ತಾಯಿಗೆ ಹೆರಿಗೆ ಮಾಡಿಸಿ ತನ್ನ ಹುಟ್ಟಿಗೆ ಕಾರಣವಾದ ವೈದ್ಯನ ವಿರುದ್ಧವೇ ಕೇಸ್ ಹಾಕಿ ಗೆದ್ದ ಯುವತಿ..!


ಆಕೆ ನಿಜಕ್ಕೂ ಸೌಂದರ್ಯವತಿ. ಅವಳ ಅಂದ ನೋಡಿದವ್ರಿಗೆ ಒಂದು ಕ್ಷಣ ಹಾರ್ಟ್​ಬೀಟ್​ ರೈಸ್​ ಆಗೋದ್ರಲ್ಲಿ ಡೌಟೇ ಇಲ್ಲ. ಅಂತವಳು ಈಗ ಸುದ್ದಿಯಾಗಿರೋದು ಯಾವುದೋ ರೂಪದರ್ಶಿ ಸ್ಪರ್ಧೆಯಿಂದ ಅಲ್ಲ.. ಅಂತಹ ಚೆಲುವನ್ನ ಭೂಮಿಗೆ ತಂದ ವೈದ್ಯನ ವಿರುದ್ಧವೇ ಕೋರ್ಟ್​ ಮೆಟ್ಟಿಲೇರಿ ಪ್ರಕರಣವನ್ನೂ ಗೆದ್ದುಕೊಂಡಿದ್ದಾಳೆ. ನನ್ನನ್ಯಾಕೆ ಈ ಭೂಮಿಗೆ ಬರೋಕೆ ಬಿಟ್ರಿ ಅಂತಾ ಪ್ರಶ್ನೆ ಮಾಡ್ತಿದ್ದಾಳೆ.

ಜೀವನದಲ್ಲಿ ಸದಾ ಖುಷಿಯಿಂದಲೇ ಇರೋದಕ್ಕಾಗಲ್ಲ ನಿಜ.. ಸುಂದರವಾದ ಬದುಕು ಸಾಗಿಸೋಕೆ ದೇವರು ಏನೆಲ್ಲಾ ಕೊಟ್ಟರೂ ಒಂದಲ್ಲ ಒಂದು ಕೊರಗು ಕೊಟ್ಟಿರ್ತಾನೆ.. ಆದ್ರೆ, ಏನೇ ಕೊರಗಿದ್ರೂ ಅದನ್ನ ಸಹಿಸಿಕೊಂಡು ಕೊಟ್ಟಿರೋ ಬದುಕನ್ನ ಭಗವಂತನೇ ಕಿತ್ತುಕೊಳ್ಳೋವರೆಗೂ ಯಾವುದೇ ಆವೇಷದ ನಿರ್ಧಾರಗಳಿಗೆ ಕೈ ಹಾಕಬಾರದು ಅನ್ನೋ ಮಾತಿದೆ. ಇವತ್ತು ನಾವ್ ಹೇಳಲು ಹೊರಟಿರೋದು ಆ ರೀತಿಯ ಕೊರಗನ್ನಿಟ್ಟುಕೊಂಡೇ ತನ್ನ ಒಡಲಲ್ಲಿ ದ್ವೇಷದ ಕಿಚ್ಚು ಹೊತ್ತಿಸಿಕೊಂಡು ಕಾನೂನು ಸಮರದಲ್ಲಿ ಕೊನೆಗೂ ಗೆದ್ದುಬೀಗಿರೋ ಸುಂದರಿಯ ಕಥೆ..

ಅಬ್ಬಾ..ಅದೇನ್ ಸೌಂದರ್ಯ.. ಬೆಳದಿಂಗಳು ಆ ಚೆಲುವೆಯ ಮೈತುಂಬಿಕೊಳ್ಳುತ್ತಿದ್ದಂಗೆ ಆಕೆ ಸೌಂದರ್ಯ ಹುಣ್ಣಿಮೆಯ ಚಂದಿರನಂತೆ ಕಾಂತಿ ಬೀರೋಕೆ ಶುರುವಾಗುತ್ತೇನೋ ಅನ್ನಿಸುವಷ್ಟು ಮಾದಕ ಅಂದ.. ಇವಳು ಮುಖದಲ್ಲಿ ನಗು ಅರಳಿಸುತ್ತಿದ್ರೆ, ಮುತ್ತುಗಳೇ ಉದುರುತ್ತಿರುವಂತೆ ಭಾಸವಾಗುತ್ತೆ. ಇವಳ ಫೋಟೋಗಳನ್ನ ನೋಡ್ತಿದ್ರೆ ಎಂತಹ ಸೌಂದರ್ಯ ರಸಿಕನೂ ನೋಡ್ತಾನೆ ಕೂರೋ ಹಾಗಾಗುತ್ತೆ ಅಂದ್ರೆ ತಪ್ಪಾಗೋದಿಲ್ಲ..

