶವನ್ನು ಅದ್ಹೇಗೆ ಭದ್ರ ಮಾಡಿಯಾರು ಎಂದು ಆರ್​ಜೆಡಿ ನಾಯಕ ತೇಜಸ್ವಿ ಯಾದವ್ (Tejashwi Yadav)ಪ್ರಶ್ನಿಸಿದ್ದಾರೆ. ಕೇಂದ್ರ ಸರ್ಕಾರದ ಹೊಸ ಯೋಜನೆ ಅಗ್ನಿಪಥ(Agnipath) ದ ಬಗ್ಗೆ ಮಾತನಾಡಿರುವ ಅವರು, ನಾಲ್ಕು ವರ್ಷಗಳೇನೋ ಕೆಲಸವಿರಲಿದೆ, ಆದರೆ ನಾಲ್ಕು ವರ್ಷದ ಬಳಿಕ ಏನು ಎಂಬ ಚಿಂತೆಯು ಅಗ್ನಿವೀರರನ್ನು ಕಾಡುತ್ತಿದೆ, ಹೀಗಿರುವಾಗ ಅವರು ದೇಶವನ್ನು ಕಾಯಲು ಹೇಗೆ ಸಾಧ್ಯ ಎಂದರು.

ಅಗ್ನಿಪಥ ಯೋಜನೆಯಿಂದ ದೇಶದ ಯುವಕರು ನೊಂದಿದ್ದಾರೆ, ನಾಲ್ಕು ವರ್ಷದ ಬಳಿಕ ಶೇ.75ರಷ್ಟು ಸೈನಿಕರು ನಿರುದ್ಯೋಗಿಗಳಾಗುತ್ತಾರೆ ಇದು ಆಲೋಚನೆ ಮಾಡುವ ವಿಷಯವಾಗಿದೆ. ಹೀಗಾಗಿ ಈ ಯೋಜನೆಯನ್ನು ಮರುಪರಿಶೀಲಿಸುವಂತೆ ಸರ್ಕಾರಕ್ಕೆ ಮನವಿ ಪತ್ರ ನೀಡಿದ್ದೇವೆ ಎಂದು ಮಾಹಿತಿ ನೀಡಿದರು.

ಈ ಬಗ್ಗೆ ಪ್ರಶ್ನೆ ಮಾಡಿ, ಪ್ರತಿಭಟನೆ ನಡೆಸಿದ್ದ ಯುವಕರನ್ನು ಜೈಲಿಗಟ್ಟಲಾಗಿತ್ತು, ಬಳಿಕ ಅವರನ್ನು ಬಿಡುಗಡೆ ಮಾಡಲಾಗಿದೆ. ಆರ್​ಜೆಡಿ ಕಾರ್ಯಕರ್ತರು ಅಗ್ನಿಪಥ ಯೋಜನೆ ಕೈಬಿಡುವಂತೆ ಒತ್ತಾಯಿಸಿ ವಿಧಾನಸಭೆಯಿಂದ ಪಾಟ್ನಾದ ರಾಜಭವನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಕೇಂದ್ರ ಸರ್ಕಾರವು ಯುವಕರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಅಗ್ನಿಪಥ ಯೋಜನೆಯನ್ನು ಜಾರಿಗೆ ತಂದಿದೆ 17.5ರಿಂದ 21 ವರ್ಷ ವಯಸ್ಸಿನವರು ಅಗ್ನಿವೀರರಾಗಬಹುದು, ಮತ್ತೊಂದು ಸಂತಸದ ವಿಷಯವೇನೆಂದರೆ 23ವರ್ಷದವರೆಗೆ ಅವಧಿ ವಿಸ್ತರಿಸಲಾಗಿದೆ. ಏರ್​ಫೋರ್ಸ್​ ನೇಮಕಾತಿ ಜೂನ್ 24ರಿಂದ ಆರಂಭವಾಗಲಿದೆ.

ಅಗ್ನಿಪಥ್ ನೇಮಕಾತಿ (Agnipath) ಯೋಜನೆಗಳ ಅಡಿಯಲ್ಲಿ ‘ಅಗ್ನಿವೀರರ’ ನೇಮಕಾತಿಗೆ ಭಾರತೀಯ ಸೇನೆಗೆ (Indian Army )ಸೋಮವಾರ ಅಧಿಸೂಚನೆ ಹೊರಡಿಸಿದೆ. ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ನಡುವೆ ಈ ಅಧಿಸೂಚನೆ ಹೊರಡಿಸಲಾಗಿದೆ.

ಅಗ್ನಿವೀರ್ (Agniveer) ಜನರಲ್ ಡ್ಯೂಟಿ, ಅಗ್ನಿವೀರ್ ಟೆಕ್ನಿಕಲ್, ಅಗ್ನಿವೀರ್ ಟೆಕ್ನಿಕಲ್ (ವಿಮಾನಯಾನ/ಮದ್ದುಗುಂಡು ಪರೀಕ್ಷಕ), ಅಗ್ನಿವೀರ್ ಕ್ಲರ್ಕ್/ಸ್ಟೋರ್ ಕೀಪರ್ ಟೆಕ್ನಿಕಲ್, ಅಗ್ನಿವೀರ್ ಟ್ರೇಡ್ಸ್‌ಮ್ಯಾನ್ (10 ನೇ ಪಾಸ್) ಮತ್ತು ಅಗ್ನಿವೀರ್ ಟ್ರೇಡ್ಸ್‌ಮ್ಯಾನ್‌ (ಎಆರ್ ಒ ರಾಲಿ ವೇಳಾಪಟ್ಟಿಯ ಪ್ರಕಾರ 8 ನೇ ಪಾಸ್) ನೋಂದಣಿಗಳನ್ನು ಜುಲೈನಿಂದ ಆಯಾ ಸೇನಾ ನೇಮಕಾತಿ ಕಚೇರಿಗಳಲ್ಲಿ (ARO) ಆರಂಭವಾಗಲಿದೆ

ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

TV9 Kannada


Leave a Reply

Your email address will not be published.