ಬಿಗ್‍ಬಾಸ್ ಸ್ಪರ್ಧಿಗಳಲ್ಲಿ ಸುದೀಪ್ ಅವರು ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿದ್ದಾರೆ. ಈ ಸಂದರ್ಭ ಶುಭಾ ಅವರು ಸೋಲು ಗೆಲುವಿಗಿಂತ ಟಾಸ್ಕ್ ನಲ್ಲಿ ಭಾಗವಹಿಸುವುದು ಮುಖ್ಯ ಎಂಬುದನ್ನು ಅಡುಗೆಯಲ್ಲೂ ಬಳಸುತ್ತಾರೆ. ರುಚಿ ಮುಖ್ಯ ಅಲ್ಲ ಭಾಗವಹಿಸಿದರೆ ಸಾಕು ಎಂಬುದು ಅವರ ಒಂದು ಭಾವನೆಯಾಗಿದೆ ಇದು ಯಾರಿಗೆಲ್ಲಾ ಸರಿ? ಯಾರಿಗೆಲ್ಲಾ ತಪ್ಪು ಅನಿಸಿದೆ ಎಂದು ಕೇಳಿದ್ದಾರೆ.

ಸ್ಪರ್ಧಿಗಳಲ್ಲಿ ವೈಷ್ಣವಿ ಮತ್ತು ಪ್ರಿಯಾಂಕ ಅವರು ನೋ ಎಂದಿದ್ದಾರೆ ಉಳಿದ ಸ್ಪರ್ಧಿಗಳು ಯಸ್ ಎಂದು ಉತ್ತರಿಸಿದ್ದಾರೆ. ಬಳಿಕ ಸುದೀಪ್ ಅವರು ಯಾಕೆ ಎಸ್ ಎಂದು ಹೇಳಿದ್ದೀರಿ ಎಂದು ದಿವ್ಯಾ ಉರುಡುಗ ಅವರನ್ನು ಕೇಳಿದ್ದಾರೆ ದಿವ್ಯಾ ಅವರು, ಶುಭಾ ಅವರು ಬೆಂಡೆಕಾಯಿಯನ್ನು ಎರಡು ಭಾಗಳಲ್ಲಿ ಕಟ್ ಮಾಡಿ ವಾಪಸ್ ಪಲ್ಯಕ್ಕೆ ಹಾಕುತ್ತಾಳೆ. ಹುಳ ಇದ್ಯಾ ಅಂತನು ನೋಡಲ್ಲ. ಹುಳ ಇದ್ದರೆ ಯಾಕೆ ನೀನು ಅದನ್ನೇಲ್ಲ ತಿನ್ನಬೇಕು. ನೀನು ಇನ್ನೂ ಗಟ್ಟಿ ಆಗುತ್ತೀಯ ಎಂದು ಹೇಳುತ್ತಾರೆ ಎಂದರು.

ಎಲ್ಲರ ಅಭಿಪ್ರಾಯದ ಬಳಿಕ ಶುಭಾ ಪೂಂಜಾ, ನಾನು ಯಾವ ಕೆಲಸ ಮಾಡಿದರೂ ಕೂಡ ಅದನ್ನು ಇವರು ಮತ್ತೆ ಮಾಡಬೇಕೆಂಬ ಅಭಿಪ್ರಾಯ ಇದೆ. ಹಾಗಾಗಿ ಕೆಲಸಕ್ಕೆ ಬರೋದೆ ಬೇಡ ಅಂತಾರೆ. ನನ್ನ ಪ್ರಕಾರ ಈರುಳ್ಳಿ ಕಟ್ ಮಾಡಿದರೆ ಅದರಲ್ಲಿ ಸ್ವಪ್ಪ ಸಿಪ್ಪೆ ಕೂಡ ಇರಬೇಕು ಅದು ಇದ್ದರೆ ಏನು ಆಗಲ್ಲ. ನಾವು ಎಲ್ಲನೂ ಕ್ಲೀನ್ ಆಗ್‍ಬೇಕು ಅಂದಕೊಂಡರೆ ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಾಗಲ್ಲ ಎಂದರು. ಇದನ್ನೂ ಓದಿ: ‘ಡಿಯು ಮನೆಯವರಿಗೂ ಗೊತ್ತಾಯ್ತು ಅರವಿಂದ್ ಆಟ’

ಸುದೀಪ್ ಅವರು ಈರುಳ್ಳಿ ಸಿಪ್ಪೆ ತಿಂದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದು ಪ್ರಪಂಚಕ್ಕೆ ಗೊತ್ತಿರಲಿಲ್ಲಾ ನೀವು ಇದೀಗ ಗೊತ್ತು ಮಾಡಿಸಿದ್ದೀರಿ ಎಂದು ಹೇಳಿ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದರು.

The post ತರಕಾರಿಯಲ್ಲಿ ಹುಳ ಇದ್ದರೂ ತಿನ್ಬೇಕು, ಇಮ್ಯೂನಿಟಿ ಬರುತ್ತೆ appeared first on Public TV.

Source: publictv.in

Source link