ತಾಲಿಬಾನಿಗಳ ವಿಪರೀತ ಹಸ್ತಕ್ಷೇಪ; ಕಾಬೂಲ್​​ನಿಂದ ಬರುತ್ತಿದ್ದ ವಿಮಾನಗಳ ಹಾರಾಟ ಸ್ಥಗಿತಗೊಳಿಸಿದ ಪಾಕ್​ ಇಂಟರ್​ನ್ಯಾಶನಲ್​ ಏರ್​ಲೈನ್ಸ್​ | Pakistan International Airlines suspends flights from Kabul

ತಾಲಿಬಾನಿಗಳ ವಿಪರೀತ ಹಸ್ತಕ್ಷೇಪ; ಕಾಬೂಲ್​​ನಿಂದ ಬರುತ್ತಿದ್ದ ವಿಮಾನಗಳ ಹಾರಾಟ ಸ್ಥಗಿತಗೊಳಿಸಿದ ಪಾಕ್​ ಇಂಟರ್​ನ್ಯಾಶನಲ್​ ಏರ್​ಲೈನ್ಸ್​

ಸಾಂಕೇತಿಕ ಚಿತ್ರ

ಕಾಬೂಲ್​​ನಿಂದ ಪಾಕಿಸ್ತಾನಕ್ಕೆ ಬರುತ್ತಿದ್ದ ಮತ್ತು ಇಲ್ಲಿಂದ ಕಾಬೂಲ್​​ಗೆ ಹೋಗುತ್ತಿದ್ದ ಎಲ್ಲ ವಿಮಾನಗಳ ಹಾರಾಟವನ್ನೂ ಸ್ಥಗಿತಗೊಳಿಸುವುದಾಗಿ ಪಾಕಿಸ್ತಾನ ಅಂತಾರಾಷ್ಟ್ರೀಯ ವಿಮಾನಯಾನ (PIA) ಇಂದು ಹೇಳಿದೆ.  ಹಾಗೇ, ತಾಲಿಬಾನಿಗಳ ಮಿತಿಮೀರಿದ ಹಸ್ತಕ್ಷೇಪ, ಅನಿಯಂತ್ರಿತ ನಿಯಮ ಬದಲಾವಣೆ, ಮತ್ತು ಅಲ್ಲಿನ ಸಿಬ್ಬಂದಿಯ ಬೆದರಿಕೆ, ವಿಪರೀತ ಎನ್ನಿಸುವಷ್ಟು ಕಟ್ಟುನಿಟ್ಟಿನ ನಿಯಮಗಳೇ ಇದಕ್ಕೆ ಕಾರಣ ಎಂದು ಪಾಕಿಸ್ತಾನ ಹೇಳಿಕೊಂಡಿದೆ. 

ಅಫ್ಘಾನಿಸ್ತಾನದ ಅತಿದೊಡ್ಡ ಖಾಸಗಿ ವಾಹಕವಾದ ಕಾಮ್​ ಏರ್​ ಮತ್ತು ಪಿಐಎ​ (ಪಾಕಿಸ್ತಾನ ಅಂತಾರಾಷ್ಟ್ರೀಯ ವಿಮಾನಯಾನ)ಗೆ ಇತ್ತೀಚೆಗಷ್ಟೇ ತಾಲಿಬಾನ್​ ಒಂದು ಎಚ್ಚರಿಕೆ ನೀಡಿದೆ. ‘ನೀವು ವಿಮಾನ ಪ್ರಯಾಣದ ಟಿಕೆಟ್​ ದರ ವಿಪರೀತವಾಗಿದೆ. ಈ ದರ ಅಫ್ಘಾನಿಸ್ತಾನದ ಬಹುತೇಕ ಜನರ ಕೈಗೆಟಕುತ್ತಿಲ್ಲ. ನೀವದನ್ನು ಕಡಿತಗೊಳಿಸಲು ಒಪ್ಪಿಕೊಳ್ಳದೆ ಹೋದರೆ, ನಿಮ್ಮ ಅಫ್ಘಾನ್​ ವಿಮಾನ ಕಾರ್ಯಾಚರಣೆಗೆ ನಿರ್ಬಂಧ ಹೇರುತ್ತೇವೆ’ ಎಂದು ಹೇಳಿತ್ತು.

ಕಾಬೂಲ್​ ಏರ್​ಪೋರ್ಟ್​​ನಿಂದ ಸದ್ಯ ನಿಯಮಿತವಾಗಿ ಕಾರ್ಯಾಚರಣೆ ನಡೆಸುತ್ತಿದ್ದ ಏಕೈಕ ಸಂಸ್ಥೆಯೆಂದರೆ ಅದು ಪಿಐಎ ಮಾತ್ರ ಆಗಿತ್ತು. ಅದು ಚಾರ್ಟರ್ಡ್​ ವಿಮಾನಗಳ ಹಾರಾಟ ನಡೆಸುತ್ತಿತ್ತು. ಅಂದರೆ ವೇಳಾಪಟ್ಟಿಗೆ ಅನುಸಾರವಾಗಿ ಯಾವುದೇ ವಿಮಾನಗಳೂ ಹಾರಾಟ ನಡೆಸುವುದಿಲ್ಲ. ಕೆಲವು ಅಂತಾರಾಷ್ಟ್ರೀಯ ಸಂಸ್ಥೆಗಳು, ಮಿಷನ್​​ಗಳ ಮನವಿಯ ಮೇರೆಗೆ ತಾವು ವಿಮಾನ ಹಾರಾಟ ನಡೆಸುತ್ತಿರುವುದಾಗಿಯೂ ಪಿಐಎ ಹೇಳಿಕೊಂಡಿತ್ತು. ಇನ್ನು ತಾಲಿಬಾನಿಗಳು ಅಫ್ಘಾನಿಸ್ತಾವನ್ನು ವಶಪಡಿಸಿಕೊಂಡ ಬಳಿಕ ಕಾಬೂಲ್​ ಏರ್​ಪೋರ್ಟ್​​ನಲ್ಲಿ ಉಂಟಾಗಿದ್ದ ಅಸ್ತವ್ಯಸ್ತ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಎಲ್ಲ ದೇಶಗಳ ವಿಮಾನಗಳೂ ಹಾರಾಟ ನಡೆಸಿವೆ. ಆ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ಬಂದ ಬಳಿಕ, ಅಂದರೆ ಸೆಪ್ಟೆಂಬರ್​ ಮೊದಲ ವಾರದಲ್ಲಿ ಪಾಕಿಸ್ತಾನ ಮತ್ತೆ ಕಾಬೂಲ್​ಗೆ ವಾಣಿಜ್ಯ ವಿಮಾನಗಳ ಹಾರಾಟ ಶುರುಮಾಡಿತ್ತು.

ಇದನ್ನೂ ಓದಿ: ಕ್ಲಾಸ್ ತಪ್ಪಿಸಿಕೊಂಡಿದ್ದಕ್ಕೆ  ವಿದ್ಯಾರ್ಥಿಗೆ ಕ್ರೂರವಾಗಿ ಥಳಿಸಿದ ಶಿಕ್ಷಕ; ಅಮಾನವೀಯ ವರ್ತನೆ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ

ವಕೀಲರು ಬದಲಾದರೂ ಆರ್ಯನ್​ ಖಾನ್​ಗೆ ಇಲ್ಲ ಜಾಮೀನು; ಅ.20ಕ್ಕೆ ವಿಚಾರಣೆ ಮುಂದೂಡಿಕೆ

 

TV9 Kannada

Leave a comment

Your email address will not be published. Required fields are marked *