ಇವ್ಳು ಕುದುರೆ ಏರಿ ಸವಾರಿ ಹೊರಟರೇ, ಆ ಇಡೀ ಪ್ರದೇಶಕ್ಕೆ ವಿಶೇಷ ಕಾಂತಿ ತುಂಬುತಿತ್ತು. ಬ್ರಿಟಿಷರ ನಾಡಿನಲ್ಲಿ ಬೆಳ್ಳಿಯಂತೆ ನಳನಳಿಸುತ್ತಿರುವ ಈಕೆಯ ಹೆಸರು ಈವಿ ಟೂಂಬ್ಸ್​.. ಪ್ರೊಫೆಷನಲ್ ಶೋ ಜಂಪರ್​ ಅಂದ್ರೆ ಹಾರ್ಸ್​ ರೈಡರ್ ಆಗಿರುವ ಈಕೆ ಇಷ್ಟೂ ವರ್ಷಗಳು ಜೀವನದಲ್ಲಿ ಸಖತ್ತಾಗೇ ಇದ್ಲು. ಎಲ್ಲಾ ರೀತಿಯಲ್ಲೂ, ಎಲ್ಲಾ ವಿಧದಲ್ಲೂ ಸಾಕಷ್ಟು ನೆಮ್ಮದಿಯಾಗಿಯೇ ಇದ್ದಾಳೆ. ಏನೋ ತಾನಾಯ್ತು ತನ್ನ ಶೋ ಜಂಪಿಂಗ್ ಪ್ರೊಫೆಷನ್ ಆಯ್ತು ಅಂತಾ ಇದ್ದಿದ್ರೆ, ಇವತ್ತು ಜಗತ್ತಿನಲ್ಲೇ ಇಷ್ಟು ಸುದ್ದಿ ಮಾಡ್ತಿರಲಿಲ್ಲ, ಈಕೆ.. ಬಟ್​. ಈಕೆ ಸಿಡಿದಿದ್ದು ಅಕ್ಷರಶಃ ತನ್ನ ಹುಟ್ಟಿನ ವಿರುದ್ಧ. ತನ್ನ ಭೂಮಿಗೆ ಬರಲು ಬಿಟ್ಟ, ಜೀವ ಕೊಟ್ಟ ವೈದ್ಯನ ವಿರುದ್ಧ ಸ್ಫೋಟಗೊಂಡು ಹಲ್​​ಚಲ್ ಸೃಷ್ಟಿಸಿಬಿಟ್ಟಿದ್ದಾಳೆ.

ಇದು ವಿಚಿತ್ರ ಅನ್ನಿಸಿದ್ರೂ ಸತ್ಯ. ಇಲ್ಲ ನಿಮಗೆ ನಗು ಕೂಡ ಬರಬಹುದು. ಒಂದು ಕ್ಷಣ ಆಶ್ಚರ್ಯದ ಕೇಂದ್ರ ಬಿಂದು ಕೂಡ ನಿಮ್ಮನ್ನ ಸುತ್ತಿಕೊಳ್ಳಬಹುದು. ತನಗೆ ಜೀವ ಕೊಟ್ಟ, ಅಂದರೆಡೆಲಿವರಿ ಮಾಡಿಸಿದ ವೈದ್ಯನಿಗೆ ಗಿಫ್ಟ್​ ಕೊಡುವುದು ನೋಡಿರ್ತಿರಾ..? ಆದ್ರೆ, ಯಾರಾದ್ರೂ ಕೇಸ್ ಹಾಕ್ತಾರಾ ಅನ್ನೋ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಈಕೆ ತನ್ನ ತಾಯಿಯ ಹೊಟ್ಟೆಯಲ್ಲಿದ್ದಾಗ, ಭೂಮಿಗೆ ಬರಲು ಕಾರಣವಾದ ಡಾಕ್ಟರ್ ವಿರುದ್ಧವೇ ಸಿಡಿದು ನಿಂತಿದ್ದಾಳೆ. ಕೋರ್ಟ್​ ಕಟಕಟೆ ಅಂತಾ ಅಲೆಸಿದ್ದಾಳೆ. ಆದ್ರೆ, ಇವಳ ಕಥೆಯನ್ನ ಕೇಳಿದ್ರೆ ಆಕೆ ಮಾಡಿದ್ದು ಸರೀನೇ ಅಂತಾ ಬಹುತೇಕರು ಅಂದೇ ಅಂತಾರೆ ಅನ್ನೋದು ನಂಬಿಕೆ

