ಬಾಲಿವುಡ್ ನಟಿ ಸಾರಾ ಅಲಿ ಖಾನ್ ಇತ್ತೀಚೆಗಷ್ಟೇ ತನ್ನ ತಾಯಿ ಅಮೃತಾ ಸಿಂಗ್ ಅವರ ಜೊತೆ ಮಧ್ಯಪ್ರದೇಶದಲ್ಲಿರುವ ಮಹಾಕಾಳೇಶ್ವರ ಜ್ಯೋತಿರ್ಲಿಂಗ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.
ಸಾರಾ ಅಲಿ ಖಾನ್ ಹಾಗೂ ವಿಕ್ಕಿ ಕೌಶಲ್ ನಟನೆಯ ಮುಂಬರುವ ಚಿತ್ರದ ಚಿತ್ರಿಕರಣ ಸದ್ಯ ಇಂದೋರ್ನಲ್ಲಿ ನಡೆಯುತ್ತಿದ್ದು, ಶೂಟಿಂಗ್ನಿಂದ ಕೊಂಚ ಬ್ರೇಕ್ ತೆಗೆದುಕೊಂಡು ಸಾರಾ ತನ್ನ ತಾಯಿ ಜೊತೆ ಮಹಾಕಾಳೇಶ್ವರ ಜ್ಯೋತಿರ್ಲಿಂಗ ದೇವಾಲಯ ಹಾಗೂ ಇಂದೋರ್ನ ಗಣೇಶ್ ಖಜ್ರಾನಾ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ದೇವಾಲಯದ ಮುಂದೆ ತಮ್ಮ ತಾಯಿ ಜೊತೆ ಕ್ಲಿಕ್ಕಿಸಿಕೊಂಡ ಫೋಟೋಗಳನ್ನು ಸಾರಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಹಾಗೂ ಶಿವನ ವಿಗ್ರಹದ ಮುಂದೆ ತೆಗೆದ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಸ್ನಲ್ಲಿ ಹಂಚಿಕೊಂಡು ‘ಜೈ ಭೋಲೆನಾಥ್’ ಎಂದು ಬರೆದುಕೊಂಡಿದ್ದಾರೆ. ಇನ್ನು ಇತ್ತೀಚೆಗೆ ಬಿಡುಗಡೆಯಾದ ಸಾರಾ ನಟನೆಯ ‘ಅತರಂಗಿ ರೇ’ ಸಿನಿಮಾ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.
View this post on Instagram
The post ತಾಯಿಯೊಂದಿಗೆ ಪ್ರಸಿದ್ಧ ಗಣೇಶ್ ದೇಗುಲಕ್ಕೆ ಭೇಟಿ ಕೊಟ್ಟ ಸಾರಾ ಅಲಿ ಖಾನ್ appeared first on News First Kannada.