ಮಂಡ್ಯ: ಕಾಂಗ್ರೆಸ್ ಮುಖಂಡ ಇಮ್ರಾನ್ ಪಾಶಾ ನೀಡಿರೋ ಆಕ್ಷೇಪಾರ್ಹ ಹೇಳಿಕೆಗೆ ಸ್ಪಷ್ಟನೆ ನೀಡೋ ಭರದಲ್ಲಿ ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮೊಹಮ್ಮದ ನಲಪಾಡ್ ಮತ್ತೊಂದು ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಈ ದೇಶಕ್ಕೋಸ್ಕರ ನಮ್ಮ ತಲೆಯನ್ನು ಕಡಿಸಿಕೊಳ್ಳುತೇವೆ ಅದರ ಜೊತೆಗೆ ನಾವು ತಲೆಯನ್ನು ಕಟ್ ಮಾಡೋಕು ರೆಡಿ ಇದ್ದೀವಿ. ಆದರೆ ನಾವು ತಪ್ಪಲ್ಲಿ ಭಯಪಟ್ಟು ತಲೆಯನ್ನು ಬಗ್ಗಿಸಲು ತಯಾರಿಲ್ಲ..ನಾವು ತಲೆಯನ್ನು ಕಟ್ ಮಾಡಿಸೋರು ಎಂದಿದ್ದಾರೆ.
ಇನ್ನು ಅವರು ಹೇಳಿರುವ ಹೇಳಿಕೆಯನ್ನು ಮಾಧ್ಯಗಳಲ್ಲಿ ತಪ್ಪಾಗಿ ಅರ್ಥೈಸಲಾಗಿದೆ. ಬಿಜೆಪಿಯವರು ಕೂಡ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆಂದು ಆರೋಪಿಸಿತ್ತಿದ್ದಾರೆ. ಬಿಜೆಪಿಯವ್ರಿಗೆ ಹಿಂದಿ ಬರಲ್ಲ ಮೊದಲು ಅವರು ಹಿಂದಿ ಕ್ಲಾಸ್ಗೆ ಹೋಗಿ ಹಿಂದಿ ಕಲಿಯಲಿ ಎಂದು ನಲಪಾಡ್ ಹೇಳಿದ್ದಾರೆ.