ಬೆಂಗಳೂರು: ಮಾಸ್ಕ್ ಹಾಕದೇ ಇದ್ದವರಿಗೆ ದಂಡ ಹಾಕಿದ ಮಾರ್ಷಲ್ಗಳಿಗೆ ಜನರು ತರಾಟೆ ತೆಗೆದುಕೊಂಡ ಘಟನೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನಡೆದಿದೆ.
ಮಾಸ್ಕ್ ಧರಿಸದಿದ್ದವರಿಗೆ ಮಾರ್ಷಲ್ಗಳು ದಂಡ ಹಾಕುತ್ತಿದ್ದ ವೇಳೆ, ನಿಮಗ ತಾಕತ್ತಿದ್ದರೆ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯರನ್ನ ಪ್ರಶ್ನೆ ಮಾಡಿ ಅಂತಾ ಆಕ್ರೋಶ ಹೊರಹಾಕಿದ್ದಾರೆ. ಕಾನೂನು ಎಲ್ಲರಿಗೂ ಒಂದೇ ಅಂತಾ ಪ್ರಶ್ನೆ ಮಾಡಿದ ಜನರು, ನಮ್ಮಂತ ಅಮಾಯಕರ ಮೇಲೆ ಮಾತ್ರ ನಿಮ್ಮ ದೌರ್ಜನ್ಯ ನಡೆಯುತ್ತೆ ಅಂತಾ ಕಿಡಿಕಾರಿದ್ದಾರೆ.
ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಠಿಣ ನಿಯಮವನ್ನ ಜಾರಿ ಮಾಡಿದೆ. ಅದರಂತೆ ಮಾರ್ಷಲ್ಗಳು ಕೂಡ ಬೆಂಗಳೂರಲ್ಲಿ ಫೀಲ್ಡಿಗೆ ಇಳಿದಿದ್ದಾರೆ.
The post ‘ತಾಕತ್ತಿದ್ರೆ DKS, ಸಿದ್ದರಾಮಯ್ಯ ಹತ್ತಿರ ಪ್ರಶ್ನೆ ಮಾಡಿ’ -ಫೈನ್ ಕಟ್ಟಿ ಎಂದ ಮಾರ್ಷಲ್ಗೆ ತರಾಟೆ appeared first on News First Kannada.