ತಾಯಿಯಂತೆ ಸೇನಾ ತರಬೇತಿ ಅಕಾಡೆಮಿಯಿಂದ ಉತ್ತೀರ್ಣನಾದ ಮಗ; ತಾಯಿ-ಮಗನ ಹೆಮ್ಮೆಯ ಫೋಟೋ ವೈರಲ್ | Son passed out of military training academy like his mother retired Major Smita Chaturvedi mother son photo has gone viral


ನಿವೃತ್ತರಾಗಿರುವ ಮೇಜರ್ ಸ್ಮಿತಾ ಚತುರ್ವೇದಿ ಅವರು 27 ವರ್ಷಗಳ ಹಿಂದೆ ಸೇನೆಗೆ ನೇಮಕಗೊಂಡ ಚೆನ್ನೈನ ಅಧಿಕಾರಿಗಳ ತರಬೇತಿ ಅಕಾಡೆಮಿಯಿಂದಲೇ ಅವರ ಮಗ ಕೂಡ ಅಧಿಕಾರಿಯಾಗುವುದನ್ನು ನೋಡಿ ಸಂತಸಪಟ್ಟರು. ಸಸ್ಯ ಅಮ್ಮ ಮಗನ ಫೋಟೋ ವೈರಲ್ ಆಗುತ್ತಿದೆ.

ತಾಯಿಯಂತೆ ಸೇನಾ ತರಬೇತಿ ಅಕಾಡೆಮಿಯಿಂದ ಉತ್ತೀರ್ಣನಾದ ಮಗ; ತಾಯಿ-ಮಗನ ಹೆಮ್ಮೆಯ ಫೋಟೋ ವೈರಲ್

ನಿವೃತ್ತ ಮೇಜರ್ ಸ್ಮಿತಾ ಚತುರ್ವೇದಿ ಮತ್ತು ಅವರ ಮಗ

ರಕ್ಷಣಾ ಸಚಿವಾಲಯದ ಸಾರ್ವಜನಿಕ ಸಂಪರ್ಕ ನಿರ್ದೇಶನಾಲಯದ ಅಡಿಯಲ್ಲಿ ಚೆನ್ನೈನ ಸಾರ್ವಜನಿಕ ಸಂಪರ್ಕ ಅಧಿಕಾರಿಯ ಅಧಿಕೃತ ಖಾತೆಯಿಂದ ಟ್ವಿಟರ್‌ನಲ್ಲಿ ಹಂಚಿಕೊಂಡ ಹೃದಯಸ್ಪರ್ಶಿ ಫೋಟೋ ಇಂಟರ್ನೆಟ್ ಅನ್ನು ಗೆದ್ದಿದೆ. ಪೋಸ್ಟ್ ಒಂದು ಸ್ಪೂರ್ತಿದಾಯಕ ಹಿನ್ನೆಲೆಯೊಂದಿಗೆ ತಾಯಿ ಮತ್ತು ಮಗನನ್ನು ಒಳಗೊಂಡಿದೆ. ಇದರಲ್ಲಿ ವೈರಲ್ ಆಗುವಷ್ಟು ವಿಶೇಷ ಏನಿದೆ ಎಂದು ಯೋಚಿಸುತ್ತಿದ್ದರೆ ಅದಕ್ಕೆ ಉತ್ತರ ಇಲ್ಲಿದೆ. ಆ ಫೋಟೋದಲ್ಲಿ ಇರುವವರು ನಿವೃತ್ತ ಮೇಜರ್ ಸ್ಮಿತಾ ಚತುರ್ವೇದಿ ಮತ್ತು ಅವರು ತರಬೇತಿ ಪಡೆದ ಅಕಾಡೆಮಿಯಿಂದಲೇ ಉತ್ತೀರ್ಣರಾದ ಅವರ ಮಗ. ಫೋಟೋವನ್ನು ಪೋಸ್ಟ್ ಮಾಡಿದ ನಂತರ ಸಾವಿರಾರು ನೆಟ್ಟಿಗರ ಹೃಯದ ಗೆದ್ದಿದೆ.

