ಮಂಡ್ಯ: ಅಮೆರಿಕದ  ಸರ್ಜನ್ ಜನರಲ್ ಆಗಿರುವ ಡಾ.ವಿವೇಕ್ ಮೂರ್ತಿ ಅವರು ಕೊರೊನಾ ಸಂಕಷ್ಟದಲ್ಲಿ ಹುಟ್ಟೂರಿನ ಜಿಲ್ಲೆಗೆ ನೆರವಾಗಿದ್ದಾರೆ. ಡಾ.ವಿವೇಕ್ ಮೂರ್ತಿ ಅವರು 1.40 ಕೋಟಿ ರೂಪಾಯಿ ಮೌಲ್ಯದ ವೈದ್ಯಕೀಯ ಸಲಕರಣೆಗಳನ್ನು ಮಂಡ್ಯ ಮತ್ತು ಮಡಿಕೇರಿ ಜಿಲ್ಲೆಗಳಿಗೆ ನೀಡಿದ್ದಾರೆ.

ಮಂಡ್ಯಗೆ 74 ಲಕ್ಷ, ಮಡಿಕೇರಿಗೆ 67 ಲಕ್ಷ ರೂಪಾಯಿ ಮೌಲ್ಯದ ವೈದ್ಯಕೀಯ ಸಲಕರಣೆಗಳನ್ನು ನೀಡಿದ್ದಾರೆ. ಮೂಲತಃ ಮಂಡ್ಯ ತಾಲೂಕಿನ ಹಲ್ಲೇಗೆರೆ ಗ್ರಾಮದ ಡಾ.ವಿವೇಕ್ ಮೂರ್ತಿ ಅವರು ಕೊರೊನಾ ಸಂಕಷ್ಟದಲ್ಲಿ ತವರೂರಿಗೆ ಸಹಾಯದ ಹಸ್ತ ನೀಡಿದ್ದಾರೆ. ಮಂಡ್ಯದ ಮಿಮ್ಸ್ ಆಸ್ಪತ್ರೆಗೆ 70, ಆಕ್ಸಿಜನ್ ಕಾನ್ಸಂಟ್ರೇಟರ್ಸ್, 25 ಡಿಜಿಟಲ್ ಥರ್ಮಾಮೀಟರ್, 1,96,000 ಓ-95 ಮಾಸ್ಕ್, 500 ಫೇಸ್ ಶೀಲ್ಡ್, 400 ಗ್ಲೌಸ್, 50 ಆಕ್ಸಿಜನ್ ಕ್ಯಾನುಲಾ, 5 ವೋಲ್ಟೇಜ್ ಟ್ರಾನ್ಸ್ ಫಾರ್ಮರ್ಸ್‍ನ್ನು ಕೊಡುಗೆ ಆಗಿ ಅವರ ಚಿಕ್ಕಪ್ಪ ವಸಂತ ಕುಮಾರ್ ಅವರಿಂದ ಸಚಿವ ನಾರಾಯಣ ಗೌಡ ಅವರಿಗೆ ಹಸ್ತಾಂತರ ಮಾಡಿದ್ದಾರೆ.

ಇದೇ ವೇಳೆ ಮಾತನಾಡಿದ ಡಾ.ವಿವೇಕ್ ಮೂರ್ತಿ ಚಿಕ್ಕಪ್ಪ ವಸಂತಕುಮಾರ್, ಇಲ್ಲಿನ ಪರಿಸ್ಥಿತಿಯನ್ನು ಅರಿತು ವಿವೇಕ್ ಮೂರ್ತಿ ಅವರು ಇದನ್ನು ಕೊಡುಗೆಯಾಗಿ ನೀಡಿದ್ದಾರೆ. ಅವರು ನನ್ನನೊಂದಿಗೆ ದೂರವಾಣಿಯಲ್ಲಿ ಮಾತಾನಾಡಿದಾಗ, ಅಮೆರಿಕದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಅಲ್ಲೂ ಸಹ ಲಸಿಕೆಯನ್ನು ಬೇಗ ನೀಡಲಾಗಿದೆ. ಜನರು ಕೊರೊನಾ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿದರೆ ಬೇಗ ನಿಯಂತ್ರಣಕ್ಕೆ ಬರುತ್ತದೆ ಎಂದು ಹೇಳಿದರು ಅಂತ ತಿಳಿಸಿದರು.

The post ತವರೂರಿನ ಸಂಕಷ್ಟಕ್ಕೆ ಸ್ಪಂದಿಸಿದ ಡಾ.ವಿವೇಕ್ ಮೂರ್ತಿ appeared first on Public TV.

Source: publictv.in

Source link