ತಮ್ಮ ಹುಟ್ಟೂರು ಬಿಡ್ತಿದ್ದಾರಾ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಎಂ.ಎಸ್ ಧೋನಿ..?

ತಮ್ಮ ಹುಟ್ಟೂರು ಬಿಡ್ತಿದ್ದಾರಾ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಎಂ.ಎಸ್ ಧೋನಿ..?

ಐಪಿಎಲ್ ಸ್ಥಗಿತದ ಬಳಿಕ ರಾಂಚಿಯ ಫಾರ್ಮ್​ಹೌಸ್‌ನಲ್ಲಿ ವಿಶ್ರಾಂತಿ ಪಡೆಯುತ್ತಿರೋ ಮಾಜಿ ನಾಯಕ ಎಂ.ಎಸ್.ಧೋನಿ, ಸದ್ಯ ಕುಟುಂಬದ ಜೊತೆ ಕಾಲಕಳೆಯುತ್ತಾ ಸಖತ್ ಎಂಜಾಯ್ ಮಾಡ್ತಿದ್ದಾರೆ. ಆದ್ರೆ ಈ ನಡುವೆ ಪುಣೆಯ ಪಿಂಪಿರಿ ಚಿಂಚಿವಾಡ್‌ನಲ್ಲಿ ಅದ್ದೂರಿ ಬಂಗಲೆ ಖರೀದಿಸಿದ್ದಾರೆ. ಸದ್ಯ ರಾಂಚಿಯಲ್ಲಿ ವಾಸಿಸುತ್ತಿರುವ ಧೋನಿ, ಕುಟುಂಬ ಸಮೇತ ಪುಣೆಗ ಶಿಫ್ಟ್ ಆಗೋ ಸಾಧ್ಯತೆ ಇದೆ ಎನ್ನಲಾಗ್ತಿದೆ.

ಇತ್ತೀಚಿಗಷ್ಟೆ ಮುಂಬೈನ ಫೇಮಸ್ ಅಪಾರ್ಟ್‌ಮೆಂಟ್​​ವೊಂದರಲ್ಲಿ ಮನೆ ಖರೀದಿಸಿದ ಬೆನ್ನಲ್ಲೇ ಧೋನಿ, ಈಗ ಪುಣೆಯಲ್ಲೂ ಹೊಸ ಮನೆ ಖರೀದಿಸಿ ಸುದ್ದಿಯಾಗಿದ್ದಾರೆ. ಹಲವು ಬ್ಯುಸಿನೆಸ್​ಗಳಲ್ಲಿ ಹಣವನ್ನ ಹೂಡಿಕೆ ಮಾಡಿರುವ ಧೋನಿ, ಎಮ್​ಎಸ್​ಡಿ ಎಂಟರ್​ಟೈಟ್ಮೆಂಟ್​​ ಸಂಸ್ಥೆ ಮೂಲಕ ಮನೋರಂಜನೆ ಕ್ಷೇತ್ರಕ್ಕೂ ಕಾಲಿಟ್ಟಿದ್ದರು. ಕೃಷ್ಟಿ ಕ್ಷೇತ್ರದಲ್ಲೂ ತಮ್ಮನ್ನ ತೊಡಗಿಸಿಕೊಂಡಿರುವ ಧೋನಿ, ಮುಂದೆ ಯಾವುದರ ಮೇಲೆ ಹಣ ಹೂಡಿಕೆ ಮಾಡ್ತಾರೆ ಅನ್ನೋದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.

 

The post ತಮ್ಮ ಹುಟ್ಟೂರು ಬಿಡ್ತಿದ್ದಾರಾ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಎಂ.ಎಸ್ ಧೋನಿ..? appeared first on News First Kannada.

Source: newsfirstlive.com

Source link