‘ತಲಾ’ ಧೋನಿಗಾಗಿ ಮತ್ತೊಮ್ಮೆ ಐಪಿಎಲ್ ಗೆಲ್ಲೋಣ- ಸುರೇಶ್ ರೈನಾ

‘ತಲಾ’ ಧೋನಿಗಾಗಿ ಮತ್ತೊಮ್ಮೆ ಐಪಿಎಲ್ ಗೆಲ್ಲೋಣ- ಸುರೇಶ್ ರೈನಾ

ಚೆನ್ನೈ ಸೂಪರ್​ ಕಿಂಗ್ಸ್​ ನಾಯಕ ಎಂಎಸ್​.ಧೋನಿ ಆಡೋದು ಇದೇ ಕೊನೆಯ IPL​​ ಎಂಬ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೆ, ಸುರೇಶ್​ ರೈನಾ ಹೇಳಿದ ಹೇಳಿಕೆ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ಧೋನಿಗಾಗಿ ಈ ಬಾರಿಯ ಐಪಿಎಲ್​ ಟ್ರೋಫಿಯನ್ನ ಗೆಲ್ಲಿಸಿಕೊಡುವುದಾಗಿ ಸುರೇಶ್​ ರೈನಾ ಹೇಳಿದ್ದಾರೆ. ರೈನಾರ ಈ ಹೇಳಿಕೆ, ಕ್ರಿಕೆಟ್​ ವಲಯದಲ್ಲಿ ಸಖತ್​ ಹಾಟ್​ ಟಾಪಿಕ್​ ಆಗಿದೆ. ಅಲ್ಲದೇ, ಧೋನಿಯದ್ದು ಇದೇ ಕೊನೆಯ IPL ಅನ್ನೋದಕ್ಕೆ ಮತ್ತೊಮ್ಮೆ ಪುಷ್ಟಿ ನೀಡಿದೆ. ತಂಡದಲ್ಲಿ ಆಟಗಾರರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡುತ್ತಾರೆ. ಸ್ಯಾಮ್​​ ಕರನ್​​, ಮೊಯಿನ್​ ಅಲಿ, ಡ್ವೇನ್​ ಬ್ರಾವೋ, ಋತುರಾಜ್​ ಗಾಯಕ್ವಾಡ್​​ರಂತಹ ಆಟಗಾರರ ಯಶಸ್ಸಿಗೆ, ಧೋನಿಯೇ ಕಾರಣರಾಗಿದ್ದಾರೆ. ಹಾಗಾಗಿ ಈ ವರ್ಷ ಧೋನಿಗಾಗಿ ನಾವೆಲ್ಲಾ ಸೇರಿ ಟ್ರೋಫಿ ಗೆಲ್ಲಿಸಿಕೊಡುವ ಭರವಸೆ ಇದೆ ಎಂದು ರೈನಾ ಹೇಳಿದ್ದಾರೆ. ಸದ್ಯ ನಮಗೀಗ ಆತ್ಮವಿಶ್ವಾಸ ಹೆಚ್ಚಾಗಿದೆ. ನಾನು ಕೂಡ ಧೋನಿಯಿಂದ ಕಲಿತಿರೋದು ಸಾಕಷ್ಟಿದೆ. ನನಗೆ ದೊಡ್ಡ ಅಣ್ಣನ ಸಮಾನ. ಹಾಗೆಯೇ ನಮ್ಮಿಬರ ಮಧ್ಯೆ ವಿಶೇಷ ಬಾಂಧವ್ಯ ಇದೆ ಎಂದು ರೈನಾ ಹೇಳಿದ್ದಾರೆ.

The post ‘ತಲಾ’ ಧೋನಿಗಾಗಿ ಮತ್ತೊಮ್ಮೆ ಐಪಿಎಲ್ ಗೆಲ್ಲೋಣ- ಸುರೇಶ್ ರೈನಾ appeared first on News First Kannada.

Source: newsfirstlive.com

Source link