ಮೈಸೂರು: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿಚಾರವಾಗಿ ಶಾಸಕ ಜಿ.ಡಿ ದೇವೇಗೌಡ ಹಾಕಿದ್ದ ಸವಾಲಿಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.  ರೋಹಿಣಿ ಸಿಂಧೂರಿ ವಿರುದ್ಧ  ಪ್ರತಾಪ್‌ಸಿಂಹ ಇತ್ತೀಚೆಗೆ ವಾಗ್ದಾಳಿ ನಡೆಸಿದ ಹಿನ್ನೆಲೆ ಶಾಸಕ ಜಿ.ಟಿ ದೇವೇಗೌಡ ಗರಂ ಆಗಿದ್ದಾರೆ. ನಿನಗೆ ತಾಕತ್ತಿದ್ದರೆ ಡಿಸಿಯನ್ನ ವರ್ಗಾವಣೆ ಮಾಡಿಸು ಅಂತ ಇಂದು ಬೆಳಗ್ಗೆ ಜಿಟಿಡಿ ಪ್ರತಾಪ್‌ಸಿಂಹ‌ಗೆ ಸವಾಲು ಹಾಕಿದ್ರು.

ಇದಕ್ಕೆ ಪ್ರತಿಕ್ರಿಯಿಸಿ ನಗರದಲ್ಲಿ ಮಾತನಾಡಿದ ಪ್ರತಾಪ್ ಸಿಂಹ, ಅಧಿಕಾರಿಗಳನ್ನ ಟ್ರಾನ್ಸಫರ್ ಮಾಡೋದೇ ತಾಕತ್ತಾದರೆ, ಅಂತಹ ತಾಕತ್ತು ನನಗೆ ಬೇಡ. ಒಬ್ಬ ಸಂಸದನಾಗಿ ನಾನು ನನ್ನ ಕೆಲಸದಲ್ಲಿ ತಾಕತ್ತು ತೋರಿಸಿದ್ದೆನೆ ಎಂದು ಟಾಂಗ್ ಕೊಟ್ಟರು.

ಇದಕ್ಕಿಂತ  ಯಾವ ತಾಕತ್ತು ತೋರಿಸಬೇಕು..?
ಮೈಸೂರಿಗೆ ನಾನು ಹೊರಗಿನವನು. ಆದರೂ ಮೊದಲ ಚುನಾವಣೆಯಲ್ಲಿ ಮೈಸೂರು- ಕೊಡಗಿನ ಜನ ಮೂವತ್ತು ಸಾವಿರ ಅಂತರದ ಮತಗಳಿಂದ ಗೆಲ್ಲಿಸಿದ್ರು. ನನ್ನ ತಾಕತ್ತು ತೋರಿಸಿ ಒಳ್ಳೆಯ ಕೆಲಸ ಮಾಡಿದ್ದರಿಂದಾಗಿ, ಎರಡನೇ ಚುನಾವಣೆಯಲ್ಲಿ ಒಂದು ಲಕ್ಷದ ನಲವತ್ತು ಸಾವಿರ ಮತಗಳಿಂದ ಗೆಲ್ಲಿಸಿದ್ರು. ಇದಕ್ಕಿಂತಲೂ ನಾನು ಯಾವ ತಾಕತ್ತು ತೋರಿಸಬೇಕು. ಡಿಸಿಯನ್ನೋ, ಇನ್ಯಾರೋ ಅಧಿಕಾರಿಯನ್ನ ವರ್ಗಾವಣೆ ಮಾಡಿಸೋದು ರಾಜಕಾರಣಿಗಳಿಗೆ ಕಾಮನ್. ನನ್ನ ದೃಷ್ಟಿಯಲ್ಲಿ ಅದು ಅತ್ಯಂತ ಸಣ್ಣ ಕೆಲಸ. ಅಂತಹ ಸಣ್ಣ ಕೆಲಸವನ್ನ ನಾನು ಮಾಡೋದಿಲ್ಲ. ಸರ್ಕಾರ ಕೊಟ್ಟ ಅಧಿಕಾರಿಗಳ ಜೊತೆಗೆ ಕೆಲಸ ಮಾಡುತ್ತೇನೆ ಎಂದು ಹೇಳಿದ್ರು.

ಹಳ್ಳಿಗಳಿಗೆ ಹೋಗಿ ಅಂತಾ ಹೇಳಿದ್ದೆ ತಪ್ಪಾ..?
ಚಾಮರಾಜನಗರ ಘಟನೆಯಿಂದ ಡಿಸಿಯನ್ನ ಕಟಕಟೆಗೆ ನಿಲ್ಲಿಸುತ್ತಿದ್ರು. ಆವಾಗೆಲ್ಲಾ ಇವ್ರು ಎಲ್ಲಿ ಹೋಗಿದ್ರು..?. ಆಗ ಡಿಸಿ ಪರವಾಗಿ ಧ್ವನಿ ಎತ್ತಿದ್ದು ನಾನೇ. ಡಿಸಿ ಕಾರ್ಯ ವೈಖರಿಗೆ ಎಲ್ಲರೂ ಅಸಮಾಧಾನ ವ್ಯಕ್ತಪಡಿಸಿದ್ರು. ನಾನು ಈಗ ಹೇಳಿರೋದು, ಗ್ರಾಮೀಣಾ ಭಾಗದಲ್ಲಿ ಕೊರೊನಾ ಹೆಚ್ಚಾಗಿದೆ. ಜನ ಕಷ್ಟದಲ್ಲಿದ್ದಾರೆ, ಹಳ್ಳಿಗಳಿಗೆ ಹೋಗಿ ಅಂದೆ. ಹಳ್ಳಿಗಳಿಗೆ ಹೋಗಿ ಅಂತಾ ಹೇಳಿದ್ದೆ ತಪ್ಪಾ..? ಅಂತ ಪ್ರತಾಪ್ ಸಿಂಹ ಪ್ರಶ್ನೆ ಮಾಡಿದ್ರು.

The post ತಾಕತ್ತಿದ್ರೆ ಡಿ.ಸಿ ವರ್ಗಾವಣೆ ಮಾಡಿಸು ಎಂದ ಜಿಟಿಡಿಗೆ ಪ್ರತಾಪ್ ಸಿಂಹ ತಿರುಗೇಟು appeared first on News First Kannada.

Source: newsfirstlive.com

Source link