ಆಗ್ರಾ:  ವಿಶ್ವವಿಖ್ಯಾತ ಸ್ಮಾರಕ ತಾಜ್​ಮಹಲ್​​ಗೆ ಹೆಚ್ಚಿನ ಭದ್ರತೆ ಒದಗಿಸಲು ಉತ್ತರಪ್ರದೇಶ ಸರ್ಕಾರ ನಿರ್ಧರಿಸಿದೆ. ಮುಂದಿನ ವರ್ಷದಿಂದ ತಾಜ್ ಮಹಲ್ ಬಳಿ ಇರುವ ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಿಸಲಿದ್ದು, ಇದಕ್ಕಾಗಿ ಸಿಬ್ಬಂದಿಗೆ ಈಗಿನಿಂದಲೇ ವಿಶೇಷ ತರಬೇತಿಗಳಿಗೆ ನೀಡಲಾಗುತ್ತಿದೆ ಅಂತ ಎಡಿಜಿ ವಿನೋದ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

2022ರಿಂದ ತಾಜ್ ಮಹಲ್ ಭದ್ರತೆಯನ್ನು ಹೆಚ್ಚು ಮಾಡಲು ತೀರ್ಮಾನಿಸಲಾಗಿದೆ. ಸ್ಮಾರಕದ ಹಳದಿ ವಲಯದಲ್ಲಿ ಪೋಸ್ಟ್ ಮಾಡಲಾಗಿರೋ ಪೊಲೀಸ್ ಸಿಬ್ಬಂದಿಯನ್ನು ಕಮಾಂಡೋ ತರಬೇತಿಗಾಗಿ ಕಳುಹಿಸಲಾಗುತ್ತಿದೆ. ಇದರಿಂದ ಅವರು ಯಾವುದೇ ಅಹಿತಕರ ಘಟನೆ ಅಥವಾ ತಾಜ್ ಮಹಲ್ ಮೇಲೆ ಯಾವುದೇ ದಾಳಿ ನಡೆದ ಸಂದರ್ಭದಲ್ಲಿ ತ್ವರಿತ ಕ್ರಮ ಕೈಗೊಳ್ಳಬಹುದು ಎಂದು ವಿನೋದ್​ ಕುಮಾರ್​ ಹೇಳಿದ್ದಾರೆ.

ಅಲ್ಲದೆ ತಾಜ್​ಮಹಲ್ ಪ್ರದೇಶದಲ್ಲಿ ಯಾವುದೇ ಡ್ರೋನ್‌ಗಳು ಕಾರ್ಯನಿರ್ವಹಿಸದಂತೆ ತಡೆಯಲು ಯುಪಿ ಪೊಲೀಸರು ಹಳದಿ ವಲಯದಲ್ಲಿ ಡ್ರೋನ್ ವಿರೋಧಿ ಸಾಧನಗಳನ್ನು ನಿಯೋಜಿಸಲಿದ್ದು, ಅಗತ್ಯವಿದ್ದಲ್ಲಿ ಅವುಗಳನ್ನು ಸೆರೆಹಿಡಿದು ನಾಶಪಡಿಸಬಹುದು ಎಂದು ವರದಿಯಾಗಿದೆ.

ವಿದೇಶಿ ಮತ್ತು ದೇಶೀಯ ಪ್ರವಾಸಿಗರಿಗೆ ಡ್ರೋನ್ ಹಾರಾಟ ನಿಷೇಧಿಸಿರುವ ಕುರಿತು ತಿಳಿಸಲು ಮಾಹಿತಿ ಫಲಕಗಳನ್ನು ಹೋಟೆಲ್‌ಗಳ ಬಳಿ ಹಾಕಲು ನಿರ್ಧರಿಸಲಾಗಿದೆ.

The post ತಾಜ್​​ಮಹಲ್​ಗೆ ಮುಂದಿನ ವರ್ಷದಿಂದ ಹೆಚ್ಚಿನ ಭದ್ರತೆ, ಸಿಬ್ಬಂದಿಗೆ ಕಮಾಂಡೋ ಟ್ರೈನಿಂಗ್ appeared first on News First Kannada.

Source: newsfirstlive.com

Source link