‘ತಾರೆ ಜಮೀನ್​ ಪರ್​’ ಸಿನಿಮಾದಲ್ಲಿ ನಟಿಸಿದ್ದ ಆ ಬಾಲಕ ಈಗ ಹೇಗಿದಾರೆ ನೋಡಿ | Here Is what Darsheel Safary A Taare Zameen Par Co star doing now


‘ತಾರೆ ಜಮೀನ್​ ಪರ್​’ ಸಿನಿಮಾದಲ್ಲಿ ನಟಿಸಿದ್ದ ಆ ಬಾಲಕ ಈಗ ಹೇಗಿದಾರೆ ನೋಡಿ

ದರ್ಶೀಲ್​

ಆಮಿರ್ ಖಾನ್​ (Aamir Khan) ನಟನೆಯ ‘ತಾರೆ ಜಮೀನ್​ ಪರ್​’ (Taare Zameen Par) ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್​ ಆಗಿತ್ತು. ಈ ಸಿನಿಮಾ ಸಾಕಷ್ಟು ಜನರಿಗೆ ತುಂಬಾನೇ ಇಷ್ಟವಾದ ಚಿತ್ರಗಳಲ್ಲಿ ಒಂದು. ಈಗಲೂ ಈ ಸಿನಿಮಾವನ್ನು ಇಷ್ಟಪಡುವವರು ಸಾಕಷ್ಟು ಜನರಿದ್ದಾರೆ. ಈ ಸಿನಿಮಾದಲ್ಲಿ ಬಾಲಕನ ಪಾತ್ರ ಒಂದು ಬರುತ್ತದೆ. ಅದನ್ನು ದರ್ಶೀಲ್​ ಸಫಾರಿ (Darsheel Safary) ನಿರ್ವಹಿಸಿದ್ದರು. ಡಿಸ್ಲೆಕ್ಸಿಯಾ ಸಮಸ್ಯೆಯಿಂದ ಬಳಲುವ ಹುಡುಗನಾಗಿ ದರ್ಶೀಲ್​ ಕಾಣಿಸಿಕೊಂಡಿದ್ದರು. ಅವರು ನಿರ್ವಹಿಸಿದ್ದ ಪಾತ್ರ ಜನಮನ್ನಣೆ ಪಡೆದುಕೊಂಡಿತ್ತು. ಸಿನಿಮಾ ಹಿಟ್​ ಆಗೋಕೆ ಅವರು ಮಾಡಿದ್ದ ಪಾತ್ರ ಕೂಡ ತುಂಬಾನೇ ಕೊಡುಗೆ ನೀಡಿತ್ತು. ದರ್ಶೀಲ್​ ಬಾಲ ನಟನಾಗಿ ಕೆಲ ಸಿನಿಮಾಗಳಲ್ಲಿ ನಟಿಸಿದ್ದರು. ಬಾಲನಟನಾಗಿ ಅವರು ನಟಿಸಿದ ಕೊನೆಯ ಸಿನಿಮಾ ಸುಷ್ಮಿತಾ ಸೇನ್​ ಮಗಳು ರೇನೀ ಸೇನ್ ಚಿತ್ರ​ ‘ಸುಟ್ಟಾಬಾಝಿ’. ಹಾಗಾದರೆ ಅವರು ಈಗ ಹೇಗಿದ್ದಾರೆ? ಏನು ಮಾಡುತ್ತಿದ್ದಾರೆ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ದರ್ಶೀಲ್​ ಈಗ ಬೆಳೆದು ದೊಡ್ಡವರಾಗಿದ್ದಾರೆ. ಅವರಿಗೆ ಈಗ 23 ವರ್ಷ ವಯಸ್ಸು. ಅವರ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಈಗ ಅವರು ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದಾರೆ. ‘ನಾನು ನಟಿಸಿದ್ದ ‘ತಾರೆ ಜಮೀನ್​ ಪರ್​’ ಸಿನಿಮಾ  ನನ್ನ ಜೀವನವನ್ನು ಕೊಂಚ ಬದಲಾಯಿಸಿತು. ತರಗತಿಯಲ್ಲಿ ಎಲ್ಲರೂ ನನ್ನ ಬಗ್ಗೆಯೇ ಮಾತನಾಡುತ್ತಿದ್ದರು’ ಎಂದಿದ್ದಾರೆ ದರ್ಶೀಲ್​. ಅವರು ರಂಗಭೂಮಿಯಲ್ಲಿ ಹೆಚ್ಚು ಆ್ಯಕ್ಟೀವ್​ ಆಗಿದ್ದಾರೆ.

ಬಾಲ ನಟನಾಗಿ ಯಶಸ್ಸು ಗಳಿಸಿದ ನಂತರ ಹೀರೋ ಆಗಿ ಮಿಂಚಿದ ಅನೇಕರಿದ್ದಾರೆ. ಬಾಲ ನಟನಾಗಿ ಗುರುತಿಸಿಕೊಂಡರೆ ಮುಂದೆ ಹೀರೋ ಆಗೋಕೆ ಸಹಕಾರಿಯಾಗುತ್ತದೆ. ಆದರೆ, ದರ್ಶಿಲ್​  ‘ತಾರೇ ಜಮೀನ್​ ಪರ್​’ ಸಿನಿಮಾ ತಂದುಕೊಟ್ಟ ಯಶಸ್ಸನ್ನು ಅವರು ಸರಿಯಾಗಿ ಬಳಕೆ ಮಾಡಿಕೊಂಡಿಲ್ಲ ಎಂಬ ಅಭಿಪ್ರಾಯವನ್ನು ಕೆಲವರು ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಚಿತ್ರರಂಗಕ್ಕೆ ಬರುತ್ತಾರಾ ಅನ್ನೋದು ಸದ್ಯದ ಕುತೂಹಲ.

ಇದನ್ನೂ ಓದಿ: ‘ಫಸ್ಟ್​ ನೈಟ್​ನಲ್ಲಿ ಎಲ್ಲರೂ ಏನ್​ ಮಾಡ್ತಾರೋ ನಾವು ಅದನ್ನೇ ಮಾಡಿದ್ದು’; ರಚಿತಾ ರಾಮ್​

ಆಮಿರ್​ ಖಾನ್ ಜತೆ ಮಗನ ವಿಷಯ ಮಾತಾಡುತ್ತ ಭಾವುಕರಾದ ನಾಗಾರ್ಜುನ; ಅಲ್ಲಿ ನಡೆದ ಮಾತುಕತೆ ಏನು?

TV9 Kannada


Leave a Reply

Your email address will not be published. Required fields are marked *