ಇವಳ ಬಾಳಲ್ಲಿ ವಿಧಿ ಬೆನ್ನ ಹಿಂದೆ ಅಡಗಿ ಕೂತು ಕ್ರೂರ ಆಟವಾಡ್ತಿದೆ. ಇವಳನ್ನ ಸರಿಯಾಗಿ ಕೂರಲು ಬಿಡದೆ, ನಿದ್ದೆ ಮಾಡಲು ಬಿಡದೆ ನೋವು ಕೊಟ್ಟು ಕಾಡ್ತಿದೆ. ಸ್ಪೈನಾ ಬೈಫಿಡಾ ಅನ್ನೋ ಅಪರೂಪದ ರೋಗದಿಂದ ಬಳಲುತ್ತಿದ್ದಾಳೆ ಈವಿ ಟೂಂಬ್ಸ್​. ಇದೇ ಕಾಯಿಲೆ ಇದೀಗ ಲಂಡನ್​ನ ಬ್ಯೂಟಿ ಕ್ವೀನ್​ ಮುಖದಲ್ಲಿ ನಗು ಮಾಯವಾಗಿ ನೋವು ನಾಟ್ಯವಾಡುವಂತೆ ಮಾಡಿದೆ. ಹಾಗಾಗಿಯೇ, ತನ್ನನ್ನು ಹೆರಿಗೆ ಮಾಡಿಸಿದ ವೈದ್ಯನ ವಿರುದ್ಧವೇ ದೂರು ನೀಡಿದ್ದಾಳೆ. ಸ್ಪೈನಾ ಬೈಫಿಡಾ ಅನ್ನೋದು ಸೈನಲ್​ ಕಾರ್ಡ್​ ಅಂದ್ರೆ ಬೆನ್ನು ಹುರಿಗೆ ಸಂಬಂಧಪಟ್ಟ ಕಾಯಿಲೆಯಾಗಿದ್ದು, ಕೆಲವೊಮ್ಮೆ ಅದರ ಕಾಟ ಜಾಸ್ತಿಯಾದಾಗ ದಿನದ 24 ಗಂಟೆಯೂ ಮೂಗಿನ ಮೂಲಕ ಒಂದು ಟ್ಯೂಬ್​ ಕನೆಕ್ಟ್​ ಮಾಡಿಕೊಂಡೇ ಉಸಿರಾಡಬೇಕಾದ ಪರಿಸ್ಥಿತಿ ಇವಳದ್ದಾಗಿದೆ.

