ಬೆಂಗಳೂರು: ಕೋಟಿ ರಾಮು ಎಂದೇ ಖ್ಯಾತಿ ಪಡೆದಿದ್ದ ನಿರ್ಮಾಪಕ ರಾಮು ಕೊರೊನಾದಿಂದ ನಿಧನರಾಗಿದ್ದರೆ ಎಂದರೇ ಇಂದಿಗೂ ಯಾರಿಂದಲೂ ನಂಬಲು ಸಾಧ್ಯವಾಗುತ್ತಿಲ್ಲ. ಹಲವಾರು ಹಿಟ್ ಸಿನಿಮಾಗಳನ್ನು ನೀಡಿದ ರಾಮುರನ್ನು ಕಳೆದುಕೊಂಡ ಚಂದನವನಕ್ಕೆ ಬರಿಸಲಾಗದ ನಷ್ಟವುಂಟಾಗಿದೆ.

ಪತಿಯ ಅಗಲಿಕೆಯಿಂದ ನೊಂದಿರುವ ನಟಿ ಮಾಲಾಶ್ರೀಗೆ ಸ್ಯಾಂಡಲ್‍ವುಡ್‍ನ ಅನೇಕ ಕಲಾವಿದರು ಸಾಂತ್ವನ ಹೇಳುತ್ತಿದ್ದಾರೆ. ಇದೀಗ ನವರಸ ನಾಯಕ ಜಗ್ಗೇಶ್ ಕೂಡ ಮಾಲಾಶ್ರೀಯವರಿಗೆ ಟ್ವಿಟ್ಟರ್ ಮೂಲಕ ಸಮಾಧಾನ ಪಡಿಸುವ ಪ್ರಯತ್ನ ಮಾಡಿದ್ದಾರೆ.

‘ಮೇಡಂ ನಿಮ್ಮ ಸಂಕಷ್ಟದಲ್ಲಿ ಭಾಗಿ ಆಗುವ ಯೋಗ್ಯತೆ ಇಲ್ಲದಂತೆ ಮಾಡಿದ ಈ ಸಮಯಕ್ಕೆ ತಲೆಬಾಗಿ ಕ್ಷಮೆ ಕೋರುವೆ. ತಮ್ಮ ನೋವಿಗೆ ಸಾಂತ್ವನ ಹೇಳುವ ಶಕ್ತಿಮಾತ್ರ ಉಳಿದಿದೆ. ಕನ್ನಡ ಚಿತ್ರರಂಗಕ್ಕೆ ಅನನ್ಯ ಸೇವೆ ಮಾಡಿ ಅನೇಕ ಚಿತ್ರರಂಗದ ಕಾರ್ಮಿಕರಿಗೆ ಅನ್ನ ನೀಡಿದ ಮಹನೀಯ ನನ್ನ ತಮ್ಮ ರಾಮು. ಅವನ ಆತ್ಮಕ್ಕೆ ಶಾಂತಿಕೋರಿ ನಿಮ್ಮ ಮನೆಯಲ್ಲೆ ರಾಮು ಹುಟ್ಟಿಬರಲಿ ಎಂದು ರಾಯರಲ್ಲಿ ಪ್ರಾರ್ಥನೆ.

ದಯಮಾಡಿ ನೀವು ಧೈರ್ಯದಿಂದ ಈ ಸಂಕಷ್ಟ ಎದುರಿಸಿ ಮಕ್ಕಳನ್ನು ರಾಮು ಎತ್ತರಕ್ಕೆ ಬೆಳಸಿ. ನಿಮ್ಮ ಜೊತೆ ನಾವು ಉದ್ಯಮದ ಎಲ್ಲಾ ಸ್ನೆಹಿತರು ಸದಾ ಇರುತ್ತೇವೆ. ಮುಂದಿನ ಸಾಂಸಾರಿಕ ಜೀವನ ನಿಭಾಯಿಸುವ ಶಕ್ತಿ ರಾಯರು ನಿಮಗೆ ನೀಡಲಿ ನಿಮ್ಮ ಕಲಾಬಂಧು ಎಂದು ಟ್ವೀಟ್ ಮಾಡಿದ್ದಾರೆ.

ಈ ಮುನ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಶ್ರುತಿ, ಸುದೀಪ್, ಮಾಳವಿಕ ಅವಿನಾಶ್, ಶ್ರೀ ಮುರುಳಿ ಸೇರಿದಂತೆ ಅನೇಕ ಕಲಾವಿದರೂ ಸಾಂತ್ವನ ಹೇಳಿದ್ದರು.

The post ತಲೆಬಾಗಿ ಕ್ಷಮೆ ಕೋರುವೆ – ಮಾಲಾಶ್ರೀಗೆ ಜಗ್ಗೇಶ್ ಹೀಗೆಳಿದ್ದೇಕೆ ಗೊತ್ತಾ? appeared first on Public TV.

Source: publictv.in

Source link