1/4
ನಿಮಗೆ ಗ್ಯಾಸ್ಟಿಕ್ ಅಥವಾ ಆಗಾಗ್ಗೆ ಅಸಿಡಿಟಿ ಸಮಸ್ಯೆಗಳಿದ್ದರೆ, ಆಯುರ್ವೇದ ತಜ್ಞರ ಸಲಹೆಯಿಲ್ಲದೆ ನೀವು ತಾಮ್ರದ ಪಾತ್ರೆಯಲ್ಲಿ ನೀರನ್ನು ಕುಡಿಯಬಾರದು. ತಾಮ್ರವು ಬಿಸಿ ಸ್ವಭಾವವನ್ನು ಅಥವಾ ಉಷ್ಣಾಂಶವನ್ನು ಹೊಂದಿದೆ. ಹೀಗಾಗಿ ಅಸಿಡಿಟಿ ಸಮಸ್ಯೆಯನ್ನು ಇದು ಹೆಚ್ಚಿಸುವ ಸಾಧ್ಯತೆ ಇದೆ.
2/4
ನೀವು ಕಿಡ್ನಿ ಅಥವಾ ಹೃದ್ರೋಗಿಗಳಾದರೂ ತಾಮ್ರದ ಪಾತ್ರೆಯಲ್ಲಿ ನೀರನ್ನು ಕುಡಿಯುವ ಮೊದಲು ಒಮ್ಮೆ ವೈದ್ಯರ ಸಲಹೆ ಪಡೆಯಿರಿ. ತಾಮ್ರದ ಪಾತ್ರೆಯಲ್ಲಿ ಹೆಚ್ಚು ನೀರು ಕುಡಿಯುವುದು ಕಿಡ್ನಿ ಸಮಸ್ಯೆ ಇರುವವರಿಗೆ ಹಾನಿಕಾರಕವಾಗಿದೆ.
3/4
ಯಾವುದೇ ಆರೋಗ್ಯ ಸಂಬಂಧಿ ಸಮಸ್ಯೆಗಳಿಲ್ಲದಿದ್ದರೂ, ತಾಮ್ರದ ಪಾತ್ರೆಗಳನ್ನು ನೀರಿಗಾಗಿ ಮಾತ್ರ ಬಳಸಿ. ತಾಮ್ರದ ಪಾತ್ರೆಯಲ್ಲಿ ಹಾಕಿ ಬೇರೆ ಯಾವುದೇ ಆಹಾರ ಮತ್ತು ಪಾನೀಯವನ್ನು ಸೇವಿಸಬೇಡಿ. ಇದರಿಂದ ನಿಮ್ಮ ಆರೋಗ್ಯಕ್ಕೆ ಹಾನಿಯಾಗಬಹುದು.
4/4
ತಾಮ್ರದ ಪಾತ್ರೆಯಲ್ಲಿ ಹಾಲು ಅಥವಾ ಹಾಲಿನ ಉತ್ಪನ್ನಗಳು ಮತ್ತು ಹುಳಿ ಪದಾರ್ಥಗಳನ್ನು ತಿನ್ನುವ ತಪ್ಪನ್ನು ಎಂದಿಗೂ ಮಾಡಬೇಡಿ. ಇದು ವಿಷಕಾರಿಯಾಗುವ ಮತ್ತು ಅದರ ಕಾರಣದಿಂದಾಗಿ ನೀವು ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಕಾಯಿಲೆಗಳನ್ನು ಎದುರಿಸಬೇಕಾಗುತ್ತದೆ.