ಜನರು ಕಾಯಿಲೆಗೆ ತುತ್ತಾಗುವುದು ಕಾಮನ್. ಆದ್ರೆ, ಅದ್ಕೆ ಡೆಲಿವರಿ ಮಾಡಿಸಿದ ಡಾಕ್ಟರ್​ ಮೇಲೆ ಕೇಸ್​ ಹಾಕುವುದು ಎಷ್ಟು ಸರಿ ಅನ್ನೋ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಆದ್ರೆ ಇಲ್ಲೇ ಇರೋದು ಅಸಲಿ ಸ್ಟೋರಿ. ಇಂದು ಆಕೆ ಅನುಭವಿಸುತ್ತಿರುವ ನೋವಿನಲ್ಲೂ ಹೆರಿಗೆ ಮಾಡಿಸಿದ ಡಾಕ್ಟರ್ ಕೂಡ ಪರೋಕ್ಷವಾಗಿ ಕಾರಣ ಎಂದರೆ ತಪ್ಪಾಗಲಾರದು. ತಾನು ಬಳಲುತ್ತಿರುವ ಮಾರಕ ಕಾಯಿಲೆಗೆ, ತನ್ನ ತಾಯಿಗೆ ಹೆರಿಗೆ ಮಾಡಿದ ವೈದ್ಯ ಡಾ.ಫಿಲಿಪ್​ ಮಿಶೆಲ್ ಕಾರಣ ಅನ್ನೋದು ಈಕೆಯ ಆರೋಪ. ಇದೇ ವಿಷಯವಾಗಿ ಲಂಡನ್​ಹೈಕೋರ್ಟ್​ ಮೆಟ್ಟಿಲೇರಿದ ಈಕೆ ವಿಚಿತ್ರ ಕಾನೂನು ಸಮರದಲ್ಲಿ ಗೆದ್ದೂಬಿಟ್ಟಿದ್ದಾಳೆ.

ಡಾಕ್ಟರ್​ಗೇ ‘ಡೋಸ್​’
ನನ್ನ ತಾಯಿ ಗರ್ಭಿಣಿಯಾಗಿದ್ದಾಗ ಡಾಕ್ಟರ್ ಡಾ.ಫಿಲಿಪ್​ ಸರಿಯಾದ ಸಲಹೆಗಳನ್ನು ಆಕೆಗೆ ನೀಡಲಿಲ್ಲ. ಒಂದು ವೇಳೆ ಸರಿಯಾಗಿ ಸಲಹೆ ನೀಡಿದ್ದರೆ, ತಾಯಿ ಗರ್ಭಿಣಿಯಾಗುವುದನ್ನು ಮುಂದೂಡುತ್ತಿದ್ದರೇನೋ. ನಾನು ಹುಟ್ಟುತ್ತಿರಲಿಲ್ಲ. ಅಥವಾ ನನ್ನ ತಾಯಿಗೆ ಫಾಲಿಕ್ ಌಸಿಡ್​ ಸಪ್ಲಿಮೆಂಟ್ಸ್​​ ತೆಗೆದುಕೊಳ್ಳಲು ಸೂಚಿಸಿದ್ದರೆ ನನಗೆ ಈ ಕಾಯಿಲೆ ಬರುವ ರಿಸ್ಕ್​ ಕಡಿಮೆ ಇತ್ತು. ಇಂದು ನಾನು ಸ್ಪೈನಾ ಬೈಫಿಡಾ ರೋಗದಿಂದ ಬಳಲುವ ಪರಿಸ್ಥಿತಿ ನಿರ್ಮಾಣವಾಗ್ತಿರ್ಲಿಲ್ಲ. ಅಂದು ಡಾಕ್ಟರ್ ಮಾಡಿದ ನಿರ್ಲಕ್ಷ್ಯವೇ ಇವತ್ತು ನಾನು ಇಷ್ಟೆಲ್ಲಾ ನೋವು ಅನುಭವಿಸಲು ಕಾರಣ
-ಈವಿ ಟೂಂಬ್ಸ್​​

ಹೀಗೆ, ಬರೋಬ್ಬರಿ 20 ವರ್ಷಗಳ ಹಿಂದೆ ಪ್ರಸೂತಿ ವೈದ್ಯ ಮಾಡಿದ ಎಡವಟ್ಟಿನಿಂದ ನಾನು ಪಶ್ಚತಾಪಪಡ್ತೀದ್ದೀನಿ ಅನ್ನೋದು ಈವಿ ಟೂಂಬ್ಸ್​ ವಾದ. ಈ ವಾದವನ್ನ ಆಲಿಸಿದ ಲಂಡನ್​ ಹೈಕೋರ್ಟ್​ ನ್ಯಾಯಾಧೀಶರು, ಈವಿಗೆ ಪರಿಹಾರ ಕೇಳುವ ಎಲ್ಲಾ ಹಕ್ಕಿದೆ ಎಂದು ತೀರ್ಪಿತ್ತಿದೆ.

