ತಾಯ್ತನ ಅಂದ್ರೆನೇ ಅದ್ಭುತ. ಒಂದು ಅತ್ಯಮೂಲ್ಯವಾದ ಜೀವವನ್ನ ಧರಣಿಗೆ ಕೊಡುಗೆ ನೀಡಿದ ಕೀರ್ತಿ ಸಲ್ಲುವುದು ತಾಯಿಗೆ. ಹೆಣ್ಣಿಗೆ ಮರು ಜನ್ಮ ಪಡೆಯುವ ಆ ಕ್ಷಣ ಮರೆಯಲಾರದ ಅಮೃತ ಘಳಿಗೆ. ಈಗ ಅದೇ ಮಧುರ ಕ್ಷಣವನ್ನ ಮೇಲಕು ಹಾಕಿದ್ದಾರೆ ಜೊತೆ ಜೊತೆಯಲ್ಲಿ ಖ್ಯಾತಿಯ ನಟಿ ನಯನಾ…
ನಯನಾ ತಮ್ಮ ಇನ್ಸ್ಟಾ ಪೇಜ್ನಲ್ಲಿ ಪ್ರೇಗ್ನನ್ಸಿ ದಿನಗಳ ಬಗ್ಗೆ ಬರೆದುಕೊಂಡಿದ್ದು, ತಾಯಿಯಾಗುವ ಸಮಯದಲ್ಲಿ ಆಗುತ್ತಿದ್ದ ದೈಹಿಕ, ಮಾನಸಿಕ ಬದಲಾವಣೆಗಳನ್ನ ಮನಸಾರೆ ಎಂಜಾಯ್ ಮಾಡುತ್ತಿದ್ದೆ. ಈಗ ಪ್ರಯಾಣ್ 2 ವರ್ಷದವನಾಗಿದ್ದು, ತಾಯ್ತನದ ಪ್ರತಿಯೊಂದು ಕ್ಷಣಗಳನ್ನ ಆನಂದಿಸುತ್ತಿದ್ದಾರಂತೆ….
ಪ್ರೇಗ್ನೆನ್ಸಿ ಟೈಮ್ ಎಲ್ಲರೂ ತುಂಬಾನೇ ಪ್ಯಾಂಪರ್ ಮಾಡುತ್ತಿದ್ದರು. ಕಾಳಜಿಯಿಂದ ನೋಡಿಕೊಳ್ಳುತ್ತಿದ್ದರು. ಈಗ ಅದೆಲ್ಲವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಈಗಲೂ ಪ್ರೀತಿ..ಕಾಳಜಿ ತೊರಿಸ್ತಾರೆ. ಆದ್ರೇ ಆ ಅನುಭವವೇ ಬೇರೆ ಎಂದು ಬರೆದಿದ್ದಾರೆ.
ಸೋಷಿಯಲ್ ಮಿಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ನಟಿ, ಗರ್ಭಾವಸ್ಥೆಯಲ್ಲಿ ತುಂಬಾ ಆಕ್ಟಿವ್ ಆಗಿದ್ದರು. ಅಭಿಮಾನಿಗಳಿಗೆ ತಮ್ಮ ದಿನಚರಿಯ ಬಗ್ಗೆ ಸದಾ ಅಪ್ಡೆಟ್ ನೀಡ್ತಾನೆ ಇರ್ತಾರೆ. ಲೇಬರ್ ವಾರ್ಡ್ಗೆ ಹೋಗುವ ಮುನ್ನ ಕೂಡ ಇನ್ಸ್ಟಾದಲ್ಲಿ ಫೋಟೋ ಹಂಚಿಕೊಂಡಿದ್ದರು ನಯನಾ..
ಲೆಕ್ಚರರ್ ಆಗಿದ್ದ ನಯನಾ ಅವರು ಕೆಲಾದೇವಿಗೆ ಶರಣಾಗಿ ನಟಿಯಾದರು. ಪುಟ್ಟ ಗೌರಿ ಮದುವೆ ಧಾರಾವಾಹಿ ಮೂಲಕ ಅಭಿನಯ ಪ್ರಾರಂಭಿಸಿದ ನಯನಾ ಆರಂಭದಲ್ಲಿ ಹಿಮಾ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಕಾರಣಾಂತರಗಳಿಂದ ಆ ಪಾತ್ರವನ್ನ ನಟಿ ನಮ್ರತಾ ಗೌಡ ನಿರ್ವಹಿಸಿದರು.
ನಂತರ ಅವರು ಸತ್ಯಂ ಶಿವಂ ಸುಂದರಂ, ಮನೆದೇವ್ರು, ಇಂತಿ ನಿಮ್ಮ ಆಶಾ ಸೇರಿದಂತೆ ಅನೇಕ ಸೀರಿಯಲ್ಗಳಲ್ಲಿ ಕಾಣಿಸಿಕೊಂಡರು. ಸದ್ಯ ನಯನಾ ಜೊತೆ ಜೊತೆಯಲಿ ಸೀರಿಯಲ್ನ ಮಾನ್ಸಿ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ.