ಬೆಂಗಳೂರು: ವಿವಿಧ ವಲಯಗಳಿಂದ ಲಾಕ್​ಡೌನ್​ ಸಡಿಲಿಕೆ ಬಗ್ಗೆ ಒತ್ತಾಯಗಳು ಬರುತ್ತಿದೆ. ಕೊರೊನಾ ಪಾಸಿಟಿವಿಟಿ ದರ, ಜನರ ಆರೋಗ್ಯದ ಹಿತದೃಷ್ಟಿಯನ್ನ ಗಮನದಲ್ಲಿ ಇಟ್ಟುಕೊಂಡು ಕ್ರಮ ಕೈಗೊಳ್ಳಲಾಗುತ್ತದೆ ಅಂತ ಡಿಸಿಎಂ ಡಾ. ಸಿ.ಎನ್​​ ಅಶ್ವತ್ಥ್​​ ನಾರಾಯಣ್ ಹೇಳಿದ್ದಾರೆ.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಾಂತ್ರಿಕ ಸಲಹಾ ಸಮಿತಿ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು. ನಾಳೆ ಸಿಎಂ ಜೊತೆ ಈ ಬಗ್ಗೆ ಚರ್ಚೆ ನಡೆಸಲಾಗುವುದು. ಕೆಲಸದ ಕಾರಣ ನಗರಕ್ಕೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಅದಕ್ಕೆ ನಿರ್ಬಂಧ ಮಾಡಲು ಸಾಧ್ಯವಿಲ್ಲ. ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಸ್ಕೀನಿಂಗ್ ನಡೆಸಲಾಗುತ್ತಿದೆ ಎಂದು ತಿಳಿಸಿದರು.

The post ತಾಂತ್ರಿಕ ಸಲಹಾ ಸಮಿತಿ ವರದಿ ಆಧರಿಸಿ ಅನ್​ಲಾಕ್​ ಬಗ್ಗೆ ಕ್ರಮ -ಡಿಸಿಎಂ appeared first on News First Kannada.

Source: newsfirstlive.com

Source link