ಹೌದು.. ಈವಿಗಿರುವ ಅನಾರೋಗ್ಯಕ್ಕೆ, ವೈದ್ಯನೇ ಕಾರಣ ಅನ್ನೋ ವಾದವನ್ನು ಲಂಡನ್​ ಹೈಕೋರ್ಟ್​ ಪುರಸ್ಕರಿಸಿದ್ದು, ವೈದ್ಯನದ್ದೇ ತಪ್ಪು ಎಂಬಂತೆ ತೀರ್ಪು ನೀಡಿದೆ. ಆದರ ನ್ಯಾಯಾಧೀಶ ರೊಸಾಲಿಂಡ್ ಕೋ ಕ್ಯೂಸಿ ಈ ಕೇಸ್ ಸಂಬಂಧ ಮಹತ್ವದ ತೀರ್ಪು ನೀಡಿದ್ದು, ಸರಿಯಾದ ಶಿಫಾರಸು ಸಲಹೆಯನ್ನು ಈವಿಯ ತಾಯಿಗೆ ಒದಗಿಸಿದ್ದರೆ, ಅವಳು ಆಯ್ಕೆ ತಾಯ್ತನವನ್ನು ಮುಂದೂಡುತ್ತಿದ್ದಳು ಅಂತಾ ಹೇಳಿದೆ. ಅದರ ಜೊತೆಗೆ ಈವಿಗೆ ಪರಿಹಾರ ಕೇಳುವ ಎಲ್ಲಾ ಹಕ್ಕುಗಳಿದ್ದು, ಆಕೆಗೆ ಜೀವನಪರ್ಯಂತ ಬೇಕಾಗುವಷ್ಟು ಜೀವನಾಂಶವನ್ನು ಕಟ್ಟಿಕೊಡಬೇಕಾಗುತ್ತದೆ ಅಂತಾ ಸೂಚಿಸಿದೆ. ಆದ್ರೆ ಕೋರ್ಟ್​ ನಿಖರವಾಗಿ ಇಷ್ಟೇ ಹಣ ಕೊಡ್ಬೇಕೆಂದು ಹೇಳಿಲ್ಲ. ಈವಿ ಕಡೆ ವಕೀಲರೂ ಇನ್ನೂ ಇಷ್ಟೇ ಬೇಕು ಅಂತಾ ಕೇಳಿಲ್ಲ. ಬಟ್​, ಒಂದು ದೊಡ್ಡ ಮೊತ್ತವನ್ನೇ ಕೇಳುವ ಲೆಕ್ಕಾಚಾರದಲ್ಲಿದ್ದಾರೆ ಈಬಿ ಟೂಂಬ್ಸ್​ ಕಡೆಯವರು..

ಹಾರ್ಸ್​ ರೈಡರ್ ಆಗಿರೋ ಬ್ಯೂಟಿಯ ಕ್ವೀನ್ ಈವಿ ತನ್ನ ಜೀವನ ಕುದುರೆಯ ವೇಗದಲ್ಲೇ ಓಡಬೇಕು ಎಂದು ಭವಿಷ್ಯದ ಬಗ್ಗೆ ಬಗೆ ಬಗೆಯ ಕನಸು ಕಂಡಿದ್ಲು. ಆದ್ರೆ ಸ್ಪೈನಾ ಬೈಫಿಡಾ ಎಂಬ ಕಾಯಿಲೆಯಿಂ ಅಕ್ಷರಶಃ ಅವಳ ಕನಸುಗಳನ್ನು ಚಿವುಟಿ ಹಾಕ್ತಿದೆ. ಉಜ್ವಲವಾಗಬೇಕಾಗಿದ್ದ ಭವಿಷ್ಯ ಮಂಕಾಗುವ ಆತಂಕ ಕಾಡ್ತಿದೆ. ಇದೆಲ್ಲಾ ನೋವುಗಳೇ ಇಂದು ಆಕೆಯನ್ನ ಕೋರ್ಟ್​ ಮೆಟ್ಟಿಲು ಹತ್ತುವಂತೆ ಮಾಡಿತು ಅಂದ್ರೆ ತಪ್ಪಾಗಲ್ಲ..

