ಮೋಹಕತಾರೆ ರಮ್ಯ.. ಅಬ್ಬಾ!.. ಇವ್ರ ಬಗ್ಗೆ ಸುದ್ದಿ ಕೇಳಿ ಸುಮಾರ್​ ದಿನ ಆಗ್ಹೋಗಿತ್ತು ಅಲ್ವಾ..? ಎಲ್​ ಇದ್ದಾರಪ್ಪಾ ರಮ್ಯಾ? ಌಕ್ಟಿಂಗ್​ ಬಿಟ್ಬಿಟ್ರಾ? ಏನ್​ ಮಾಡ್ತಿದ್ದಾರೆ ಅವ್ರು ಅವ್ರ ಲೈಫ್​ನಲ್ಲಿ.. ಅನ್ನೋ ಸುಮಾರ್​ ಪ್ರಶ್ನೆಗಳು ಅವರ ಅಭಿಮಾನಿ ಬಳಗದಲ್ಲಿತ್ತು. ನಿನ್ನೆ ಕೊನೆಗೂ ಅವ್ರೆಲ್ಲರ ಪ್ರಶ್ನೆಗಳಿಗೂ ರಮ್ಯ ಉತ್ತರ ಕೊಟ್ಟಿದ್ದಾರೆ.

ಸೋನು ವೇಣುಗೋಪಾಲ್​ ಅನ್ನೋ ಸೋಷಿಯಲ್​ ಮೀಡಿಯಾ ಇನ್​ಫ್ಲ್ಯುಯೆನ್ಸರ್​ ತಮ್ಮ ಇನ್ಸ್​ಟಾಗ್ರಾಂ ಪ್ರೊಫೈಲ್​ನಲ್ಲಿ ರಮ್ಯ ಜೊತೆ‘‘ ಮತ್ತಿನ್ನೇನು ವಿತ್​ ದಿವ್ಯ ಸ್ಪಂದನ’ ಅನ್ನೋ ಲೈವ್ ಸೆಷನ್​ ಮಾಡಿದ್ರು. ಈ ಲೈವ್​ನಲ್ಲಿ, ರಮ್ಯಾ ಸಿಕ್ಕಾಪಟ್ಟೆ ಜಾಲಿಯಾಗಿ ಮಾತು ಕತೆ ಮಾಡಿದ್ದಾರೆ. ತರಕಾರಿ ಅಂಗಡಿಗೆ ಹೋದಾಗ, ನಾನು ಚೌಕಾಸಿ ಮಾಡಲ್ಲ.. ಎಕ್ಸ್​​​ಟ್ರಾ ಹಣವನ್ನೇ ಕೊಡ್ತೀನಿ’ ಅಂತ ರಮ್ಯಾ ಹೇಳಿದ್ರು. ಅಷ್ಟೇ ಅಲ್ಲ, ನೀವ್​ ಎಲ್ಲಿದ್ದೀರಾ ಅನ್ನೋ ಅಭಿಮಾನಿಗಳ ಪ್ರಶ್ನೆಗೆ ರಮ್ಯ, ‘ಮನೆಯಲ್ಲಿದ್ದೀನಿ’ ಅನ್ನೋ ಉತ್ತರವನ್ನ ಕೊಟ್ಟರು.

ತಾವು, ಯಾವ ಊರಿಂದ ಮಾತಾಡ್ತಾಯಿದ್ದೀನಿ ಅನ್ನೋದನ್ನ ಅವ್ರು ಹೇಳಿಲ್ಲ. ಬದಲಾಗಿ, ತಮ್ಮ ಅಕ್ಕ ಪಕ್ಕದ ಮನೆಯವರ ಬಗ್ಗೆ ಮಾತಾಡಿದ್ರು. ಅವ್ರ ಪಕ್ಕದ ಮನೆಯವ್ರು ಪಕ್ಷಿಗಳಂತೆ. ಅಂದ್ರೆ, ತಾವು ಕಾಡಲ್ಲಿರೋದಾಗಿ ಹೇಳಿದ್ರು. ಇದೇ ವೇಳೆ ಕನ್ನಡದ ಸಿಂಗರ್ಸ್​ ಬಗ್ಗೆ ಮಾತಾಡಿದ್ರು. ಜೊತೆಗೆ ವ್ಯಾಕ್ಸಿನೇಷನ್​ ಬಗ್ಗೆಯೂ ಮಾತಾಡಿದ್ರು. ಒಂದು ಲೈವ್​ ಮೂಲಕ ಮೋಹಕತಾರೆ ರಮ್ಯಾ ಎಲ್ಲೆಲ್ಲಿ ಏನೇನ್​ ಮಾಡ್ತಾಯಿದ್ರು.. ಮಾಡ್ತಾಯಿದ್ದಾರೆ ಅನ್ನೋದನ್ನೆಲ್ಲಾ ಹಂಚಿಕೊಂಡ್ರು.

The post ತರಕಾರಿಯವರ ಹತ್ರ ಚೌಕಾಸಿ ಮಾಡಲ್ಲ.. ಹೆಚ್ಚು ಹಣವನ್ನೇ ಕೊಡ್ತೀನಿ- ರಮ್ಯಾ appeared first on News First Kannada.

Source: newsfirstlive.com

Source link