ತಾತ-ಮೊಮ್ಮಗನಾಗಿ ಮೋಡಿ ಮಾಡಲಿದ್ದಾರೆ ದಿಗಂತ್​​​​​​-ಅನಂತ್​​ ನಾಗ್​​ ಜೋಡಿ..!

ಸ್ಯಾಂಡಲ್​​ವುಡ್​​​​ನ ಎವರ್​​ಗ್ರೀನ್ ಹೀರೋ ಅನಂತ್ ನಾಗ್ ಅವರ ಜೊತೆ ಆಲ್ ಮೊಸ್ಟ್ ಆಲ್ ಎಲ್ಲಾ ಹೀರೋಗಳು ಅದ್ಭುತವಾಗಿ ಕಾಣಿಸ್ತಾರೆ ಅತ್ಯದ್ಭುತವಾಗಿ ನಟಿಸ್ತಾರೆ.. ಅದರಂತೆ ನಮ್ಮ ದೂದ್ ಪೇಡ್ ದಿಗಂತ್ ಕೂಡ ಅನಂತ್ ನಾಗರಕಟ್ಟೆ ಜೊತೆ ಅದ್ಭುತ ಸಿನಿಮಾಗಳಲ್ಲಿ ನಟಿಸಿದ್ದಾರೆ.. ಈಗ ವಿಷಯವೆನಪ್ಪ ಅಂದ್ರೆ ಅನಂತ್ ಜೊತೆ ದಿಗಂತ್ ತಾತಾ ಮೊಮ್ಮಗನಾಗ್ತಿದ್ದಾರೆ.. ಅದ್ಯಾವ ಸಿನಿಮಾದಲ್ಲಿ ಅನ್ನೋ ಪ್ರಶ್ನೆಗೆ ಉತ್ತರ ನಿಮ್ಮಮುಂದೆ..

ಸ್ಯಾಂಡಲ್​ವುಡ್ ಎವರ್​ಗ್ರೀನ್ ಸುಂದರ ಅನಂತ್ ನಾಗ್ ಹಾಗೂ ದೂದ್ ಪೇಡ ದಿಗಂತ್ ಕಾಂಬಿನೇಷನ್​​ ಸಿನಿಮಾಗಳು ಕರ್ನಾಟಕ ಫೇಮಸ್ ಆಗಿವೆ.. ಮುಂಗಾರು ಮಳೆಯಿಂದ ಪ್ರಾರಂಭವಾದ ಅನಂತ್​-ದಿಗಂತ್​ ಕಾಂಬೋ​ ಇಂದಿಗೂ ಮುಂದುವರೆದಿದೆ..ಅದರಲ್ಲಿ ಪಂಚರಂಗಿ ಸಿನಿಮಾದಲ್ಲಿ ಅನಂತ್​- ದಿಗಂತ್​ ಜೋಡಿ ಚಿತ್ರ ಪ್ರೇಮಿಗಳಲ್ಲಿ ಮೋಡಿಯನ್ನೇ ಮಾಡಿತ್ತು..

ಎವರ್​ ಗ್ರೀನ್ ಹೀರೋ​ ಅನಂತ್​ ನಾಗ್​ ಅವರಿಗೆ ವಯಸ್ಸು 70 ದಾಟಿದ್ರೂ ಸಿನಿಮಾ ಮಾಡೋ ಮನಸ್ಸು ಮಾತ್ರ 18ರ ಹರೆಯ.. ಹೊಸಬರೆ ಆಗಿರಲಿ ಹಳಬರೆ ಆಗಿರಲಿ ಪಾತ್ರಕ್ಕೆ ಪ್ರಾಮುಖ್ಯತೆ ಕೋಡೋ ಅನಂತ್​, ಕಥೆ ಇಷ್ಟ ಆದ್ರೆ ಸಿನಿಮಾ ಮಾಡೋದು ಪಕ್ಕ..ಈಗ ಅನಂತ್​ ಮತ್ತು ದಿಗಂತ್​ ಮಾಡಲು ಹೊರಟಿರುವ ಚಿತ್ರ ತಿಮ್ಮಯ್ಯ ಅ್ಯಂಡ್​ ತಿಮ್ಮಯ್ಯ..

ಇನ್ನು ದಿಗಂತ್​ ವಿಚಾರಕ್ಕೆ ಬಂದ್ರೆ ಇತ್ತೀನ ದಿನಗಳಲ್ಲಿ ಹೆಚ್ಚು ಕಂಟೆಡ್​ ಓರಿಯಂಟೆಡ್​ ಸಿನಿಮಾಗಳಲ್ಲಿ ಕಾಣಿಸಿಕೋಳ್ಳೋದರ ಜೊತೆಗೆ ಚಿತ್ರ ಪ್ರೇಮಿಗಳ ಮನಸ್ಸು ಗೆಲ್ಲೋಕೆ ಪ್ರಯತ್ನ ಮಾಡುತ್ತಲೇ ಇರುತ್ತಾರೆ.. ದಿಗಂತ್​ ಈ ಬಾರಿಯೂ ಸಹ ​ ಒಂದು ಹೊಸ ರೀತಿಯ ಸಿನಿಮಾ ಮಾಡಲು ಮುಂದಾಗಿದ್ದಾರೆ…ಸಿನಿಮಾದ ಕಥೆಯ ಬಗ್ಗೆ ಮತ್ತು ಅನಂತ್​ ಸರ್​ ಜೊತೆ ಮತ್ತೆ ಸ್ಕ್ರೀನ್​ ಶೇರ್​ ಮಾಡಿದ್ರ ಬಗ್ಗೆ ಖುಷಿಯಿಂದ ಹೇಳಿದ್ದಾರೆ.

ಇದನ್ನೂ ಓದಿ: ಮತ್ತೆ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ ಅನಂತ್​​ ನಾಗ್​​-ದಿಗಂತ್​​; ಯಾವ ಸಿನಿಮಾದಲ್ಲಿ ಗೊತ್ತಾ?

ಅನಂತ್​ ಮತ್ತು ದಿಗಂತ್​ ನಟಿಸುತ್ತಿರೋ ತಿಮ್ಮಯ್ಯ ಆ್ಯಂಡ್​ ತಿಮ್ಮಯ್ಯ ಸಿನಿಮಾದಲ್ಲಿ ದಿಗಂತ್​ಗೆ ನಾಯಕಿಯಾಗಿ ವಜ್ರಕಾಯ ಸಿನಿಮಾ ಖ್ಯಾತಿಯ ಶುಬ್ರ ಅಯ್ಯಪ್ಪ ಕಾಣಿಸಿಕೊಳ್ಳಲಿದ್ದಾರೆ..ಇನ್ನು ತಿಮ್ಮಯ್ಯ ಅ್ಯಂಡ್​ ತಿಮ್ಮಯ್ಯ ಸಿನಿಮಾಗೆ ಸಂಜಯ್​ ಶರ್ಮ ಮೊದಲ ಬಾರಿಗೆ ಆ್ಯಕ್ಷನ್​ ಕಟ್​ ಹೇಳಿದ್ದು , ಸಂಜಯ್​ ಶರ್ಮಾ ಸಹೋದರ ರಾಜೇಶ್​ ಶರ್ಮಾ ಬಂಡವಾಳ ಹೂಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಿನಿಮಾ ಮತ್ತಷ್ಟು ಸದ್ದು ಮಾಡಲಿದೆ..

News First Live Kannada

Leave a comment

Your email address will not be published. Required fields are marked *