ಅದೇನೆ ಇರಲಿ, ಬೆನ್ನ ಹಿಂದೆ ಆಕೆ ಕ್ರೂರಿಯೊಂದು ಅಡಗಿ ಕೂತು, ಕರಾಳವಾಗಿ ಕಾಡುತ್ತಿದ್ದರೂ ಕುದುರೆ ಸವಾರಿ ಎಂಬ ಕಠಿಣ ಕಲೆಯನ್ನ ಕರಗತಮಾಡಿಕೊಂಡಿರೋ ಈಕೆಯ ಧೈರ್ಯವನ್ನ ಮೆಚ್ಚಬೇಕು. ಸ್ಪೈನಾ ಬೈಫಿಡಾಗೆ ಸೆಟೆದು ನಿಂತು ಸವಾರಿ ಮಾಡಿರೋ ಈಕೆಯ ಛಲ ಸಾಮಾನ್ಯವಾದುದಲ್ಲ ಅನ್ನೋದನ್ನ ಒಪ್ಪಲೇಬೇಕು. ಇವಳಿಗಿಂದು ಕೋರ್ಟ್​ನಲ್ಲಿ ಜಯ ಸಿಕ್ಕಿರಬಹುದು. ಬಟ್​.. ಯಾವಾಗ ಈವಿ ಜೀವವನ್ನೇ ಕಿತ್ತು ತಿಂತಿರೋ ಕಾಯಿಲೆಯಿಂದ ಶಾಶ್ವತವಾಗಿ ಮುಕ್ತಿ ಹೊಂದುತ್ತಾಳೋ ಅಂದೇ ಆಕೆಗೆ ನಿಜವಾದ ಗೆಲುವು ಸಿಕ್ಕಂತೆ ಅಂದ್ರೆ ತಪ್ಪಾಗಲ್ಲ ಆದಷ್ಟೂ ಬೇಗ ಈವಿ ಟೂಂಬ್ಸ್​​ ಎಂಬ ಸುಂದರಿ ಬೆನ್ನು ಹೊಕ್ಕಿರುವ ಭೂತದಿಂದ ಬಿಡಿಸಿಕೊಂಡು ಹೊರ ಬರಲಿ ಅನ್ನೋದೇ ಎಲ್ಲರ ಆಶಯ

ಈವಿ ಟೂಂಬ್ಸ್​ ನಿಜಕ್ಕೂ ಸಂಕಷ್ಟದಲ್ಲಿದ್ದಾಳೆ.. ಆದು ಅನಾರೋಗ್ಯವೆಂಬ ಸಂಕಷ್ಟ.. ಅವಳಿಗೆ ಸಿಗುವ ದೊಡ್ಡ ಮೊತ್ತದ ಪರಿಹಾರದಿಂದ ಅವಳ ಕಷ್ಟಗಳು ಮಾಯವಾಗುತ್ವಾ ಇಲ್ವಾ ಗೊತ್ತಿಲ್ಲ? ಬಟ್​.. ಈ ರೀತಿಯ ವಿಚಿತ್ರ ಕೇಸ್​ ಹಾಕಿ, ವೈದ್ಯನ ವಿರುದ್ಧ ಗೆದ್ದು ವಿಶ್ವದಲ್ಲೇ ಭಾರೀ ಸುದ್ದಿಯಾಗಿದ್ದಂತೂ ಸುಳ್ಳಲ್ಲ. ವೈದ್ಯರು ಮಾಡುವ ಯಡವಟ್ಟು, ನಿರ್ಲಕ್ಷ್ಯಗಳು ಮುಂದೆ ಅದು ಮಕ್ಕಳ ಮೇಲೆ ಹೇಗೆ ಪರಿಣಾಮ ಬೀರುತ್ತೆ ಅನ್ನೋದಕ್ಕೆ ಇದು ಒಂದು ಜಸ್ಟ್​ ಎಕ್ಸಾಂಪಲ್.ನಿರ್ಲಕ್ಷ್ಯಗಳನ್ನೆ ಉಸಿರಾಡುವ ಕೆಲ ವೈದ್ಯರಿಗೆ ಎವಿ ಟೂಂಬ್ಸ್​​ ಪ್ರಕರಣದಲ್ಲಿ ಕೋರ್ಟು ನೀಡಿದ ತೀರ್ಪು ಒಂದು ಪಾಠವಾಗಲಿ.

News First Live Kannada


Leave a Reply

Your email address will not be published. Required fields are marked *