ತಾಲಿಬಾನ್​ಗೆ ಸಂದೇಶ ರವಾನಿಸಲು ಆಫ್ಘನ್​ ಕುರಿತು ಸಭೆ ಆಯೋಜನೆ: ಸಭೆಯಿಂದ ಹೊರಗಾದ ಪಾಕ್​-ಚೀನಾ ಜೋಡಿ! | India lead NSA level dialogue on Afghanistan what is the message to Kabul


ತಾಲಿಬಾನ್​ಗೆ ಸಂದೇಶ ರವಾನಿಸಲು ಆಫ್ಘನ್​ ಕುರಿತು ಸಭೆ ಆಯೋಜನೆ: ಸಭೆಯಿಂದ ಹೊರಗಾದ ಪಾಕ್​-ಚೀನಾ ಜೋಡಿ!

ಅಫ್ಘಾನಿಸ್ತಾನ ಕುರಿತು ಸಭೆ ಆಯೋಜಿಸಿದ ಭಾರತ: ಸಭೆಯಿಂದ ಹೊರಗುಳಿದ ಪಾಕಿಸ್ತಾನ, ಚೀನಾ!

ದೆಹಲಿ: ಅಶಾಂತಿಯ ನೆಲೆಗೂಡಾಗಿರುವ ಅಫ್ಘಾನಿಸ್ತಾನದ ಕುರಿತು ಚರ್ಚಿಸಲು ಭಾರತ ಸಭೆಯೊಂದನ್ನು ಆಯೋಜಿಸಿದೆ. ಆದರೆ ಅಫ್ಘಾನಿಸ್ತಾನದ ಮಿತ್ರ ರಾಷ್ಟ್ರಗಳು ಎಂದು ಗುರುತಿಸಿಕೊಂಡಿರುವ ಚೀನಾ ಮತ್ತು ಪಾಕಿಸ್ತಾನ ಭಾರತದ ಸಭೆಯಿಂದ ಹೊರಗುಳಿದಿವೆ. ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಟ್ಟದ ಸಭೆಯನ್ನು ದೆಹಲಿಯಲ್ಲಿ ಏರ್ಪಡಿಸಲಾಗಿದೆ. ಭಾರತದ NSA ಅಜಿತ್ ದೋವಲ್ (National Security Advisor Ajit Kumar Doval KC) ಸಭೆಯ ನೇತೃತ್ವ ವಹಿಸಿದ್ದಾರೆ. ತಾಲೀಬಾನ್​ ಪ್ರೇರಿತ (Taliban) ಭಯೋತ್ಪಾದನೆ, ಮಾದಕ ವಸ್ತು ಕಳ್ಳಸಾಗಣೆ ಬೆದರಿಕೆ ಹಿನ್ನೆಲೆಯಲ್ಲಿ ಭಯೋತ್ಪಾದನೆ ಕುಕೃತ್ಯಗಳನ್ನು ಎದುರಿಸಲು ಸಹಕಾರ ನೀಡುವಂತೆ ಕೋರಿ ಸಭೆ ಕರೆಯಲಾಗಿದೆ.

ಅಪ್ಘಾನಿಸ್ತಾನ ಸಂಬಂಧ ನಾಳೆ ಪ್ರಾದೇಶಿಕ ಭದ್ರತಾ ಸಭೆಯೊಂದೂ ನಡೆಯಲಿದೆ. ನಾಳಿನ ಸಭೆಯಲ್ಲಿ ಕಜಕಿಸ್ತಾನ್, ಕಿರ್ಗಿಸ್ತಾನ್, ತಜಕಿಸ್ತಾನ್, ತುರ್ಕಮೆನಿಸ್ತಾನ್, ಉಜ್ಬೇಕಿಸ್ತಾನ್ ಅಧಿಕಾರಿಗಳು ಭಾಗಿಯಾಗಲಿದ್ದಾರೆ. ರಷ್ಯಾ ಮತ್ತು ಇರಾನ್‌ನ ಪ್ರತಿನಿಧಿಗಳು ಕೂಡ ಸಭೆಯಲ್ಲಿ ಭಾಗವಹಿಸಲಿದ್ದಾರೆ.

( India lead NSA level dialogue on Afghanistan what is the message to Kabul)

TV9 Kannada


Leave a Reply

Your email address will not be published.