ಬೆಂಗಳೂರು: ಮಗಳು 4 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ಕದ್ದು ಎಸ್ಕೇಪ್ ಆಗಿದ್ದಾಳೆಂದು ತಾಯಿ ಸ್ವತಃ ಮಗಳ ಮೇಲೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿರುವ ವಿಲಕ್ಷಣ ಘಟನೆ ಜೆಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತಾಯಿ ವಿಜಯಲಕ್ಷ್ಮೀ ಎಂಬುವವರು ಮಗಳು ತೇಜವಂತಿ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು 7.5 ಕೆಜಿ ಚಿನ್ನ, ವಜ್ರದ ಆಭರಣಗಳನ್ನು ಕದ್ದು ಪರಾರಿಯಾಗಿದ್ದಾಳೆ ಎಂದು ಆರೋಪಿಸಿದ್ದಾರೆ.
ಏನಿದು ಪ್ರಕರಣ?
ತಾಯಿ ವಿಜಯಲಕ್ಷ್ಮಿ ಇತ್ತೀಚಿಗೆ ಅನಾರೋಗ್ಯದಿಂದ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದರು. ಈ ವೇಳೆ ಚಿನ್ನ ಮತ್ತು ವಜ್ರಾಭರಣಗಳನ್ನು ತನ್ನ ಮನೆಯಲ್ಲಿ ಭದ್ರವಾಗಿಡುವಂತೆ ಸೂಚಿಸಿ ಮಗಳ ಕೈಗಿಟ್ಟಿದ್ದಾರೆ. ಆಸ್ಪತ್ರೆಯಿಂದ ವಾಪಾಸ್ ಬಂದು ನೋಡಿದಾಗ ಓಡವೆಗಳು ಇಲ್ಲದಿರೋದು ಪತ್ತೆಯಾಗಿದೆ. ಚಿನ್ನಾಭರಣಗಳು ಎಲ್ಲಿ ಎಂದು ಕೇಳಲು ಮಗಳಿಗೆ ಪೋನ್ ಮಾಡಿದರೆ ಮೊಬೈಲ್ ಬಂದ್ ಆಗಿದೆಯಂತೆ. ಇದರಿಂದ ಗಾಬರಿಗೊಂಡ ತಾಯಿ ಠಾಣೆ ಮೆಟ್ಟಿಲು ಹತ್ತಿ ಪುತ್ರಿಯ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಇನ್ನು ದೂರು ಪಡೆದು ಎಫ್ಐಆರ್ ದಾಖಲಿಸಿಕೊಂಡ ಪೊಲೀಸರು ಆರೋಪಿ ಮಗಳಿಗಾಗಿ ಶೋಧ ಆರಂಭಿಸಿದ್ದಾರೆ.
The post ತಾಯಿಯ 7.5 ಕೆಜಿ ಚಿನ್ನ, ವಜ್ರಾಭರಣ ಕದ್ದು ಎಸ್ಕೇಪ್ ಆದ ಮಗಳು; ಎಫ್ಐಆರ್ ದಾಖಲು appeared first on News First Kannada.