ತಯಾರಾಗುತ್ತಿರುವ ಪುನೀತ್ ರಾಜಕುಮಾರ್ ಪುತ್ಥಳಿ ನೋಡಿ ಭಾವುಕರಾಗಿ ಅದಕ್ಕೆ ಮುತ್ತಿಟ್ಟರು ರಾಘವೇಂದ್ರ ರಾಜಕುಮಾರ್ | Raghavendra Rajkumar turns emotional while watching Puneeth Rajkumar’s bust being made by an artist


ಡಾ ರಾಜಕುಮಾರ ಅವರ ಮಕ್ಕಳ ನಡುವೆ ಎಂಥ ಅನ್ಯೋನ್ಯ ಸಂಬಂಧವಿದೆ ಅನ್ನೋದು ಕನ್ನಡಿಗರಿಗೆ ಮೊದಲಿನಿಂದಲೂ ಗೊತ್ತಿತ್ತು. ಪುನೀತ್ ರಾಜಕುಮಾರ್ ಸಾವಿನ ನಂತರ ಅದು ಜಗಜ್ಜಾಹೀರಾಗಿದೆ. ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್ ಮತ್ತು ಪುನೀತ್ ರಾಜಕುಮಾರ ಬೇರೆ ಬೇರೆ ಮನೆಗಳಲ್ಲಿ ವಾಸವಾಗಿದ್ದರೂ ಆಣ್ಣಾವ್ರು ಬದುಕಿದ್ದಾಗ ಮತ್ತು ಎಲ್ಲರೂ ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದಾಗ ಇದ್ದ ಬಾಂಧವ್ಯ ಈಗಲೂ ಇದೆ.

ಇದನ್ನೆಲ್ಲ ಯಾಕೆ ಹೇಳಬೇಕಾಗಿದೆಯೆಂದರೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೌಕರರ ಕನ್ನಡ ಸಂಘದ ಸದಸ್ಯರು ಬಿ ಬಿ ಎಮ್ ಪಿ ಕೇಂದ್ರ ಕಚೇರಿ ಆವರಣದಲ್ಲಿ ಪುನೀತ್ ರಾಜ್ಕುಮಾರ್ ಅವರ ಪುತ್ಥಳಿಯನ್ನು ಪ್ರತಿಷ್ಠಾಪಿಸುವ ನಿರ್ಣಯ ತೆಗೆದುಕೊಂಡಿದ್ದು ಅದನ್ನು ನಿರ್ಮಿಸುವ ಜವಾಬ್ದಾರಿಯನ್ನು ಬನಶಂಕರಿ ನಿವಾಸಿ ಮತ್ತು ಕ್ರಿಯೇಟಿವ್ ಆರ್ಟ್ ಡೈರೆಕ್ಟರ್ ಶಿವದತ್ ಅವರಿಗೆ ಒಪ್ಪಿಸಿದ್ದಾರೆ.

ಪುತ್ಥಳಿ ನಿರ್ಮಾಣ ಕೆಲಸ ಪ್ರಗತಿಯನ್ನು ವೀಕ್ಷಿಸಲು ಮಂಗಳವಾರದಂದು ಪುನೀತ್ ಅವರ ಎರಡನೇ ಅಣ್ಣ ರಾಘಣ್ಣ ಆಗಮಿಸಿದ್ದರು. ಪುತ್ಥಳಿಯನ್ನು ಕಂಡು ಭಾವುಕರಾದ ಅವರು ಅದಕ್ಕೆ ಪ್ರೀತಿಯಿಂದ ಮುತ್ತಿಟ್ಟರು. ಹಾಗೆಯೇ ಬಹಳ ಸುಂದರವಾಗಿ ಅದನ್ನು ತಯಾರಿಸುತ್ತಿರುವ ಕಲಾವಿದ ಶಿವದತ್ ಅವರ ಪರಿಶ್ರಮ ಮತ್ತು ನೈಪುಣ್ಯತೆಯನ್ನು ಕೊಂಡಾಡಿದರು.

ಶಿವದತ್ ಅವರು ಪುನೀತ್ ಆಸ್ತಂಗತರಾದ 4 ದಿನಗಳ ನಂತರ ಪುತ್ಥಳಿ ನಿರ್ಮಿಸುವ ಕಾರ್ಯ ಕೈಗೆತ್ತಿಕೊಂಡಿದ್ದಾರೆ. ಇಲ್ಲಿಯವರೆಗೆ ಅರ್ಧಕ್ಕಿಂತ ಹೆಚ್ಚಿನ ಕೆಲಸ ಮುಗಿದಿದೆ ಎಂದು ಅವರು ಹೇಳಿದ್ದಾರೆ. ಇನ್ನೆರಡು ದಿನಗಳಲ್ಲಿ ಶಿವಣ್ಣ ಸಹ ಪುತ್ಥಳಿಯನ್ನು ನೋಡಲು ಹೋಗಲಿದ್ದಾರಂತೆ.

ಇದನ್ನೂ ಓದಿ:   ಮೈಸೂರಿನಲ್ಲಿ ಮಳೆ ಅವಾಂತರಕ್ಕೆ ರೊಚ್ಚಿಗೆದ್ದ ಜನರು; ಅವ್ಯವಸ್ಥೆಯ ಬಗ್ಗೆ ವಿಡಿಯೋ ಮಾಡಿ ತೀವ್ರ ಆಕ್ರೋಶ

TV9 Kannada


Leave a Reply

Your email address will not be published. Required fields are marked *