ಚೆನ್ನೈನ ರಕ್ಷಾಣಾ ಪಿಆರ್​ಒ ಟ್ವಿಟರ್ ಖಾತೆಯಲ್ಲಿ ಈ ಫೋಟೋವನ್ನು ಹಂಚಿಕೊಳ್ಳಲಾಗಿದ್ದು, “ಲೇಡಿ ಆಫೀಸರ್‌ಗೆ ಅಪರೂಪದ ಸಂಭ್ರಮದ ಕ್ಷಣ: ಮೇಜರ್ ಸ್ಮಿತಾ ಚತುರ್ವೇದಿ (ನಿವೃತ್ತ) 1995 ರಲ್ಲಿ 27 ವರ್ಷಗಳ ಮೊದಲು ಚೆನ್ನೈನ ಅಧಿಕಾರಿಗಳ ತರಬೇತಿ ಅಕಾಡೆಮಿಯಿಂದ ನೇಮಕಗೊಂಡರು, ಇಂದು ಅದೇ ಅಕಾಡೆಮಿಯಿಂದ ತನ್ನ ಮಗ ಕೂಡ ಅಧಿಕಾರಿಯಾಗುವುದನ್ನು ನೋಡಿದರು” ಎಂದು ಶೀರ್ಷಿಕೆಯನ್ನು ಬರೆಯಲಾಗಿದೆ.

ಸ್ಮಿತಾ ಚತುರ್ವೇದಿ ಅವರು ಸ್ವತಃ ತರಬೇತಿಯಲ್ಲಿ ಕೆಡೆಟ್ ಆಗಿದ್ದ ಕಾಲದ ಫೋಟೋವೊಂದು ಇದರೊಂದಿಗೆ ವೈರಲ್ ಆಗುತ್ತಿದೆ. ಈ ಫೋಟೋ ಕೂಡ ಚೆನ್ನೈನ ರಕ್ಷಾಣಾ ಪಿಆರ್​ಒ ಹಂಚಿಕೊಂಡಿದ್ದು, “ಕೆಡೆಟ್ ಸ್ಮಿತಾ ಚತುರ್ವೇದಿ ಅವರ ತರಬೇತಿ ದಿನಗಳ ಹಳೆಯ ರತ್ನ” ಎಂದು ಶೀರ್ಷಿಕೆ ಬರೆಯಲಾಗಿದೆ.

ಭಾವಪರವಶರಾದ ಚತುರ್ವೇದಿಯವರ ಕಿರು ವೀಡಿಯೋವನ್ನು ಸಹ ಹಂಚಿಕೊಳ್ಳಲಾಗಿದೆ. ತನ್ನ ಮಗನ ಸಾಧನೆಯ ಬಗ್ಗೆ ಹೆಮ್ಮೆ ಪಟ್ಟ ಹಾಗೂ ಅವರು ಹಳೆಯ ದಿನಗಳ ನೆನಪಿನೊಂದಿಗೆ ಮಾಹಿತಿಯನ್ನು ಹಂಚಿಕೊಂಡ ವಿಡಿಯೋ ಇದಾಗಿದೆ. “ಮೇಜರ್ ಸ್ಮಿತಾ ಚತುರ್ವೇದಿ (ನಿವೃತ್ತ) ಅವರು ಅಕಾಡೆಮಿಯಲ್ಲಿ ಕೆಡೆಟ್ ಆಗಿದ್ದ ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡರು ಮತ್ತು ತಮ್ಮ ಮಗ ತನ್ನಂತೆಯೇ ಸೈನ್ಯಕ್ಕೆ ಸೇರುವ ಅದ್ಭುತವಾದ ಕ್ಷಣವನ್ನು ಮರು ಸೃಷ್ಟಿಸಿದ ಬಗ್ಗೆ ಭಾವಪರವಶರಾಗಿದ್ದಾರೆ” ಎಂದು ಶೀರ್ಷಿಕೆ ಬರೆಯಲಾಗಿದೆ.

ಹಂಚಿಕೊಳ್ಳಲಾದ ಫೋಟೋ ಮತ್ತು ವಿಡಿಯೋಗಳನ್ನು ನೋಡಿದ ನೆಟ್ಟಿಗರು ತಮ್ಮ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ. ಒಬ್ಬ ತಾಯಿ ತನ್ನ ಮಗ ಈ ರೀತಿಯ ಸಾಧನೆಯನ್ನು ಮಾಡುವುದನ್ನು ನೋಡುವುದು ಎಷ್ಟು ಅದ್ಭುತವಾಗಿದೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು ಪ್ರತಿಕ್ರಿಯಿಸಿ, “ಹೆಮ್ಮೆಯ ಕ್ಷಣ. ಲೇಡಿ ಆಫೀಸರ್ ಮತ್ತು ಅವರ ಮಗ, ಹೊಸದಾಗಿ ನೇಮಕಗೊಂಡ ಅಧಿಕಾರಿ, ಇಬ್ಬರಿಗೂ ಹೆಮ್ಮೆ! ಎಂದು ಹೇಳಿದ್ದಾರೆ. ಇನ್ನೊಬ್ಬರು ಕಾಮೆಂಟ್ ಮಾಡಿ “ಹೃದಯಪೂರ್ವಕ ಅಭಿನಂದನೆಗಳು” ಎಂದು ಹೇಳಿದ್ದಾರೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *