ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಕಲ್ಗುಡಿಯ ನಿವಾಸಿ ಹಜರತ್ ಬಳಿಗಾರ ಕಾಲಿನಿಂದ ಚಿತ್ರ ಬಿಡಿಸುವ ಕಲಾವಿದ.

ಕೊಪ್ಪಳದ ಸರ್ಕಾರಿ ಕಾಲೇಜಿನಲ್ಲಿ ಪದವಿ ಓದುತ್ತಿರುವ ಹಜರತ್, ನಗರದ ಅಲ್ಪಸಂಖ್ಯಾತರ ವಸತಿ ನಿಲಯದಲ್ಲಿದ್ದನು. ಆದ್ರೆ ಕೊರೊನಾ ಲಾಕ್‍ಡೌನ್ ಆಗಿದ್ದರಿಂದ ಮನೆಗೆ ಬಂದಿದ್ದ ಹಜರತ್ ಓದಿನ ಜೊತೆಯಲ್ಲಿ ವಿಶೇಷ ಕಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಚಿತ್ರ ಬಿಡಿಸೋದು ದೊಡ್ಡ ಸವಾಲಿನ ಕೆಲಸ. ಆದರೆ ಹಜರತ್ ಈ ಸವಾಲಿನ ಕೆಲಸವನ್ನು ವಿಭಿನ್ನವಾಗಿ ಮಾಡುವ ಮೂಲಕ ಕಲಾಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದ್ದಾನೆ.

ಹಜರತ್ ತಂದೆ ಚಾಂದ್‍ಪಾಶಾ ಕೃಷಿಕರಾಗಿದ್ದು, ತಾಯಿ ಅಲ್ಲಾಭಿ ಬಳೆ ವ್ಯಾಪಾರ ಮಾಡುತ್ತಾರೆ. ಹಜರತ್‍ಗೆ ಇಮಾಮ್ ಅನ್ನೋ ಪುಟ್ಟ ತಮ್ಮನಿದ್ದಾನೆ. ಚಿತ್ರಕಲೆ ಜೊತೆ ಓದಿನಲ್ಲಿ ಮುಂದಿರುವ ಹಜರತ್ ಶಿಕ್ಷಕರಿಗೂ ಅಚ್ಚುಮೆಚ್ಚು. ಇದನ್ನೂ ಓದಿ: ಜೋಕಾಲಿಯಿಂದ 6,300 ಅಡಿ ಕೆಳಗೆ ಬಿದ್ದ ಮಹಿಳೆಯರು- ವೀಡಿಯೋ ವೈರಲ್

ಲಾಕ್‍ಡೌನ್ ಸಮಯವನ್ನು ಸದುಪಯೋಗಪಡಿಸಿಕೊಂಡಿರುವ ಹಜರತ್, ತಲೆ ಕೆಳೆಗಾಗಿ ಮತ್ತು ಕಾಲಿನಿಂದಲೂ ಚಿತ್ರ ಬಿಡಿಸುವ ಕಲೆಯನ್ನ ಕರಗತ ಮಾಡಿಕೊಂಡಿದ್ದಾನೆ. ಹಜರತ್ ಕುಂಚದಲ್ಲಿ ಸ್ವಾತಂತ್ರ್ಯ ಹೋರಾಟಗಾರರು, ಅಬ್ದುಲ್ ಕಲಾಂ, ಅಂಬೇಡ್ಕರ್, ಧೋನಿ, ವಿರಾಟ್ ಕೊಹ್ಲಿ ಸೇರಿದಂತೆ ಹಲವು ಗಣ್ಯರ ಚಿತ್ರಗಳು ಅರಳಿವೆ. ಇದನ್ನೂ ಓದಿ: ಇಂಜಿನೀಯರ್ ಬಾಳಿಗೆ ಆಸರೆಯಾದ ನರೇಗಾ – ಹೆಚ್ಚಿನ ವಿದ್ಯಾಭ್ಯಾಸಕ್ಕೆ ಕೂಲಿ ಹಣ ಬಳಕೆ

The post ತಲೆ ಕೆಳಗಾಗಿ ಚಿತ್ರ ಬಿಡಿಸುವ ಗಂಗಾವತಿಯ ಯುವ ಕಲಾವಿದ appeared first on Public TV.

Source: publictv.in

Source link