ಬೆಂಗಳೂರು: ಕೊರೊನಾ ಸೋಂಕಿನ ಮೂರನೇ ಅಲೆ ನಿಯಂತ್ರಣಕ್ಕೆ ಏನೆಲ್ಲಾ ಕ್ರಮಗಳನ್ನ ತೆಗೆದುಕೊಳ್ಳಬೇಕು ಅಂತಾ ತಿಳಿದುಕೊಳ್ಳಲು ರಾಜ್ಯ ಸರ್ಕಾರ ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದಲ್ಲಿ ತಜ್ಞರ ಸಮಿತಿಯನ್ನ ರಚನೆ ಮಾಡಿತ್ತು. ಈ ಸಮಿತಿ ಇಂದು ಮಧ್ಯಂತರ ವರದಿಯನ್ನ ಸಲ್ಲಿಸಿದ್ದು, ಶಾಲೆ ಓಪನ್ ಮಾಡಲು ಗ್ರೀನ್ ಸಿಗ್ನಲ್ ನೀಡಿದೆ.

ಆನ್​ಲೈನ್​ ಶಿಕ್ಷಣ ಪರಿಣಾಮಕಾರಿಯಾಗಿಲ್ಲ ಅನ್ನೋದನ್ನ ಅಭಿಪ್ರಾಯ ಪಟ್ಟಿರುವ ತಜ್ಞರ ಸಮಿತಿ, ಶಾಲೆಗಳನ್ನ ಆರಂಭಿಸೋದು ಉತ್ತಮ ಎಂದಿದೆ. ಶಾಲೆಗಳನ್ನ ಆರಂಭಿಸೋದಾದ್ರೆ ಹೇಗೆ ಶುರುಮಾಡಬೇಕು ಅಂತಾ ಒಂದಿಷ್ಟು ಶಿಫಾರಸು ಕೂಡ ಮಾಡಿದೆ. ಅದರ ವಿವರ ಹೀಗಿದೆ.

ಶಾಲೆಗಳಿಗಾಗಿ ತಜ್ಞರ ಶಿಫಾರಸು ಏನು?

 • ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸಲು ಅಗತ್ಯ ಸಿಬ್ಬಂದಿ ನೇಮಕ
 • 60 ವರ್ಷ ಮೇಲ್ಪಟ್ಟ ಸಿಬ್ಬಂದಿಗೆ ವರ್ಕ್ ಫ್ರಮ್‌ ಹೋಮ್‌
 • ಎಲ್ಲಾ ಸಿಬ್ಬಂದಿ ಆರೋಗ್ಯ ಸೇತು ಌಪ್‌ ಹೊಂದಿರಬೇಕು
 • ಶಾಲೆಯ ಸುತ್ತಲಿನ ವಾತಾವರಣ ಸ್ಯಾನಿಟೈಸ್‌ ಆಗಬೇಕು
 • ಶಾಲೆಯ ಎಲ್ಲಾ ಕೊಠಡಿಗೂ ಗಾಳಿ ಆಡೋಕೆ ಸೂಕ್ತ ವ್ಯವಸ್ಥೆ
 • ಸಮರ್ಪಕ ಶೌಚಾಲಯದ ವ್ಯವಸ್ಥೆ, ಕುಡಿಯೋ ನೀರು ವ್ಯವಸ್ಥೆ
 • ಅನಾರೋಗ್ಯ ಪೀಡಿತರಿಗೆ ಅಂತ ಒಂದು ಕೊಠಡಿಯಿರಬೇಕು
 • ಕೋವಿಡ್‌ 19 ಸಿಂಪ್ಟಮ್ಸ್‌ ಬಗ್ಗೆ ಸಿಬ್ಬಂದಿ, ಪೋಷಕರಿಗೆ ಮಾಹಿತಿ
 • ಟೆಲಿಫೋನ್‌, ಮೇಲ್‌, ಪಾಂಪ್ಲೆಟ್‌ ಬಳಸಿ ಎಲ್ಲರಲ್ಲೂ ಜಾಗೃತಿ
 • ಸಾಮಾನ್ಯ ಜ್ವರದ ವ್ಯಾಕ್ಸಿನೇಷನ್‌ ಮಾಡಿಸುವಂತೆ ಪ್ರೋತ್ಸಾಹ
 • ಜ್ವರ ಇರುವ ವಿದ್ಯಾರ್ಥಿಗಳು ಶಾಲೆಗೆ ಬರೋ ಮುನ್ನ ವೈದ್ಯರ ಸಂಪರ್ಕ
 • ಬ್ಯಾಚ್‌ಗಳಂತೆ ಶಾಲೆ ಆರಂಭ, ಮೊದಲು ಹಿರಿಯ ಮಕ್ಕಳಿಗೆ
 • ಸ್ಥಳಾವಕಾಶದ ಕೊರತೆಯಿದ್ದರೆ ಬ್ಯಾಚ್‌ನಂತೆ ತರಗತಿ
 • ಪಾಳಿ ಅಥವಾ ದಿನ ಬಿಟ್ಟು ದಿನ ಪಾಠ ಮಾಡುವ ಪದ್ಧತಿ
 • ಕ್ಲಾಸ್‌ರೂಮ್‌ನಲ್ಲಿ ಎಸಿ ಆನ್‌ ಇರಬಾರದು, ಕಿಟಕಿ ಬಾಗಿಲು ಓಪನ್
 • ವಿದ್ಯಾರ್ಥಿಗಳಿಗೆ ತರಗತಿ ನಡೆಸಲು ಶಾಲಾ ಗ್ರೌಂಡ್‌ನ ಬಳಕೆ ಉತ್ತಮ
 • ವಿದ್ಯಾರ್ಥಿಗಳ ಮಧ್ಯೆ ಕನಿಷ್ಟ 1 ಮೀಟರ್‌ ಅಂತರ ಇರಬೇಕು
 • ಕಡಿಮೆ ಸ್ಟೇಷನರಿ ವಸ್ತುಗಳನ್ನ ತರಬೇಕು, ಹಂಚಿಕೊಳ್ಳಬಾರದು
 • ಹೊರಗಿನವರಿಗೆ ಶಾಲೆ ಪ್ರವೇಶಕ್ಕೆ ಅವಕಾಶ ನೀಡಬಾರದು
 • ಪೋಷಕರೊಂದಿಗೂ ಡಿಜಿಟಲ್‌ ವ್ಯವಸ್ಥೆ ಮೂಲಕವೇ ಮಾತುಕತೆ
 • ಶಾಲೆಯಲ್ಲಿ ಗುಂಪು ಚಟುವಟಿಕೆ ನಡೆಸದಿರುವುದು ಉತ್ತಮ
 • ಎನ್‌ಸಿಸಿ, ಸ್ಕೌಟ್ಸ್‌, ಟೀಮ್‌ ಸ್ಪೋರ್ಟ್ಸ್‌, ಸಾಂಸ್ಕೃತಿಕ ಚಟುವಟಿಕೆ ಬೇಡ
 • ಸ್ವಿಮ್ಮಿಂಗ್‌ ಪೂಲ್‌ಗಳನ್ನ ಯಾವುದೇ ಕಾರಣಕ್ಕೂ ತೆರೀಬಾರದು
 • ಶಾಲಾ ವೆಹಿಕಲ್‌ಗಳಲ್ಲೂ ಗಾಳಿಯಾಡೋ ವ್ಯವಸ್ಥೆಯಿರಬೇಕು
 • ಡ್ರೈವರ್‌, ಸ್ಟಾಫ್‌ ಮಾಸ್ಕ್‌‌, ಫೇಸ್‌ ಶೀಲ್ಡ್‌ ಧರಿಸೋದು ಕಡ್ಡಾಯ
 • 3 ಲೇಯರ್‌ನ ಮಾಸ್ಕ್‌ ವಿದ್ಯಾರ್ಥಿಗಳಿಗೆ, ಸಿಬ್ಬಂದಿಗೆ ಕಂಪಲ್ಸರಿ
 • ಪಾಸಿಟಿವ್‌ ಬಂದ ವಿದ್ಯಾರ್ಥಿ, ಸಿಬ್ಬಂದಿ 14 ದಿನ ಶಾಲೆಯಿಂದ ದೂರ

ಇದನ್ನೂ ಓದಿ: ಶಾಲೆ ಆರಂಭಕ್ಕೆ ತಜ್ಞರ ಸಮಿತಿ ಗ್ರೀನ್​ ಸಿಗ್ನಲ್; ಆದರೆ ಕಂಡಿಷನ್ಸ್​ ಏನು..?

ಇದನ್ನೂ ಓದಿ: ತಜ್ಞರಿಂದ ಶಾಲೆ ಆರಂಭಕ್ಕೆ ಗ್ರೀನ್​ ಸಿಗ್ನಲ್; ‘ಆದರೆ ಸದ್ಯಕ್ಕೆ ಶಾಲೆ ಆರಂಭಿಸಲ್ಲ’ ಎಂದ ಸಿಎಂ

The post ತರಗತಿ ಪುನರಾರಂಭಕ್ಕೆ ಶಾಲೆಗಳು ಹೇಗೆ ಸಿದ್ಧವಾಗಬೇಕು? -ತಜ್ಞರ ಶಿಫಾರಸು ಇಲ್ಲಿದೆ   appeared first on News First Kannada.

Source: newsfirstlive.com

Source link