ತಾಜ್‌ಮಹಲ್‌ನ 500 ಮೀಟರ್‌ ವ್ಯಾಪ್ತಿಯಲ್ಲಿ ವ್ಯಾಪಾರಕ್ಕೆ ನಿರ್ಬಂಧ ಆದೇಶ ಹಿಂಪಡೆದ ಸುಪ್ರೀಂಕೋರ್ಟ್ – Supreme Court withdrew its order that prevented business activities within 500-metre of Taj Mahal


ತಮ್ಮ ಜೀವನೋಪಾಯದ ಹಕ್ಕುಗಳ ಹಿತದೃಷ್ಟಿಯಿಂದ ಆದೇಶವನ್ನು ಮರುಪರಿಶೀಲಿಸುವಂತೆ ಸುಪ್ರೀಂಕೋರ್ಟ್​​ಗೆ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿಯನ್ನು ಆಲಿಸಿದ ನಂತರ, ಸುಪ್ರೀಂಕೋರ್ಟ್ ತನ್ನ ನಿರ್ಧಾರವನ್ನು ಹಿಂತೆಗೆದುಕೊಂಡಿದ್ದು ಈ ಪ್ರದೇಶದಲ್ಲಿ ವ್ಯವಹಾರಗಳನ್ನು ಮುಂದುವರಿಸಲು ಅವಕಾಶ ನೀಡಿತು.

ತಾಜ್‌ಮಹಲ್‌ನ 500 ಮೀಟರ್‌ ವ್ಯಾಪ್ತಿಯಲ್ಲಿ ವ್ಯಾಪಾರಕ್ಕೆ ನಿರ್ಬಂಧ ಆದೇಶ ಹಿಂಪಡೆದ ಸುಪ್ರೀಂಕೋರ್ಟ್

ಸುಪ್ರೀಂ ಕೋರ್ಟ್

ತಾಜ್‌ಮಹಲ್‌ನ (Taj mahal) 500 ಮೀಟರ್‌ ವ್ಯಾಪ್ತಿಯಲ್ಲಿ ವ್ಯಾಪಾರ ಚಟುವಟಿಕೆಗಳನ್ನು ತಡೆಯುವ ತನ್ನ ಆದೇಶವನ್ನು ಸುಪ್ರೀಂಕೋರ್ಟ್ (Supreme Court) ಗುರುವಾರ ಹಿಂಪಡೆದಿದೆ. ವ್ಯಾಪಾರಕ್ಕೆ ತಡೆ ಆದೇಶವು ವ್ಯಾಪಾರದಲ್ಲಿ ತೊಡಗಿರುವ ಸಾವಿರಾರು ನಿವಾಸಿಗಳಿಗೆ ಆಘಾತವನ್ನುಂಟು ಮಾಡಿತ್ತು . ಸುಪ್ರೀಂಕೋರ್ಟ್‌ನ ಆದೇಶದ ನಂತರ,ಅಲ್ಲಿನ ನಿವಾಸಿಗಳು ಮಧ್ಯಪ್ರವೇಶಕ್ಕಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರನ್ನು ಸಂಪರ್ಕಿಸಿದ್ದರು. ತಮ್ಮ ಜೀವನೋಪಾಯದ ಹಕ್ಕುಗಳ ಹಿತದೃಷ್ಟಿಯಿಂದ ಆದೇಶವನ್ನು ಮರುಪರಿಶೀಲಿಸುವಂತೆ ಸುಪ್ರೀಂಕೋರ್ಟ್​​ಗೆ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿಯನ್ನು ಆಲಿಸಿದ ನಂತರ, ಸುಪ್ರೀಂಕೋರ್ಟ್ ತನ್ನ ನಿರ್ಧಾರವನ್ನು ಹಿಂತೆಗೆದುಕೊಂಡಿದ್ದು ಈ ಪ್ರದೇಶದಲ್ಲಿ ವ್ಯವಹಾರಗಳನ್ನು ಮುಂದುವರಿಸಲು ಅವಕಾಶ ನೀಡಿತು.

ಸಂಭ್ರಮಾಚರಣೆ

ತಾಜ್‌ಗಂಜ್ ಪ್ರದೇಶದ ಜನರು ಸಿಹಿ ಹಂಚುವ ಮೂಲಕ ಮತ್ತು ಡ್ರಮ್ ಬಾರಿಸುವ ಮೂಲಕ ಸುಪ್ರೀಂ ಕೋರ್ಟ್‌ನ ತೀರ್ಪಿಗೆ ಸಂಭ್ರಮಾಚರಣೆ ಮಾಡಿದರು. ಕೆಲವು ದುರಾಸೆಯ ಸ್ಥಳೀಯ ಆಡಳಿತ ಅಧಿಕಾರಿಗಳು ಬಹುಶಃ ಇಂತಹ ವಿಧ್ವಂಸಕ ಆದೇಶವನ್ನು ಜಾರಿಗೊಳಿಸಲು ಸುಪ್ರೀಂಕೋರ್ಟ್ ಅನ್ನು ದಾರಿ ತಪ್ಪಿಸಿದ್ದಾರೆ ಎಂದು ಆಗ್ರಾ ಟೂರಿಸ್ಟ್ ವೆಲ್ಫೇರ್ ಚೇಂಬರ್ ಕಾರ್ಯದರ್ಶಿ ವಿಶಾಲ್ ಶರ್ಮಾ ಹೇಳಿದ್ದಾರೆ.

ಶರ್ಮಾ ಅವರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣವನ್ನು ಯಶಸ್ವಿಯಾಗಿ ಪ್ರತಿನಿಧಿಸಿದ್ದಕ್ಕಾಗಿ ತಾಜ್‌ಗಂಜ್ ವೆಲ್ಫೇರ್ ಫೌಂಡೇಶನ್ ಅನ್ನು ಅಭಿನಂದಿಸಿದರು.

“ಇಡೀ ತಾಜ್‌ಗಂಜ್ ಪ್ರದೇಶದ ಸಮೀಕ್ಷೆಯನ್ನು NEERI ಮಾಡುವಂತೆ ಆದೇಶವನ್ನು ರವಾನಿಸುವ ಮೂಲಕ, ಸುಪ್ರೀಂಕೋರ್ಟ್ ತಾಜ್‌ಗಂಜ್ ವ್ಯವಹಾರಗಳ ಕಲ್ಯಾಣದ ಮಹತ್ವವನ್ನು ಗುರುತಿಸಿದೆ” ಎಂದು ಸುಪ್ರೀಂಕೋರ್ಟ್ ನಲ್ಲಿ ತಾಜ್‌ಗಂಜ್ ವ್ಯಾಪಾರಿಗಳನ್ನು ಪ್ರತಿನಿಧಿಸುವ ಹೋಟೆಲ್ ಉದ್ಯಮಿ ಮತ್ತು ತಾಜ್‌ಗಂಜ್ ವೆಲ್ಫೇರ್ ಫೌಂಡೇಶನ್ ಸದಸ್ಯ ಸಂದೀಪ್ ಅರೋರಾ ಹೇಳಿದ್ದಾರೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.